KRSಗೆ 30 ಸಾವಿರ ಕ್ಯೂಸೆಕ್ ಒಳಹರಿವು – ಪ್ರವಾಹದ ಮುನ್ನೆಚ್ಚರಿಕೆ : ಆಣೆಕಟ್ಟೆ ಭರ್ತಿಗೆ 9 ಅಡಿ ಬಾಕಿ

Team Newsnap
1 Min Read

ಕೃಷ್ಣರಾಜಸಾಗರ ಆಣೆಕಟ್ಟೆ(KRS)ಗೆ 30 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿಗೆ 3 ಸಾವಿರಕ್ಕೂ ಅಧಿಕ ನೀರನ್ನು ಬಿಡಲಾಗುತ್ತಿದೆ ಇದರಿಂದ ನೀರಾವರಿ ಅಧಿಕಾರಿಗಳು ಪ್ರವಾಹದ ಮುನ್ನೆಚ್ಚರಿಕೆ ನೀಡಿದ್ದಾರೆ.

WhatsApp Image 2022 07 06 at 8.23.12 PM

ಕೆ.ಆರ್.ಸಾಗರ ಅಣೆಕಟ್ಟೆ :

  • ಗರಿಷ್ಠ ನೀರಿನ ಮಟ್ಟ – 124. 80 ಅಡಿ
  • ಇಂದಿನ ನೀರಿನ ಮಟ್ಟ :115.70 ಅಡಿ
  • ಒಳಹರಿವು : 30,923 ಕ್ಯೂಸೆಕ್
  • ಹೊರಹರಿವು : 3575 ಕ್ಯೂಸೆಕ್
  • ಸಂಗ್ರಹ. : 37.855

ನೀರಾವರಿ ಸಚಿವ ಕಾರಜೋಳ ಮಂಡ್ಯ ಜಿಲ್ಲಾ ಪ್ರವಾಸ

ಜಲ ಸಂಪನ್ಮೂಲ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಎಂ. ಕಾರಜೋಳ ರವರು ಜುಲೈ 07 ರಿಂದ 08 ರವರೆಗೆ ಮಂಡ್ಯ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಇದನ್ನು ಓದಿ – ವೆಸ್ಟ್ ಇಂಡೀಸ್ ತಂಡಕ್ಕೆ ಟೀಂ ಇಂಡಿಯಾ ಪ್ರಕಟ : ಶಿಖರ್ ಧವನ್ ನಾಯಕ

  • ಜುಲೈ 7 ರಂದು ರಾತ್ರಿ 7:30 ಗಂಟೆಗೆ ಮಂಡ್ಯ ಜಿಲ್ಲೆ ಕೆ.ಆರೆ.ಎಸ್ ಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ.
  • ಜುಲೈ 8 ರಂದು ಬೆಳಿಗ್ಗೆ 9 ಗಂಟೆಗೆ ಕೃಷ್ಣರಾಜಸಾಗರ ಜಲಾಶಯದ ತೂಬಿನ ಗೇಟ್‍ಗಳ ಪರಿವೀಕ್ಷಣೆ ಮಾಡಲಿದ್ದಾರೆ.

ನಂತರ ಬೆಳಿಗ್ಗೆ 11 ಗಂಟೆಗೆ ಶ್ರೀರಂಗಪಟ್ಟಣ ತಾಲ್ಲೂಕು ಕೆ.ಆರ್.ಎಸ್ ಹತ್ತಿರ ಇರುವ ಮೊಗರಹಳ್ಳಿ (ಮಂಟಿ) ಕುಸುಮ ಚಂದ್ರಶೇಖರ್ ಕಲ್ಯಾಣ ಮಂಟಪದಲ್ಲಿ ಕೃಷ್ಣರಾಜಸಾಗರ, ಹಾರಂಗಿ, ಕಬಿನಿ ಮತ್ತು ಚಿಕ್ಕಹೊಳೆ ಅಣೆಕಟ್ಟೆಗಳ ನದಿ ಪಾತ್ರದಲ್ಲಿ ಪ್ರವಾಹದ ಸಂದರ್ಭದಲ್ಲಿ ಉಂಟಾಗಬಹುದಾದ ಪ್ರತಿಕೂಲ ಪರಿಣಾಮಗಳ ನಿರ್ವಹಣೆಯ ಕುರಿತು ಪಾಲುದಾರರ ಪಾತ್ರದ ಬಗ್ಗೆ ಅರಿವು ಮೂಡಿಸುವ ಒಂದು ದಿನದ ವಿಚಾರ ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.

KRS

Share This Article
Leave a comment