2019ರ ನೆರೆ ವಿಮೆ ಪಾವತಿಗೂ ಗ್ರಹಣ : 5 ಲಕ್ಷ ರೈತರು ಸಂಕಷ್ಟ ದಲ್ಲಿ

Team Newsnap
2 Min Read
Pay Farmer Abhiyan from Mandya Farmers: Pay Rs 4500 per ton of sugarcane - farmers demand ಮಂಡ್ಯ ರೈತರಿಂದಲೂ ಪೇ ಫಾರ್ಮರ್ ಅಭಿಯಾನ : ಟನ್ ಕಬ್ಬಿಗೆ 4500 ರು ಕೊಡಿ - ರೈತರ ಒತ್ತಾಯ

2019ರಲ್ಲಿ ಕರ್ನಾಟಕದಲ್ಲಾದ ವಿನಾಶಕಾರಿ ಪ್ರವಾಹದ ವಿಮೆಯನ್ನು ಸರ್ಕಾರ ರೈತರಿಗೆ ಇದುವರೆಗೂ ನೀಡದೇ ತಡೆಹಿಡಿದಿದೆ. ಇದರಿಂದ ರೈತರು ಪೇಚಾಟಕ್ಕೆ ಸಿಲುಕಿದ್ದಾರೆ. ಪ್ರವಾಹವಾಗಿ ಒಂದು ವರ್ಷ ಕಳೆದಿದೆ. ಆದರೆ ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಕಳೆದ ವರ್ಷ ಸಂಭವಿಸಿದ ಬೆಳೆ ನಷ್ಟಕ್ಕೆ ವಿಮಾ ರಕ್ಷಣೆಯನ್ನು ಪಡೆಯಲು ರಾಜ್ಯದ ರೈತರು ಇನ್ನೂ ಪೇಚಾಡುತ್ತಿದ್ದಾರೆ.

ಸರ್ಕಾರದ ಅಂಕಿ ಅಂಶಗಳು ಮತ್ತು ವರದಿಗಳ ಪ್ರಕಾರ, 2019 ರ ಪ್ರವಾಹದಲ್ಲಿ 4.93 ಲಕ್ಷ ರೈತರ ಬೆಳೆ ನಷ್ಟಕ್ಕೀಡಾಗಿತ್ತು. ಈ ಎಲ್ಲ ರೈತರು ಬೆಳೆ ನಷ್ಟಕ್ಕೆ ವಿಮಾ ಹಕ್ಕುಗಳನ್ನು ಪಡೆಯುವ ಅರ್ಹತೆಯನ್ನು ಹೊಂದಿದ್ದರು. ಇದರ ಜೊತೆಯಲ್ಲಿ, 2016-2017 ಮತ್ತು 2018-2019ನೇ ಸಾಲಿಗೆ 61,000 ಕ್ಕೂ ಹೆಚ್ಚು ಕ್ಲೈಮ್‌ಗಳಿವೆ. ಈ ಎಲ್ಲ‌ ರೈತರ ಒಟ್ಟು ಕ್ಲೇಮ್‌ಗಳ 11.07 ಕೋಟಿ ರೂಪಾಯಿಗಳಾಗಿವೆ. ಆದರೆ ಈ ವಿಮೆಯು ಸರ್ಕಾರದ ಹಲವಾರು ಹಂತಗಳಲ್ಲಿ ಇನ್ನೂ ಇತ್ಯರ್ಥ ವಾಗಬೇಕಿದೆ.

ವಿಮಾ ಹಕ್ಕುಗಳಿಗಾಗಿ ಪುನಃ ಸ್ಥಾಪಿಸಲಾದ ಹಣವನ್ನು ಬಳಸಿಕೊಳ್ಳುವಂತೆ ರೈತ ಸಂಘಟನೆಗಳು ಸರ್ಕಾರವನ್ನು ದೂಷಿಸುತ್ತಿದೆ. ವಿಮೆ ನೀಡುವಿಕೆಯಲ್ಲಿನ‌‌ ವಿಳಂಬವು ಪ್ರವಾಹದಿಂದ ಉಂಟಾದ ತೊಂದರೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ವಿಮೆಯನ್ನು ಶೀಘ್ರವಾಗಿ ವಿತರಿಸುವ ಬಗ್ಗೆ ಅಧಿಕಾರಿಗಳೇನೋ ಹೇಳಿದ್ದಾರೆ. ಮೂಲಗಳ ಪ್ರಕಾರ, ವಿಮೆ ನೀಡುವಿಕೆಯ ವಿಳಂಬಕ್ಕೆ ಪ್ರಮುಖ ಕಾರಣವೆಂದರೆ ಬೆಳೆ ಸಮೀಕ್ಷೆಯ ಮಾಹಿತಿಯನ್ನು ರಾಜ್ಯ ಸರ್ಕಾರವು ತನ್ನ ಬೆಳೆ ವಿಮಾ ಪೋರ್ಟಲ್ ಆಗಿರುವ ‘ಸಂರಕ್ಷಣೆ’ ಯೊಂದಿಗೆ ನೆರೆ ಪರಿಹಾರದ ಮಾಹಿತಿಯನ್ನು ಜೋಡಿಸುವಲ್ಲಿ ತಡಮಾಡಿರುವುದೇ ಆಗಿದೆ.

2019 ರಲ್ಲಿ ಸಂಭವಿಸಿದ ಖಾರಿಫ್ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ, ಒಟ್ಟು ಮೊತ್ತ 524.62 ಕೋಟಿ ರೂಪಾಯಿಗಳನ್ನು‌ ನಷ್ಟ ಹೊಂದಿದ ರೈತರಿಗೆ ನೀಡಬೇಕಿತ್ತು. ಇದರಲ್ಲಿ ಸರ್ಕಾರವು 221.57 ರೂಪಾಯಿ ಕೋಟಿ ಮೊತ್ತವನ್ನು ಜಾರಿಮಾಡಿದ್ದು, 303.04‌ ಕೋಟಿ ರೂಪಾಯಿ ಇನ್ನೂ ಬಾಕಿ ಉಳಿದಿದೆ.

ರೈತರು, ಹಲವಾರು ನಿರ್ದೇಶನ, ಮಾರ್ಗದರ್ಶನಗಳಲ್ಲಿ, ಬೇರೆ ಬೆಳೆಗೆ ಬಿತ್ತನೆ ಮಾಡಿದ್ದರಿಂದ ಬೆಳೆ‌ ನಷ್ಟ ಸಂಭವಿಸಿದಾಗ ಬೆಳೆ ಸಮೀಕ್ಷೆಯಲ್ಲಿ‌ ತೊಂದರೆಯಾಗಿತ್ತು. ಸಮಸ್ಯೆಯನ್ನು ಅರಿತ ಸರ್ಕಾರ ಮಿಶ್ರ ಬೆಳೆ, ಅಂತರ ಬೆಳೆ ಮತ್ತು ಇತರ ಸಮಸ್ಯೆಗಳಿರುವ ಪ್ರಕರಣಗಳ ಜೊತೆಗೆ ವಿಮಾ ಕಂಪನಿಗಳಿಂದ ವಿನಾಯಿತಿ ನೀಡುವಂತೆ ಕೇಳಿತ್ತು ಎಂದು ಮೂಲಗಳು ಹೇಳಿವೆ.

ವಿಮಾ ಹಕ್ಕುಗಳ ಸಮಯೋಚಿತ ಬಿಡುಗಡೆಯನ್ನು ಖಾತರಿಪಡಿಸುವ ಸಲುವಾಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾ ಕರ್ನಾಟಕ ರೈತ ಸೇನೆಯ ಪ್ರತಿನಿಧಿ ವೀರೇಶ್ ಸೊಬರದಮಠ ‘ಕಳೆದ ವರ್ಷ ಪ್ರವಾಹದ ಸಂದರ್ಭದಲ್ಲಿ ನಷ್ಟ ಅನುಭವಿಸಿದ ಕೃಷ್ಣ ಜಲಾನಯನ ಪ್ರದೇಶದ ಅನೇಕ ರೈತರು ಈ ಯೋಜನೆಯಡಿ ಇನ್ನೂ ವಿಮಾ ರಕ್ಷಣೆಯನ್ನು ಪಡೆಯಲಿಲ್ಲ’ ಎಂದು ಹೇಳಿದರು. ವಿಮೆ ಹಣ ಜಾರಿಯಾಗುವದರಲ್ಲಿ ಆಗಿರುವ ವಿಳಂಬಕ್ಕೆ ಸರ್ಕಾರವೇ ಕಾರಣ ಎಂದು ಅವರು ದೂಷಿಸಿದರು.

ಇದೇ ವೇಳೆಯಲ್ಲಿ ಕೃಷಿ ಇಲಾಖೆಯ ನಿರ್ದೇಶಕ ಬಿ.ವೈ.ಶ್ರೀನಿವಾಸ್ ಅವರು ಹಲವಾರು ಹಂತಗಳಲ್ಲಿ ವಿಮೆಯ ಬಿಡುಗಡೆಯ ಬಗ್ಗೆ ಭರವಸೆ ನೀಡಿದರು. ತಾಂತ್ರಿಕ ಕಾರಣಗಳಿಂದ ವಿಮೆಯು ವಿಳಂಬವಾಗಿದೆ ಎಂದು ಅವರು‌ ಹೇಳಿದರು.

Share This Article
Leave a comment