December 23, 2024

Newsnap Kannada

The World at your finger tips!

drupathi murmu

ರಾಷ್ಟ್ರಪತಿ ಚುನಾವಣೆ : ದ್ರೌಪತಿ ಮುರ್ಮು 540 ಮತ ಪಡೆದು ಭಾರಿ ಮುನ್ನಡೆ

Spread the love

ರಾಷ್ಟ್ರಪತಿ ಚುನಾವಣೆ ಮತ ಎಣಿಕೆ ಕಾರ್ಯ ಸಂಸತ್ ಭವನದಲ್ಲಿ ಬಿರುಸಾಗಿ ಸಾಗಿದೆ. ಇದುವರೆಗೂ ನಡೆದ ಮತ ಎಣಿಕೆಯಲ್ಲಿ ಎನ್‌ಡಿಎ ಬೆಂಬಲಿತ ಅಭ್ಯರ್ಥಿ ಬುಡಕಟ್ಟು ಸಮುದಾಯದ ನಾಯಕಿ ದ್ರೌಪದಿ ಮುರ್ಮು ಭಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ವಿರೋಧ ಪಕ್ಷಗಳ ಬೆಂಬಲಿತ ಅಭ್ಯರ್ಥಿ ಟಿಎಂಸಿ ನಾಯಕ ಯಶವಂತ್ ಸಿನ್ಹಾ ಭಾರೀ ಹಿನ್ನಡೆ ಅನುಭವಿಸಿದ್ದಾರೆ.

ದ್ರೌಪದಿ ಮುರ್ಮು 540 ಮತ​​ ಪಡೆದುಕೊಂಡು ಭಾರೀ ಮುನ್ನಡೆ ಸಾಧಿಸಿದ್ದಾರೆ. ಮುರ್ಮು ಎದುರು ಕಣದಲ್ಲಿರುವ ಯಶವಂತ್ ಸಿನ್ಹಾ ಕೇವಲ 208 ಮತ ಪಡೆದುಕೊಂಡಿದ್ದಾರೆ. ದ್ರೌಪದಿ ಮುರ್ಮು ಪಡೆದ 540 ಮತಗಳ ಮೌಲ್ಯ 3,78,000 ಆಗಿದ್ದು, ಯಶವಂತ್ ಸಿನ್ಹಾ 208 ಮತಗಳ ವ್ಯಾಲ್ಯೂ 1,45,600 ಆಗಿದೆ.
ಇನ್ನು, ಎನ್​​ಡಿಎ ಬೆಂಬಲಿತ ಅಭ್ಯರ್ಥಿ ದ್ರೌಪದಿ ಮುರ್ಮು ಗೆಲುವು ಬಹುತೇಕ ನಿಚ್ಚಳವಾಗಿದೆ. ರಾಜ್ಯಸಭಾ ಸದಸ್ಯರಾಗಿ ವೀರೇಂದ್ರ ಹೆಗ್ಗಡೆ ಕನ್ನಡದಲ್ಲೇ ಪ್ರಮಾಣವಚನ

ಹೀಗಾಗಿ ಈ ಮುನ್ನವೇ ಮುರ್ಮು ತವರು ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ರಾಯ್‌ರಂಗಪುರ್‌ನಲ್ಲಿ ಸಂಭ್ರಮ ಮನೆ ಮಾಡಿದೆ. ಇದೇ ಮೊದಲ ಬಾರಿಗೆ ಬುಡಕಟ್ಟು ಸಮುದಾಯದ ಮಹಿಳೆ ರಾಷ್ಟ್ರದ ಪರಮೋಚ್ಚ ಸ್ಥಾನ ಅಲಂಕರಿಸುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!