December 19, 2024

Newsnap Kannada

The World at your finger tips!

car,tree,accident

Tree fell on car:bank manager spot dead #thenewsnap #death #chennai #latestnews #karnataka #accident #kannada_news #bengaluru #mysuru #Namma_mandya #car

ಬೃಹತ್​ ಮರ ಕಾರಿನ ಮೇಲೆ ಬಿದ್ದು ದುರಂತ – ಬ್ಯಾಂಕ್​ ಮ್ಯಾನೇಜರ್ ಸ್ಥಳದಲ್ಲೇ ಸಾವು

Spread the love

ದೈತ್ಯ ಮರವೊಂದು ಚಲಿಸುವ ಕಾರಿನ ಮೇಲೆ ಬಿದ್ದು 57 ವರ್ಷದ ಬ್ಯಾಂಕ್​ ಮ್ಯಾನೇಜರ್ ಸಾವಿಗೀಡಾಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

ವಾಣಿ ಕಬಿಲನ್​ ಇಂಡಿಯನ್​ ಓವರ್​ಸೀಸ್​ ಬ್ಯಾಂಕ್​ ಮ್ಯಾನೇಜರ್​ ಆಗಿ ಸೇವೆ ಸಲ್ಲಿಸುತ್ತಿದ್ದರು. ಪ್ರಸ್ತುತ ಘಟನೆ ಶುಕ್ರವಾರ (ಜೂನ್​ 24) ಸಂಜೆ ಜರುಗಿದೆ. ವಾಣಿ ಮತ್ತು ಅವರ ಸಹೋದರಿ ಚೆನ್ನೈನ ಕೆಕೆ ನಗರದಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಬೃಹತ್​ ಮರ ಕಾರಿನ ಮೇಲೆ ಬಿದ್ದಿದೆ. ತಕ್ಷಣ ವಾಣಿ ಅವರನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ವಾಣಿ ಅವರ ಸಹೋದರಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಇದನ್ನು ಓದಿ –FASTag ಕಳ್ಳರು ಇದ್ದಾರೆ ಹುಷಾರ್ – ಫೇಕ್‌ ವೀಡಿಯೋ ? 

ಸಹೋದರಿಯರು ತಮ್ಮ ಕಾರಿನ ಹಿಂಬದಿಯಲ್ಲಿ ಕುಳಿತಿದ್ದರು. ಕಾರ್ತಿಕ್ ಎಂಬ ವ್ಯಕ್ತಿ ಕಾರು ಚಾಲನೆ ಮಾಡುತ್ತಿದ್ದ. ಲಕ್ಷ್ಮಣ ಸ್ವಾಮಿ ರಸ್ತೆಯಿಂದ ಪಿಟಿ ರಾಜನ್ ರಸ್ತೆ ಕಡೆಗೆ ಹೋಗುತ್ತಿದ್ದರು. ಚಲಿಸುವಾಗಲೇ ಕಾರಿನ ಮೇಲೆ ಬೃಹತ್ ಮರವೊಂದು ಬಿದ್ದಿದೆ. ಇದರಿಂದಾಗಿ ಸಹೋದರಿಯರು ಒಳಗೆ ಸಿಲುಕಿಕೊಂಡರು. ಆದರೆ, ಚಾಲಕ ಕಾರ್ತಿಕ್ ಬದಿಯಲ್ಲಿ ಬಾಗಿಲು ತೆರೆಯಲು ಅವಕಾಶವಿದ್ದ ಕಾರಣ, ಅಪಾಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು. ಆತ ಈಗ ತಲೆಮರೆಸಿಕೊಂಡಿದ್ದಾನೆ. ದಾರಿಹೋಕರು ಮತ್ತು ಸ್ಥಳೀಯ ನಿವಾಸಿಗಳು ಒಟ್ಟಾಗಿ ಮರವನ್ನು ಸ್ಥಳಾಂತರಿಸಿ, ವಾಣಿ ಮತ್ತು ಎಜಿಲರಸಿಯನ್ನು ಕಾರಿನಿಂದ ಹೊರಗೆ ತೆಗೆದರು. ಆದರೆ, ವಾಣಿಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.

ವಾಣಿ ಅವರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಪಘಾತದ ಸಾವಿನ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!