December 23, 2024

Newsnap Kannada

The World at your finger tips!

congress,high court,lokayukta

shock for Congress: High Court order to cancel ACB - Lokyukta gets power again

ಅರಸೀಕೆರೆ ನಗರಸಭೆಯ ಏಳು ಸದಸ್ಯರು ಅನರ್ಹಗೊಳಿಸಿದ ಹೈಕೋರ್ಟ್ – ಡಿಸಿ ತೀರ್ಪಿಗೆ ಜಯ

Spread the love

ಹಾಸನ ಜಿಲ್ಲೆಯ ಅರಸೀಕೆರೆ ನಗರಸಭೆಯಲ್ಲಿ ಬಂಡಾಯವೆದ್ದು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದ ಏಳು ಸದಸ್ಯರನ್ನು ಜಿಲ್ಲಾಧಿಕಾರಿ ಆರ್.ಗಿರೀಶ್ ಅನರ್ಹಗೊಳಿಸಿದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ‍ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿ ಜಿಲ್ಲಾಧಿಕಾರಿ ತೀರ್ಪುನ್ನು ಎತ್ತಿ ಹಿಡಿದಿದೆ.

ಅರಸೀಕೆರೆ ನಗರಸಭೆ ಒಂದನೇ ವಾರ್ಡ್ ಸದಸ್ಯ ಹರ್ಷವರ್ಧನ್ ರಾಜ್, 25ನೇ ವಾರ್ಡ್‍ನ ಸದಸ್ಯ ಬಿ.ಎನ್.ವಿದ್ಯಾಧರ್, 19ನೇ ವಾರ್ಡ್‍ನ ಸದಸ್ಯ ದರ್ಶನ್, 18ನೇ ವಾರ್ಡ್‍ನ ಸದಸ್ಯೆ ಕವಿತಾದೇವಿ, 28ನೇ ವಾರ್ಡ್‍ನ ಸದಸ್ಯೆ ಆಯೇಶಾ ಸಿಕಂದರ್, 9ನೇ ವಾರ್ಡ್‍ನ ಸದಸ್ಯ ಚಂದ್ರಶೇಖರ್ ಜೆಡಿಎಸ್‍ನಿಂದ ಗೆದ್ದಿದ್ದರು. ಆನಂತರದ ಬೆಳವಣಿಗೆಯಲ್ಲಿ ಜೆಡಿಎಸ್‍ನಿಂದ ಬಂಡಾಯವೆದ್ದಿದ್ದರು.ರಾಜ್ಯಸಭಾ ಸದಸ್ಯರಾಗಿ ವೀರೇಂದ್ರ ಹೆಗ್ಗಡೆ ಕನ್ನಡದಲ್ಲೇ ಪ್ರಮಾಣವಚನ

ಬಹುಮತವಿಲ್ಲದಿದ್ದರೂ ಮೀಸಲಾತಿ ಆಧಾರದ ಮೇಲೆ ಅಧಿಕಾರ ಹಿಡಿದಿದ್ದ ಬಿಜೆಪಿಗೆ ಆರು ನಗರಸಭೆ ಸದಸ್ಯರು ಬೆಂಬಲ ನೀಡಿದ್ದರು. ಇವರ ಜೊತೆಗೆ 15ನೇ ವಾರ್ಡ್‍ನಿಂದ ಪಕ್ಷೇತರ ಸದಸ್ಯನಾಗಿ ಆಯ್ಕೆಯಾಗಿದ್ದ ಪುಟ್ಟಸ್ವಾಮಿ ಮೊದಲು ಜೆಡಿಎಸ್‍ಗೆ ಬೆಂಬಲ ಘೋಷಿಸಿದ್ದರು. ನಂತರ ಜೆಡಿಎಸ್‍ಗೆ ನೀಡಿದ್ದ ಬೆಂಬಲ ವಾಪಸ್ ಪಡೆದು ಆರು ಮಂದಿ ಸದಸ್ಯರ ಜೊತೆ ಪುಟ್ಟಸ್ವಾಮಿ ಕೂಡ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದರು.

ಏಳು ಮಂದಿ ಸದಸ್ಯರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದು, ಇವರ ಸದಸ್ಯತ್ವವನ್ನು ಅನರ್ಹಗೊಳಿಸುವಂತೆ ಅರಸೀಕೆರೆ ಜೆಡಿಎಸ್ ತಾಲೂಕು ಅಧ್ಯಕ್ಷ ಬಿಳಿಚೌಡಯ್ಯ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರಿಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ಡಿಸಿ ಆರ್.ಗಿರೀಶ್ ಏಳು ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿ ತೀರ್ಪು ನೀಡಿದ್ದರು.

ಸುದೀರ್ಘ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯ ಅರ್ಜಿ ವಜಾ ಮಾಡಿ ನಗರಸಭೆ ಸದಸ್ಯರನ್ನು ಅನರ್ಹಗೊಳಿಸಿದೆ.

Copyright © All rights reserved Newsnap | Newsever by AF themes.
error: Content is protected !!