December 19, 2024

Newsnap Kannada

The World at your finger tips!

kricket 4

ಏಷ್ಯಾ T 20 ಕಪ್ – ಭಾರತಕ್ಕೆ ಮೂರು ಸವಾಲುಗಳು : ನಾಳೆ ಪಾಕ್ ವಿರುದ್ದ ಪಂದ್ಯ

Spread the love

ಏಷ್ಯಾಕಪ್​​​ ಲೀಗ್​​ ಹಂತದಲ್ಲಿ ಟೀಮ್​ ಇಂಡಿಯಾ ಪಾಕ್​​​, ಹಾಂಗ್​ಕಾಂಗ್​ ವಿರುದ್ಧ ಗೆದ್ದು ಸೂಪರ್​​​-4 ಹಂತಕ್ಕೆ ಕಾಲಿಟ್ಟು ಸೂಪರ್​​​-4 ಹಂತದಲ್ಲಿರುವ ಭಾರತಕ್ಕೆ ಮೂರು ದೊಡ್ಡ ಸವಾಲುಗಳು ಎದುರಾಗಿವೆ.

ಇಂದಿನಿಂದ ಶುರುವಾಗುವ ಸೂಪರ್​​-4ನಲ್ಲಿ ಕಾದಾಟಕ್ಕೆ ಟೀಮ್​ ಇಂಡಿಯಾ, ಪಾಕಿಸ್ತಾನ, ಆಫ್ಘಾನಿಸ್ತಾನ, ಶ್ರೀಲಂಕಾ ರೆಡಿಯಾಗಿವೆ. ಆದರೆ ಟೀಮ್​ ಇಂಡಿಯಾದ ಪ್ರತಿಹೆಜ್ಜೆ ಕೂಡ ಅಗ್ನಿಪರೀಕ್ಷೆಯಲ್ಲಿ ಸಾಗಬೇಕಿದೆ. 5 ದಿನಗಳಲ್ಲಿ 3 ದೊಡ್ಡ ಸವಾಲುಗಳನ್ನು ಎದುರಿಸಲು ಭಾರತ, ಸಜ್ಜಾಗಬೇಕಿದೆ.

ಸೆ. 4 ರಂದು ಮತ್ತೆ ಪಾಕ್ ವಿರುದ್ದ ಪಂದ್ಯ

ಸೆಪ್ಟೆಂಬರ್​​ 4ರಂದು ಮತ್ತೊಮ್ಮೆ ಪಾಕ್​ ವಿರುದ್ಧ, ಸೆಪ್ಟೆಂಬರ್​ 6ರಂದು ಶ್ರೀಲಂಕಾ, ಸೆಪ್ಟೆಂಬರ್​​​ 8ರಂದು ಆಫ್ಘನ್​ ಭಾರತಕ್ಕೆ ಎದುರಾಳಿಯಾಗಿದೆ. ಹಾಗಾಗಿ ಇಲ್ಲಿ ಯಾವುದೇ ಕಾರಣಕ್ಕೂ ಮೈಮರೆಯುವಂತಿಲ್ಲ. ಒಂದು ವೇಳೆ ತಪ್ಪುಗಳನ್ನ ಮಾಡಿದ್ದೇ ಆದ್ರೆ, ದಾಖಲೆಯ 8ನೇ ಟ್ರೋಫಿ ಕನಸು ನನಾಸೋಗಿಲ್ಲ. ಹಾಗೆಯೇ T20 ವಿಶ್ವಕಪ್ ದೃಷ್ಟಿಯಿಂದಲೂ ತಂಡಕ್ಕೆ ಪ್ರಮುಖವಾದ್ದದ್ದು.

Copyright © All rights reserved Newsnap | Newsever by AF themes.
error: Content is protected !!