December 19, 2024

Newsnap Kannada

The World at your finger tips!

murder,teacher,assult

murder of teacher; Nanjangud Municipal Council BJP member & 3 more arrested ಶಿಕ್ಷಕಿ ಬರ್ಬರ ಹತ್ಯೆ; ನಂಜನಗೂಡು ನಗರಸಭೆ BJP ಸದಸ್ಯೆ ಸೇರಿ ನಾಲ್ವರ ಬಂಧನ

ಶಿಕ್ಷಕಿ ಬರ್ಬರ ಹತ್ಯೆ; ನಂಜನಗೂಡು ನಗರಸಭೆ BJP ಸದಸ್ಯೆ ಸೇರಿ ನಾಲ್ವರ ಬಂಧನ

Spread the love

ತನ್ನ ಪತಿಯೊಂದಿಗೆ ಇದ್ದ ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಹಿಂದಿ ಶಿಕ್ಷಕಿಯನ್ನು ಹತ್ಯೆ ಮಾಡಿ ಮುಚ್ಚಿಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಂಜನಗೂಡು ನಗರಸಭೆ ಬಿಜೆಪಿ ಸದಸ್ಯೆ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ

ಗಾಯತ್ರಿ ಮುರುಗೇಶ್ ಬಂಧಿತ ನಗರಸಭೆ ಸದಸ್ಯೆ, ನಂಜನಗೂಡು ಹಿಂದಿ ಶಿಕ್ಷಕಿ ಸುಲೋಚನ ಎಂಬುವವರನ್ನು ಸುಪಾರಿಕೊಟ್ಟು ಗಾಯತ್ರಿ ಕೊಲೆ ಮಾಡಿಸಿದ್ದರೆಂಬ ಆರೋಪ ಕೇಳಿಬಂದಿದೆ.ಇದನ್ನು ಓದಿ –ಅಮಿತ್ ಶಾ- ಯಡಿಯೂರಪ್ಪ ಭೇಟಿ; ಕುತೂಹಲ ಕೆರಳಿಸಿದ ಉಭಯ ನಾಯಕರ ಚರ್ಚೆ

6 ತಿಂಗಳ ಹಿಂದೆ ನಂಜನಗೂಡಿನ ಮೊರಾರ್ಜಿ ವಸತಿ ಶಾಲಾ ಶಿಕ್ಷಕಿ ಸುಲೋಚನ, ನಂಜನಗೂಡು ಮಹದೇಶ್ವರ ಬಡಾವಣೆಯಲ್ಲಿ ಕೊಲೆಯಾಗಿದ್ದರು. ಸುಲೋಚನ ಪತಿ 7 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಅಂದಿನಿಂದ ಸುಲೋಚನ ಒಂಟಿಯಾಗಿ ವಾಸವಾಗಿದ್ದರು. ನಗರಸಭೆ ಸದಸ್ಯೆ ಗಾಯತ್ರಿ ಪತಿ ಮುರುಗೇಶ್, ಸುಲೋಚನ ಅಕ್ರಮ ಸಂಬಂಧ ಹೊಂದಿದ್ದನು ಎನ್ನಲಾಗಿದೆ.

ಪತಿಯೊಂದಿಗೆ ಶಿಕ್ಷಕಿ ಅಕ್ರಮ ಸಂಬಂಧ ಹೊಂದಿರುವ ಕಾರಣಕ್ಕಾಗಿ ಗಾಯತ್ರಿ ಸುಪಾರಿ ಕೊಟ್ಟು ಶಿಕ್ಷಕಿಯನ್ನು ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ಸದಸ್ಯೆ ಸೇರಿದಂತೆ ನಾಲ್ಕು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!