January 29, 2026

Newsnap Kannada

The World at your finger tips!

kajol

ಗೌತಮ್ ನೊಂದಿಗೆ ಸಪ್ತಪದಿ ತುಳಿದ ಕಾಜಲ್

Spread the love

ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಕಾಜಲ್ ಅಗರ್ವಾಲ್ ಬಹುಕಾಲದ ಗೆಳೆಯ ಗೌತಮ್ ಕಿಚಲು ಜೊತೆ ಹಸೆಮಣೆ ಏರಿದ್ದಾರೆ. ನಿನ್ನೆ (ಅಕ್ಟೋಬರ್ 31) ಸಂಜೆ ಮುಂಬೈನ ತಾಜ್ ಮಹಲ್ ಪ್ಯಾಲೆಸ್ ಹೋಟೆಲ್ ನಲ್ಲಿ ನಡೆದ ಸರಳ ಮದುವೆ ಸಮಾರಂಭದಲ್ಲಿ ಗೌತಮ್ ಖ್ಯಾತ ನಟಿ ಕಾಜಲ್ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ.

ಕಾಜಲ್ ಮತ್ತು ಗೌತಮ್ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಾಜಲ್ ದಂಪತಿಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರಿಂದ ಶುಭಾಶಯ ತಿಳಿಸುತ್ತಿದ್ದಾರೆ.

kajol1

ಕಾಜಲ್ ಮದುವೆಗೆ ಕೆಲವೇ ಕೆಲವು ಮಂದಿ ಹಾಜರಾಗಿ ನವಜೋಡಿಗೆ ಶುಭಹಾರೈಸಿದ್ದಾರೆ. ಕುಟುಂಬದವರು, ಸ್ನೇಹಿತರು ಮತ್ತು ತೀರಾ ಆಪ್ತರು ಮಾತ್ರ ಭಾಗಿಯಾಗಿದ್ದಾರೆ. ಕೊರೊನಾ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಬಂಧಗಳ ಮಿತಿಯಲ್ಲೇ ಮದುವೆ ಸಮಾರಂಭ ಮಾಡಿ ಮುಗಿಸಿದ್ದಾರೆ.

ಮದುವೆ ನಂತರವೂ ಅಭಿನಯ ಮುಂದುವರೆಸುವುದಾಗಿ ಹೇಳಿರುವ ಕಾಜಲ್ ಈಗಾಗಲೇ ವೆಬ್ ಸೀರಿಸ್ ಲೋಕಕ್ಕೆ ಕಾಲಿಟ್ಟಿದ್ದಾರೆ. ಜೊತೆಗೆ ಕಮಲ್ ಹಾಸನ್ ಅಭಿನಯದ ಇಂಡಿಯನ್-2 ಸಿನಿಮಾ ಹಾಗೂ ತೆಲುಗಿನ ಆಚಾರ್ಯದಲ್ಲೂ ಕಾಜಲ್ ಬ್ಯುಸಿಯಾಗಿದ್ದಾರೆ. ಹೀಗಾಗಿ ಹನಿಮೂನ್ ಪ್ರೋಗ್ರಾಮ್ ಸಧ್ಯಕ್ಕೆ ರದ್ದು ಮಾಡಿದ್ದಾರೆ.

error: Content is protected !!