January 4, 2025

Newsnap Kannada

The World at your finger tips!

balaji acter

ಕಿರುತೆರೆಯ ನಟ ಯಲಹಂಕ ಬಾಲಾಜಿ ಇನ್ನಿಲ್ಲ

Spread the love

ಕಿರುತೆರೆಯ ನಟ ಯಲಹಂಕ ಬಾಲಾಜಿ ಕೆಲ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ನಿರ್ದೇಶಕ ಟಿ.ಎನ್. ಸೀತಾರಾಮ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಈ ಸಂಗತಿ ಬರೆದುಕೊಂಡಿದ್ದಾರೆ.

ಸೀತಾರಾಮ್ ಅವರ ಬಹುತೇಕ ಧಾರಾವಾಹಿಗಳಲ್ಲಿ ಬಾಲಾಜಿ ನಟಿಸುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ಕನ್ನಡದ ಅತ್ಯಂತ ಜನಪ್ರಿಯ ಧಾರಾವಾಹಿಗಳಾದ ಮಾಯಾಮೃಗದಿಂದ ಮಗಳು ಜಾನಕಿವರೆಗೂ ಸೀತಾರಾಮ್ ಧಾರಾವಾಹಿಗಳಲ್ಲಿ ಬಾಲಾಜಿ ನಟಿಸಿದ್ದರು.

ಕೆಆರ್ ಎಸ್ ನಲ್ಲಿ ಕಾವೇರಿ ಮಾತೆಗೆ ಬಾಗೀನ ಸಮರ್ಪಿಸಿದ ಸಿಎಂ ಬೊಮ್ಮಾಯಿ

ರಂಗಭೂಮಿ ಮತ್ತು ಚಲನಚಿತ್ರಗಳಲ್ಲೂ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅಗಲಿದ ನಟನಿಗೆ ಕಂಬನಿ ಮಿಡಿದಿರುವ ಸೀತಾರಾಮ್ ‘ಅತ್ಯಂತ ಹೃದಯವಂತ ಗೆಳೆಯ. ಎಲ್ಲಾ ಕಷ್ಟಗಳಲ್ಲೂ, ಸಂತೋಷಗಳಲ್ಲೂ ಜತೆಗೆ ಇರುತ್ತಿದ್ದ ಮನುಷ್ಯ. ಇಡೀ ಬದುಕಿನುದ್ದಕ್ಕೂ ಕಷ್ಟ ಕಂಡಿದ್ದರೂ, ನಗುತ್ತಾ ಬದುಕಿದ ಗೆಳೆಯ.

ಬಾಲಾಜಿ ಇನ್ನಿಲ್ಲ ಎಂದು ನೆನಪಿಸಿಕೊಂಡರೆ ಅಪಾರ ಸಂಕಟವಾಗುತ್ತದೆ’ ಎಂದು ಟಿ.ಎನ್.ಸೀರಾತಾಮ್ ಸ್ಮರಿಸಿಕೊಂಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!