December 22, 2024

Newsnap Kannada

The World at your finger tips!

01962c22 3db3 4bc8 8991 8c6112c0cc7f

ರಚಿತಾ ರಾಮ್ ಹೊಸ ಚಿತ್ರ ‘ಪಂಕಜ ಕಸ್ತೂರಿ’

Spread the love

ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್ ಮತ್ತೊಂದು ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ರಚಿತಾ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಅಂದ್ಹಾಗೆ ರಚಿತಾ ರಾಮ್ ಹೊಸ ಸಿನಿಮಾಗೆ ಮಯೂರ ರಾಘವೇಂದ್ರ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ನಿರ್ದೇಶಕ ಮಯೂರ ರಾಘವೇಂದ್ರ ಮತ್ತು ರಚಿತಾ ರಾಮ್ ಈ ಮೊದಲು ರಿಷಭ ಪ್ರಿಯ ಎನ್ನುವ ಕಿರುಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಮಯೂರ ನಿರ್ದೇಶನದ ಕಿರುಚಿತ್ರಕ್ಕೆ ರಚಿತಾ ರಾಮ್ ಬಂಡವಾಳ ಹೂಡಿದ್ದರು. ಇದೀಗ ಸಿನಿಮಾ ಮೂಲಕ ಇಬ್ಬರು ಮತ್ತೆ ಒಂದಾಗುತ್ತಿದ್ದಾರೆ.

ವಿಶೇಷ ಎಂದರೆ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಚಿತ್ರಕ್ಕೆ ಪಂಕಜ ಕಸ್ತೂರಿ ಎಂದು ಟೈಟಲ್ ಇಡಲಾಗಿದೆ. ದಸರಾ ಹಬ್ಬದ ವಿಶೇಷ ಸಂದರ್ಶನದಲ್ಲಿ ನಟಿ ರಚಿತಾ ರಾಮ್ ಚಿತ್ರದ ಟೈಟಲ್ ರಿವೀಲ್ ಮಾಡಿದ್ದಾರೆ.

ಸದ್ಯ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಉಳಿದಂತೆ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ. ಚಿತ್ರದಲ್ಲಿ ಯಾರೆಲ್ಲ ನಟಸಲಿದ್ದಾರೆ, ತಾಂತ್ರಿಕ ವರ್ಗದ ಬಗ್ಗೆ ಸದ್ಯದಲ್ಲೇ ಮಾಹಿತಿ ನೀಡುವ ಸಾಧ್ಯತೆ ಇದೆ

Copyright © All rights reserved Newsnap | Newsever by AF themes.
error: Content is protected !!