ಚಿತ್ರರಂಗದಲ್ಲಿ ಬಹುಬೇಡಿಕೆ ನಟಿ ಬಹುಭಾಷಾ ನಟಿ ತ್ರಿಶಾ ಚಿತ್ರೋದ್ಯಮಕ್ಕೆ ವಿದಾಯ ಹೇಳಿ ರಾಜಕೀಯಕ್ಕೆ ಎಂಟ್ರಿ ಕೊಡುವ ಸಿದ್ಧತೆಯಲ್ಲಿ ಇದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಸೇರಿ ರಾಜಕೀಯವಾಗಿ ಬೆಳೆಯುವ ಇಚ್ಛೆ ತೋರುತ್ತಿದ್ದಾರಂತೆ. ನಟಿಯ ಈ ನಿರ್ಧಾರದ ಹಿಂದೆ ನಟ ವಿಜಯ್ ಬೆಂಬಲ ಇದೆ ಎನ್ನಲಾಗಿದೆ.
ತಮಿಳು, ಕನ್ನಡ, ತೆಲುಗು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರೋ ತ್ರಿಶಾ, ಮಣಿಶರ್ಮಾ ನಿರ್ದೇಶದನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರಾಜಕೀಯದಲ್ಲಿ ಎಂಜಿಆರ್, ಜಯಲಲಿತಾ ರೀತಿಯಲ್ಲೇ ಯಶಸ್ಸು ಕಾಣುವ ಕನಸ್ಸನ್ನು ತ್ರಿಶಾ ಹೊಂದಿದ್ದಾರೆ ಎನ್ನಲಾಗಿದೆ.
ತ್ರಿಶಾ ನಟನೆಯ ಪೊನ್ನಿನ್ ಸೆಲ್ವನ್ ಹಾಗೂ ಸತುರಂಗ ವಟ್ಟೈ ಚಿತ್ರಗಳು ಸೆಪ್ಟೆಂಬರ್ 30 ಹಾಗೂ ಅಕ್ಟೋಬರ್ 7 ರಂದು ತೆರೆ ಕಾಣಲಿವೆ.
ಅಲ್ಲದೇ ಮಲಯಾಳಂನ ರಾಮ್ ಹಾಗೂ ತಮಿಳಿನ ದಿ ರೋಡ್ ಚಿತ್ರದ ಶೂಟಿಂಗ್ನಲ್ಲಿಯೂ ತ್ರಿಶಾ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗಳು ಶೂಟಿಂಗ್ ಮುಗಿಯುತ್ತಿದ್ದಂತೆ ರಾಜಕೀಯ ರಂಗಕ್ಕೆ ಪ್ರವೇಶ ಮಾಡಲಿದ್ದಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿವೆ.
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ
- ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ
- ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ