December 19, 2024

Newsnap Kannada

The World at your finger tips!

daan

ರಾಶಿಗಳಿಗೆ ಅನುಗುಣವಾಗಿ ಗುರು ಪೂರ್ಣಿಮೆಯ ದಿನ ವಿಶೇಷ ದಾನ

Spread the love

ಗುರು ಪೂರ್ಣಿಮಾ (ಹುಣ್ಣಿಮೆಯ) ದಿನ ದಾನಕ್ಕೆ ವಿಶೇಷ ಮಹತ್ವವಿದೆ. ಹಾಗಾದರೆ, ರಾಶಿಗಳಿಗೆ ಅನುಗುಣವಾಗಿ ಗುರು ಪೂರ್ಣಿಮೆಯ ದಿನ ವಿಶೇಷ ದಾನಗಳನ್ನು ಮಾಡಿ ನೀವು ನಿಮ್ಮ ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

ಗುರು ಪೂರ್ಣಿಮಾ ಮಹತ್ವ

  1. ಮೇಷ – ಆಷಾಢ ಹುಣ್ಣಿಮೆಯಂದು ನಿರ್ಗತಿಕರಿಗೆ ಬೆಲ್ಲ, ಕೆಂಪು ಬಣ್ಣದ ಬಟ್ಟೆಗಳನ್ನು ದಾನ ಮಾಡುವುದರಿಂದ ಆರ್ಥಿಕ ಬಿಕ್ಕಟ್ಟು ನಿವಾರಣೆಯಾಗುತ್ತದೆ.
  2. ವೃಷಭ – ಕಲ್ಲು ಸಕ್ಕರೆ ದಾನ ಮಾಡಿ, ಪೂಜೆಯ ಕೊಠಡಿಯಲ್ಲಿ ತುಪ್ಪದ ದೀಪವನ್ನು ಬೆಳಗಿಸಿ.
  3. ಮಿಥುನ – ಹಸುವಿಗೆ ಹಸಿರು ಮೇವು ಹಾಕಿದರೆ ನಿಮಗೆ ಶುಭಫಲಗಳು ಪ್ರಾಪ್ತಿಯಾಗಲಿವೆ. ನೀವು ಹಸಿರು ಬಣ್ಣದ ಹೆಸರು ಬೆಳೆಯನ್ನು ಸಹ ದಾನ ಮಾಡಬಹುದು.
  4. ಕರ್ಕ – ಬಡವರಿಗೆ ಅನ್ನವನ್ನು ದಾನ ಮಾಡುವುದು ಉತ್ತಮ. ಒತ್ತಡವನ್ನು ತೊಡೆದುಹಾಕಲು ಈ ಪರಿಹಾರ ಮಂಗಳಕರ.
  5. ಸಿಂಹ – ಗೋಧಿಯನ್ನು ದಾನ ಮಾಡಿ. ಹೀಗೆ ಮಾಡುವುದರಿಂದ ಗೌರವ, ಪ್ರತಿಷ್ಠೆ ಹೆಚ್ಚಾಗುತ್ತದೆ.
  6. ಕನ್ಯಾ – ಆಹಾರ ಅಥವಾ ದಕ್ಷಿಣೆಯನ್ನು ನೀಡಬೇಕು. ಹಸುವಿಗೆ ಮೇವು ತಿನ್ನಿಸಿ.
  7. ತುಲಾ – ಚಿಕ್ಕ ಮಕ್ಕಳಿಗೆ ಪಾಯಸ ದಾನ ಮಾಡಬೇಕು. ಯಶಸ್ಸು ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.
  8. ವೃಶ್ಚಿಕ – ಮಂಗಗಳಿಗೆ ಬೇಳೆ ಮತ್ತು ಬೆಲ್ಲವನ್ನು ತಿನ್ನಿಸಬೇಕು. ಬಡ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಿದರೆ ಶ್ರೇಯಸ್ಕರ.
  9. ಧನು– ದೇವಸ್ಥಾನದಲ್ಲಿ ಕಡಲೆ ಬೆಳೆ ದಾನ ಮಾಡಿದರೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ.
  10. ಮಕರ – ಹುಣ್ಣಿಮೆಯಂದು ಬಡವರಿಗೆ ಕಂಬಳಿಗಳನ್ನು ಹಂಚುವುದು ಮಂಗಳಕರ. ಹೀಗೆ ಮಾಡುವುದರಿಂದ ಉದ್ಯೋಗದಲ್ಲಿ ಬರುವ ಅಡೆತಡೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.
  11. ಕುಂಭ – ವೃದ್ಧಾಶ್ರಮಕ್ಕೆ ಬಟ್ಟೆ, ಆಹಾರ ಮತ್ತು ಹಣವನ್ನು ದಾನ ಮಾಡಿ.
  12. ಮೀನ – ಬಡವರಿಗೆ ಅರಿಶಿನ ಮತ್ತು ಬೇಳೆ ಹಿಟ್ಟಿನಿಂದ ಮಾಡಿದ ಸಿಹಿತಿಂಡಿಗಳನ್ನು ದಾನ ಮಾಡಿ.
Copyright © All rights reserved Newsnap | Newsever by AF themes.
error: Content is protected !!