ಮಂಡ್ಯದಲ್ಲಿ ಶುಕ್ರವಾರ ಮಂಡ್ಯ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ನ್ಯೂಸ್ ಸ್ನ್ಯಾಪ್ ವೆಬ್ಸೈಟ್ವೊಂದನ್ನು ಲೋಕಾರ್ಪಣೆ ಮಾಡಿದರು.
ಅಶೋಕ್ ನಗರದಲ್ಲಿ ನೂತನ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾವೆಂಕಟೇಶ್ ಲಿಂಕ್ ಬಿಡುಗಡೆ ಮಾಡುವುದರ ಮೂಲಕ ವೆಬ್ ಸೈಟ್ ಅನ್ನು ಬಿಡುಗಡೆ ಮಾಡಿದರು. ನಂತರ ಮಾತಾಡಿದ ಡಾ ವೆಂಕಟೇಶ್ ಈಗಿನ ಕಾಲದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವ ಕೆಲಸ ಆಗಬೇಕಿದೆ. ಸಕಾರಾತ್ಮಕ ,ಅಭಿವೃದ್ಧಿ ಪರ ಚಿಂತನೆಗಳು ಹೆಚ್ಚಿನ ಪ್ರಮಾಣದಲ್ಲಿ ಹರಡಬೇಕು ಎಂದು ಕರೆ ನೀಡಿದರು.
ಮಾಧ್ಯಮ ತುಂಬಾ ಪ್ರಭಾವದಿಂದ ಕೂಡಿದೆ. ಈ ವ್ಯವಸ್ಥೆಯನ್ನು ಸದ್ಭಳಿಕೆ ಮಾಡಿಕೊಳ್ಳ ಬೇಕು. ಕಾಲಕ್ಕೆ ತಕ್ಕಂತೆ ಬದಲಾವಣೆಯನ್ನು ಅಳವಡಿಸಿಕೊಂಡು ಹೊಸ ವಿಚಾರಗಳನ್ನು ತಿಳಿಸಿಕೊಡುವ ಪ್ರಯತ್ನ ಪ್ರಾಮಾಣಿಕವಾಗಿ ಮಾಡುವಂತಾಗಲಿ ಎಂದು ಹೇಳಿದರು.
ಸರಳ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡರು ಮಾತನಾಡಿ, ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಹೊಸ ಅವಿಷ್ಕಾರ ನಡೆಯುತ್ತಿವೆ. ಇಂತಹ ಅವಕಾಶಗಳನ್ನು ಬಳಕೆ ಮಾಡಿಕೊಂಡು ವಿಶ್ವದಾದ್ಯಂತ ಉತ್ತಮವಾದ ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಮಂಡ್ಯದಿಂದ ಹೊಸದಾಗಿ ಆರಂಭಿಸಿರುವ ನೂತನ ವೆಬ್ ಸೈಟ್ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಕೆ ಸಿ ಮಂಜುನಾಥ್, ಹಿರಿಯ ಪತ್ರಕರ್ತ ಶಿವನಂಜು ಮದ್ದೂರು,
ವಿಕಸನ ಸಂಸ್ಥೆ ನಿರ್ದೇಶಕ ಮಹೇಶ್ ಚಂದ್ರ ಗುರು,
ನ್ಯೂಸ್ ಸ್ನ್ಯಾಪ್ ವೆಬ್ ಸೈಟ್
ಸಂಪಾದಕ ಕೆ.ಎನ್.ರವಿ, ವೆಬ್ ಸೈಟ್ ಉಸ್ತುವಾರಿ ಹಾಗೂ ನಿರ್ವಹಣೆಯ ಮುಖ್ಯಸ್ಥರಾದ ಕೆ ಆರ್ ಅನನ್ಯ ಹಾಗೂ ಕೆ ಆರ್ ಮಿಹಿರ್ ಆಕಾಶ್, ಡಿಸೈನರ್ ಶ್ರೀಧರ್ ಸೇರಿದಂತೆ ಅನೇಕ ಗೆಳೆಯರು ಉಪಸ್ಥಿತರಿದ್ದರು.
More Stories
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್: ಗೃಹಸಚಿವ ಪರಮೇಶ್ವರ್ ದೃಢೀಕರಣ
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ