November 21, 2024

Newsnap Kannada

The World at your finger tips!

suicide , crime , death note

FSL officer Shruti committed suicide; Sorry - Deathnote for Ex husband ಎಫ್​ಎಸ್​​ಎಲ್​ ಅಧಿಕಾರಿ ಶೃತಿ ಆತ್ಮಹತ್ಯೆ; ಕ್ಷಮಿಸಿ - ವಿಚ್ಛೇದಿತ ಪತಿ ಹೆಸರಿಗೆ ಡೆತ್​ನೋಟ್

ಎಫ್​ಎಸ್​​ಎಲ್​ ಅಧಿಕಾರಿ ಶೃತಿ ಆತ್ಮಹತ್ಯೆ; ಕ್ಷಮಿಸಿ – ವಿಚ್ಛೇದಿತ ಪತಿ ಹೆಸರಿಗೆ ಡೆತ್​ನೋಟ್

Spread the love

ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿ ಶೃತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಡಿವಾಳ ಬಳಿ ಅಪಾರ್ಟ್​ಮೆಂಟ್​ವೊಂದರಲ್ಲಿ ಈ ಪ್ರಕರಣ ನಡೆದಿದೆ, ಸ್ಥಳದಲ್ಲಿ ಡೆತ್​ನೋಟ್ ಕೂಡ ಪತ್ತೆಯಾಗಿದೆ. ಅದರಲ್ಲಿ ಕ್ಷಮೆಯನ್ನೂ ಕೋರಲಾಗಿದೆ.ಇದನ್ನು ಓದಿ –ಕುಂಭಮೇಳ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಿ – ಅಧಿಕಾರಿಗಳಿಗೆ ಡಿಸಿ ಅಶ್ವತಿ ಸೂಚನೆ

ಎಫ್‌ಎಸ್​ಎಲ್​ ಅಧಿಕಾರಿ ಶ್ರುತಿ ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ. ಈಕೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್‌ಮೆಂಟ್​​ನಲ್ಲಿ ನೇಣು ಬಿಗಿದುಕೊಂಡಿದ್ದರು. ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ, ತಡವಾಗಿ ಬೆಳಕಿಗೆ ಬಂದಿದೆ.

ಈಕೆ ಇತ್ತೀಚೆಗೆ ವಿಚ್ಛೇದನ ಪಡೆದು ಪತಿಯಿಂದ ದೂರವಿದ್ದರು. ಆದರೆ ತನ್ನನ್ನು ಕ್ಷಮಿಸುವಂತೆ ಡೆತ್​ನೋಟ್​ ಮೂಲಕ ವಿಚ್ಛೇದಿತ ಪತಿಯಲ್ಲಿ ಕೋರಿಕೊಂಡಿದ್ದಾರೆ. ಜೊತೆಗೆ ಪಾಲಕರಲ್ಲೂ ಕ್ಷಮೆ ಕೋರಿದ್ದಾರೆ. ಅಲ್ಲದೆ ನನ್ನ ಸಾವಿಗೆ ನಾನೇ ಕಾರಣ ಎಂದೂ ಬರೆದುಕೊಂಡಿದ್ದಾರೆ.

ಈಕೆ ವಿಚ್ಛೇದನದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Copyright © All rights reserved Newsnap | Newsever by AF themes.
error: Content is protected !!