December 20, 2024

Newsnap Kannada

The World at your finger tips!

9a0aebfa d043 4f64 96d2 8dfb0c8bf6e6

ಚಲುವಿನ ತಾರೆ ರಮ್ಯಾ ಪ್ರತ್ಯಕ್ಷ : ಪೋಟೊ ಹಂಚಿಕೊಂಡ ರಮ್ಯಾ

Spread the love

ಮೋಹಕ ತಾರೆ ನಟಿ ರಮ್ಯಾ ಚಿತ್ರರಂಗ ದಿಂದ ಅಂತರ ಕಾಯ್ದುಕೊಂಡು ಐದು ವರ್ಷಕ್ಕಿಂತ ಹೆಚ್ಚಾಯಿತು. ರಾಜಕೀಯ ದಿಂದಲೂ ಸಾಕಷ್ಟು ಅಂತರ ಕಾಯ್ದುಕೊಂಡ ರಮ್ಯಾ ಈಗಲೂ ಬೇಡಿಕೆ ನಟಿಯಂತೆ! ರಾಜಕೀಯಕ್ಕೂ ಈಕೆ ಈಗಲೂ ಕ್ವೀನ್. ಆದರೆ ಈಗ ಕಾಣದಂತೆ ಮಾಯವಾಗಿದ್ದಾಳೆ.

ನವೆಂಬರ್ 30 ಕ್ಕೆ 38 ನೇ ವರ್ಷಕ್ಕೆ ಕಾಲಿಡುವ ರಮ್ಯಾ ಹುಟ್ಟು ಹಬ್ಬ ಆಚರಿಸಲು ಅಭಿಮಾನಿಗಳು ಸಿದ್ದತೆ
ಮಾಡುತ್ತಿದ್ದಾರೆ. ಈಗಲೂ ರಮ್ಯಾ ಮೇಲಿನ ಪ್ರೀತಿ- ಅಭಿಮಾನ ಮಾತ್ರ ಕನ್ನಡ ಸಿನಿ ಪ್ರೇಕ್ಷಕರಿಗೆ ಕಮ್ಮಿ ಆಗಿಲ್ಲ.

2c08bae7 36f7 40c0 8de6 d633032cdd30

ರಾಜಕೀಯವಾಗಿ ರಮ್ಯಾ ಏನೇ ಆಗಿರಬಹುದು. ಅವರೊಬ್ಬ ನಟಿ ಅಂತ ಬಂದ್ರೆ, ಇಂಡಸ್ಟ್ರಿಗೆ ಈಗ ವಾಪಸ್ ಬಂದರೂ ಅದ್ಧೂರಿ ಸ್ವಾಗತ ಸಿಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರೂ, ಸಿನಿ ಜಗತ್ತಿನ ನೆನಪುಗಳನ್ನು ಮಾತ್ರ ರಮ್ಯಾ ಮರೆತಿಲ್ಲ. ಅದಕ್ಕೆ ತಾಜಾ ಉದಾಹರಣೆ ರಮ್ಯಾ ಹಂಚಿಕೊಂಡಿರುವ ಚೊಚ್ಚಲ ಚಿತ್ರದ ಮೊದಲ ಫೋಟೋಶೂಟ್.

ರಮ್ಯಾ ನಟಿಸಿದ ಮೊದಲ ಸಿನಿಮಾ ಅಭಿ. ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ನಾಯಕರಾಗಿದ್ದರು. ಈ ಸಿನಿಮಾದ ಸೆಟ್‌ನಲ್ಲಿ ಕ್ಲಿಕ್ಕಿಸಿದ್ದ ಫೋಟೋವೊಂದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ರಮ್ಯಾ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ರಮ್ಯಾ ಹಂಚಿಕೊಂಡಿರುವ ಈ ಫೋಟೋಗೆ ಸಾವಿರಾರು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ”ಯಾರೇ ಇರಲಿ, ಯಾರೇ ಬರಲಿ ನಿನ್ನ ರೇಂಜಿಗೆ ಯಾರಿಲ್ಲ…” ಎಂದು ಹೇಳುತ್ತಿದ್ದಾರೆ. ಕನ್ನಡ ಇಂಡಸ್ಟ್ರಿಗೆ ರಮ್ಯಾ ಒಬ್ಬರೇ, ಈಗಲೂ ರಮ್ಯಾ ವಾಪಸ್ ಆದ್ರೆ ನಂಬರ್ ವನ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!