December 19, 2024

Newsnap Kannada

The World at your finger tips!

accident crime

ಸರಗೂರು ಬಳಿ ಸೇತುವೆಗೆ ಕಾರು ಗುದ್ದಿ ನಾಲೆಗೆ ಬಿದ್ದ ಮೂವರು ವಕೀಲರು- ಇಬ್ಬರು ನಾಪತ್ತೆ

Spread the love

ಸೇತುವೆಗೆ ಗುದ್ದಿ ಮೂವರು ವಕೀಲರು ನಾಲೆಗೆ ಬಿದ್ದಿರುವ ಘಟನೆ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಸಾಗರೆ ಗ್ರಾಮದ ಬಳಿ ಈ ಘಟನೆ ನಡೆದಿದೆ.

ಕಬಿನಿ ಡ್ಯಾಂ ವೀಕ್ಷಣೆ ಮಾಡಿ ವಾಪಾಸ್ ಆಗುವ ವೇಳೆ ಗ್ರಾಮದ ಬಳಿಯಿದ್ದ ಸೇತುವೆಗೆ ಕಾರು ಗುದ್ದಿದೆ. ಇದನ್ನು ಓದಿ – IT ರಿಟರ್ನ್ ಸಲ್ಲಿಸಲು ನಾಳೆ ಕೊನೆ ದಿನ : ತಪ್ಪಿದರೆ ದಂಡ

ಈ ಘಟನೆಯಲ್ಲಿ ವಕೀಲರಾದ ಅಶೋಕ್, ದಿನೇಶ್ ಹಾಗೂ ಗಿರೀಶ್ ಸಂಚಾರ ಎಂಬುವವರು ನಾಲೆಗೆ ಬಿದ್ದಿದ್ದಾರೆ.

ಸ್ಥಳೀಯರು ಎಸೆದ ಹಗ್ಗ ಹಿಡಿದು ವಕೀಲ ಅಶೋಕ್ ಬಚಾವ್ ಆಗಿದ್ದಾರೆ. ಆದರೆ, ಇನ್ನಿಬ್ಬರು ವಕೀಲರು ನೀರಿನಲ್ಲಿ ತೇಲಿ ಹೋಗಿದ್ದಾರೆ. ಇನ್ನು ಈ ಘಟನೆಗೆ ಕುಡಿದು ಕಾರನ್ನು ಚಾಲನೆ ಮಾಡಿರಬಹುದು ಎನ್ನುವ ಅನುಮಾನ ಶುರುವಾಗಿದೆ. ಘಟನಾ ಸ್ಥಳಕ್ಕಾಗಮಿಸಿದ ಸರಗೂರು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!