January 29, 2026

Newsnap Kannada

The World at your finger tips!

Karnataka , transfer , tehsildar

ತಮ್ಮನ್ನು ಮಾತ್ರ ಬಲಿಪಶು ಮಾಡುವ ರಾಜಕಾರಣಿಗಳ ವಿರುದ್ದ ಪ್ರಧಾನಿ ಮೋದಿಗೆ ಅಧಿಕಾರಿಗಳಿಂದ ಪತ್ರ

Spread the love

ಯಾವುದೇ ಅಕ್ರಮ ನಡೆದ ಸಂದರ್ಭದಲ್ಲಿ ಕೇವಲ ಅಧಿಕಾರಿಗಳನ್ನು ಬಲಿಪಶು ಮಾಡುವ ಕುತಂತ್ರದಲ್ಲಿ ರಾಜಕಾರಣಿಗಳ ಒತ್ತಡ ಮತ್ತು ಕೈವಾಡ ಕೂಡ ಇರುತ್ತದೆ. ಆದರೆ, ತಾವು ಮಾತ್ರ ತೀವ್ರ ಸಾಚಾ ಬಿಂಬಿಸಿಕೊಳ್ಳಲು ರಾಜಕಾರಣಿಗಳ ವಿರುದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲು ಐಎಎಸ್, ಐಪಿಎಸ್ ಅಧಿಕಾರಿಗಳು ತೀರ್ಮಾನಿಸಿದ್ದಾರೆ

ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಅಮೃತ್ ಪಾಲ್ ಮತ್ತು 5 ಲಕ್ಷ ರು ಲಂಚ ಪಡೆದ ಆರೋಪದಡಿ ಬೆಂಗಳೂರು ನಗರದ ಮಾಜಿ ಜಿಲ್ಲಾಧಿಕಾರಿ ಮಂಜುನಾಥ್ ಅವರ ಬಂಧನವಾಗಿದ್ದು ಸರ್ಕಾರದ ವಿರುದ್ಧ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ತಿರುಗಿಬಿದ್ದಿದ್ದಾರೆ.ಇದನ್ನು ಓದಿ –ಬಾದಾಮಿಯ ಕೇರೂರಿನಲ್ಲಿ ನೂಪುರ್ ಶರ್ಮ ವಿವಾದ : ಮೂವರ ಯುವಕರ ಮೇಲೆ ಚಾಕೂವಿನಿಂದ ಇರಿದು ಹಲ್ಲೆ

ಪ್ರಧಾನಿ ಮೋದಿಯವರಿಗೆ ಪತ್ರ ಬರೆಯಲು ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳು ಸಭೆ ಸೇರಿ ಚರ್ಚೆ ನಡೆಸಿದ್ದಾರೆ.

ರಾಜಕಾರಣಿಗಳ ಒತ್ತಡಕ್ಕೆ ತಕ್ಕಂತೆ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಯಾವುದೇ ವಿಭಾಗದಲ್ಲಿ ಅಕ್ರಮ ನಡೆದ ಸಂದರ್ಭದಲ್ಲಿ ರಾಜಕಾರಣಿಗಳು ಒತ್ತಡ ಇರುತ್ತದೆ. ಆದರೆ, ಅಧಿಕಾರಿಗಳನ್ನೇ ಬಲಿಪಶು ಮಾಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಪ್ರಧಾನಿಯವರಿಗೆ ಪತ್ರ ಬರೆಯಲು ಅಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಹೇಳಲಾಗಿದೆ.

error: Content is protected !!