ವೈಮಾನಿಕ ನಿಯಂತ್ರಕ ಡಿಜಿಸಿಎ ಸ್ಪೈಸ್ ಜೆಟ್ ವಿಮಾನ ಸಂಸ್ಥೆಗೆ ಶೋಕಾಸ್ ನೊಟೀಸ್ ಜಾರಿ ಮಾಡಿದೆ.
ಸಂಸ್ಥೆಯ ವಿಮಾನಗಳಲ್ಲಿ 18 ದಿನಗಳಲ್ಲಿ 8 ಬಾರಿ ತಾಂತ್ರಿಕ ದೋಷ ಕಂಡು ಬಂದಿರುವ ಹಿನ್ನೆಲೆಯಲ್ಲಿ ಈ ನೊಟೀಸ್ ನೀಡಲಾಗಿದೆ
ಏರ್ ಕ್ರಾಪ್ಟ್ ನಿಯಮಗಳ ರೂಲ್ 134 ಹಾಗೂ ಷೆಡ್ಯೂಲ್ XI, 1937 ರ ಪ್ರಕಾರ ಸುರಕ್ಷಿತ, ಸಮರ್ಥ ಮತ್ತು ವಿಶ್ವಾಸಾರ್ಹ ವಾಯು ಸೇವೆಗಳನ್ನು ಸ್ಥಾಪಿಸುವುದಕ್ಕೆ ಸ್ಪೈಸ್ ಜೆಟ್ ವಿಫಲವಾಗಿದೆ ಎಂದು ಡಿಜಿಸಿಎ ನೀಡಿರುವ ನೊಟೀಸ್ ನಲ್ಲಿ ಹೇಳಿದೆ. ಇದನ್ನು ಓದಿ – ವೆಸ್ಟ್ ಇಂಡೀಸ್ ತಂಡಕ್ಕೆ ಟೀಂ ಇಂಡಿಯಾ ಪ್ರಕಟ : ಶಿಖರ್ ಧವನ್ ನಾಯಕ – ಕೊಹ್ಲಿ, ರೋಹಿತ್ ಗೆ ವಿಶ್ರಾಂತಿ
ಘಟನೆಯ ಪರಿಶೀಲನೆ ಮೂಲಕ ಆಂತರಿಕ ಸುರಕ್ಷತೆ ಕಳಪೆಯಾಗಿರುವುದು ಹಾಗೂ ಅಸಮರ್ಪಕ ನಿರ್ವಹಣೆ ಕ್ರಮಗಳನ್ನು ತೋರುತ್ತಿದೆ ಎಂದು ಡಿಜಿಸಿಎ ಹೇಳಿದೆ.
ನೊಟೀಸ್ ಗೆ ಪ್ರತಿಕ್ರಿಯೆ ನೀಡುವುದಕ್ಕೆ ವಿಮಾನ ಸಂಸ್ಥೆಗೆ ಮೂರು ವಾರಗಳ ಕಾಲಾವಕಾಶ ನೀಡಲಾಗಿದೆ.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
- ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ
- ಕಾಪರ್ ಏಜ್ ಇನ್ಸ್ಟಿಟ್ಯೂಟ್ ಮಾಲೀಕ ಶರತ್ ಆತ್ಮಹತ್ಯೆ: ಕಾರಣ ನಿಗೂಢ
- 104ರನ್ಗೆ ಆಸ್ಟ್ರೇಲಿಯಾ ಆಲೌಟ್ ,ಬುಮ್ರಾಗೆ 5 ವಿಕೆಟ್
ಕೇಂದ್ರ ಸಚಿವ ಸ್ಥಾನಕ್ಕೆ ಮುಖ್ತಾರ್ ಅಬ್ಬಾಸ್ ನಖ್ವಿ, ಆರ್ಸಿಪಿ ಸಿಂಗ್ ರಾಜೀನಾಮೆ
ಕೇಂದ್ರ ಸಚಿವ ಸ್ಥಾನಕ್ಕೆ ಮುಖ್ತಾರ್ ಅಬ್ಬಾಸ್ ನಖ್ವಿ, ಆರ್ಸಿಪಿ ಸಿಂಗ್ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ
ಕೇಂದ್ರ ಸಚಿವರಾದ ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ಆರ್ಸಿಪಿ ಸಿಂಗ್ ಅವರು ತಮ್ಮ ರಾಜ್ಯಸಭೆಯ ಅವಧಿ ಪೂರ್ಣಗೊಳ್ಳುವ ಒಂದು ದಿನ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ
ಹಿಂದಿನ ದಿನ, ಮೋದಿ ಅವರು ತಮ್ಮ ಅಧಿಕಾರಾವಧಿಯಲ್ಲಿ ದೇಶಕ್ಕೆ ನೀಡಿದ ಕೊಡುಗೆಗಾಗಿ ಕ್ಯಾಬಿನೆಟ್ ಸಭೆಯಲ್ಲಿ ನಖ್ವಿ ಮತ್ತು ಸಿಂಗ್ ಇಬ್ಬರನ್ನೂ ಶ್ಲಾಘಿಸಿದರು, ಇದು ಅವರ ಅಂತಿಮ ಕ್ಯಾಬಿನೆಟ್ ಸಭೆಯಾಗಿದೆ
ರಾಜ್ಯಸಭಾ ಸಂಸದರಾಗಿ ತಮ್ಮ ಅವಧಿ ಗುರುವಾರ ಕೊನೆಗೊಳ್ಳಲಿದ್ದು, ಶುಕ್ರವಾರದಿಂದ ಸಂಸದರ ಹುದ್ದೆ ಮುಕ್ತಾಯವಾಗುವ ಕಾರಣ ಸಾಂವಿಧಾನಿಕ ಹೊಣೆಗಾರಿಕೆ ಅರಿತು ಇಬ್ಬರೂ ಸಚಿವರು ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.
ಬಿಜೆಪಿಯ ಹಿರಿಯ ನಾಯಕರಾಗಿರುವ ನಖ್ವಿ ರಾಜ್ಯಸಭೆಯ ಉಪನಾಯಕರೂ ಆಗಿದ್ದಾರೆ. ಸಿಂಗ್ ಅವರು ಜೆಡಿಯು ಕೋಟಾದಿಂದ ಮೋದಿ ಸಂಪುಟದಲ್ಲಿ ಸಚಿವರಾಗಿದ್ದರು
More Stories
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್: ಗೃಹಸಚಿವ ಪರಮೇಶ್ವರ್ ದೃಢೀಕರಣ