ರಾಜರಾಜೇಶ್ವರಿ ನಗರ ವಿಧಾನಸಭೆ ಉಪ ಚುನಾವಣೆಯ ಕಣ ಬಾರಿ ಕುತೂಹಲ ಕೆರಳಿಸಿದೆ.
ಬಿಜೆಪಿ ಅಭ್ಯರ್ಥಿ ಮುನಿರತ್ನ ಮತ್ತು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ನಡುವೆ ನೇರಾ ಹಣಾಹಣಿ ಇದೆ. ಪ್ರಚಾರದ ಕಣಕ್ಕೆ ಈಗ ತಾರಾಮೆರಗು ಬಂದಿದೆ.
ಇತ್ತೀಚಿಗಷ್ಟೆ ಮುನಿರತ್ನ ಪರ ನಟಿ ಶ್ರುತಿ ಪ್ರಚಾರ ಮಾಡಿದ್ದರು. ಬಳಿಕ ಬಹುಭಾಷಾ ನಟಿ ಖುಷ್ಬೂ ಪ್ರಚಾರ ಮಾಡಿದ್ದರು. ಇದೀಗ, ಆರ್ ಆರ್ ನಗರ ಕುರುಕ್ಷೇತ್ರ ಅಖಾಡಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂಟ್ರಿಯಾಗುತ್ತಿದ್ದಾರೆ. ಶುಕ್ರವಾರ ಬೆಳಗ್ಗೆಯಿಂದ ರಾಜರಾಜೇಶ್ವರಿ ನಗರದಲ್ಲಿ ದರ್ಶನ್ ಅಬ್ಬರದ ಪ್ರಚಾರ ಆರಂಬಿಸಿದರು.
ಸ್ವತಃ ಮುನಿರತ್ನ ಅವರೇ ಹೇಳಿರುವ ಪ್ರಕಾರ, ಇಂದು ಬೆಳಗ್ಗೆಯಿಂದ ರಾತ್ರಿವರೆಗೂ ಆರ್ ಆರ್ ನಗರದ ಎಲ್ಲಾ ವಾರ್ಡ್ ಗಳಲ್ಲೂ ದರ್ಶನ್ ಪ್ರಚಾರ ಮಾಡಲಿದ್ದಾರೆ.
ದರ್ಶನ್ ಮತ್ತು ಮುನಿರತ್ನ ಅವರ ಸ್ನೇಹ ಎಂತಹದ್ದು, ಮಂಡ್ಯ ಚುನಾವಣೆಯ ಮರೆತುಹೋಯಿತೆ ಎಂಬ ಮಾತುಗಳು ಚರ್ಚೆಯಲ್ಲಿದೆ. ಆದ್ರೆ, ವೈಯಕ್ತಿಕವಾಗಿ ಮುನಿರತ್ನ ಮತ್ತು ದರ್ಶನ್ ನಡುವೆ ಉತ್ತಮ ಬಾಂಧವ್ಯವಿದೆ. ಇಬ್ಬರ ಸ್ನೇಹ ಇದಕ್ಕೆ ಕಾರಣ ಎನ್ನಲಾಗಿದೆ.
More Stories
ಮೈಸೂರಲ್ಲಿ ಹೊಸ ವರ್ಷಾಚರಣೆಗೆ ಪೊಲೀಸ್ ಮಾರ್ಗಸೂಚಿ ಜಾರಿ
KSDL ನೌಕರ ಕೈಯಲ್ಲಿ ಡೆತ್ ನೋಟ್ ಹಿಡಿದು ಆತ್ಮಹತ್ಯೆ: ಕೆಲಸದ ಒತ್ತಡವೇ ಕಾರಣ?
ಕೆಎಎಸ್ , ಸರ್ಕಾರಿ ಉದ್ಯೋಗ ಪಾಸ್ ಮಾಡಿಸೋ ಹೆಸರಿನಲ್ಲಿ ಲಕ್ಷಾಂತರ ವಂಚನೆ: ಆರೋಪಿ ಬಂಧನ