February 20, 2026

Newsnap Kannada

The World at your finger tips!

central government , job , application

ರೈತನ ಮಗನಿಗೆ PSI ಕೆಲಸ – 30 ಲಕ್ಷ ರೂಪಾಯಿ ಪಂಗನಾಮ

Spread the love

ಮಂಡ್ಯ ಜಿಲ್ಲೆಯ ರೈತನೊಬ್ಬ ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ 30 ಲಕ್ಷ ರೂಪಾಯಿ ಹಣ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ನಿಂಗರಾಜು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಾಮನಹಳ್ಳಿ ರೈತ.

ನಿಂಗರಾಜು ಮಗ ಅರುಣ್‌ ಕುಮಾರ್‌ ಪಿಎಸ್‌ಐ ಪರೀಕ್ಷೆ ಬರೆದಿದ್ದನು. ಈ ವೇಳೆ ನಿಂಗರಾಜು ಜತೆ ಆರೋಪಿ ಮಂಜುನಾಥ್‌ ಅಲಿಯಾಸ್‌ ಅಕ್ಷಯ್‌ ಎಂಬಾತ ನನಗೆ ಪ್ರಭಾವಿಗಳ ಪರಿಚಯವಿದೆ. ನಿಮ್ಮ ಮಗನಿಗೆ ನಾನು ಕೆಲಸ ಕೊಡಿಸುತ್ತೇನೆ ಎಂದು ಹೇಳಿದನು.ಇದನ್ನು ಓದಿ –ಅಗ್ನಿಪತ್ ಯೊಜನೆಯ ನೇಮಕಾತಿಗೆ ತೀವ್ರ ವಿರೋಧ : ಮಂಡ್ಯದಲ್ಲಿ – ಪ್ರತಿಭಟನೆ

ಮಂಜುನಾಥ ಎಂಬಾತ 40 ಲಕ್ಷ ಕೊಟ್ರೆ ಪಿಎಸ್‌ಐ ಕೆಲಸ ಕೊಡಿಸುವುದಾಗಿ ರೈತ ನಿಂಗರಾಜು ಜತೆ ಮಾತುಕತೆ ನಡೆಸುತ್ತಾನೆ. ಮಾತು ಕತೆ ಬಳಿಕ 38 ಲಕ್ಷ ಕೊಡುವುದಾಗಿ ರೈತ ನಿಂಗರಾಜು ಒಪ್ಪಿದ್ದಾನೆ. ಆದ ಬಳಿ ತನ್ನ ಬಳಿಯಿದ್ದ ಒಂದೂವರೆ ಎಕರೆ ಜಮೀನು ಮಾರಾಟ ಮಾಡಿ 17ಲಕ್ಷ ವನ್ನು ಬ್ಯಾಂಕ್‌ ಮೂಲಕ ಆರ್‌ಟಿಜಿಎಸ್‌ ಹಾಗೂ 13.25 ಲಕ್ಷ ಕ್ಯಾಶ್‌ ನೀಡಿದ್ದಾನೆ.

ಪಿಎಸ್‌ಐ ಲಿಸ್ಟ್‌ನಲ್ಲಿ ಮಗನ ಹೆಸರು ಬಾರದಿದ್ದಾಗ ರೈತ ಕಂಗಾಲಾಗಿ ಮಂಜುನಾಥ್‌ ಬಳಿ ಹಣವನ್ನು ವಾಪಾಸ್‌ ಕೇಳಿದಾಗ 30ಲಕ್ಷ ನೀಡದೆ ಸಬೂಬು ಮಾತುಗಳಿಂದ ವಂಚಿಸಿದ್ದಾನೆ.

error: Content is protected !!