ಜಗತ್ತಿಗೆ ದೊಡ್ಡ ಪೀಡೆಯಾಗಿ ಕಾಡುತ್ತಿರುವ ಕೊರೊನಾ ವೈರಸ್ ನ ಕಟ್ಟಿಹಾಕಲು ಸಮರೋಪಾದಿಯ ಕಾರ್ಯಗಳು ಚಾಲ್ತಿಯಲ್ಲಿವೆ ಈ ವೇಳೆಯಲ್ಲಿ ಅರಸೀಕೆರೆಯ ಕೋಡಿಮಠ ಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು,
ಮುಂದಿನ ಎರಡು ತಿಂಗಳು ಇನ್ನೂ ಭಯಾನಕ ಸಂಕಷ್ಟ ಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಕೋಡಿಶ್ರೀಗಳು “ಆಶ್ವೀಜ, ಕಾರ್ತಿಕ ಮಾಸಗಳಲ್ಲಿ, ಕೊರೊನಾ ಹಾವಳಿ ಹೆಚ್ಚಾಗಲಿದೆ. ಹಳ್ಳಿಹಳ್ಳಿಗಳಲ್ಲೂ ಕೊರೊನಾ ಸೋಂಕು ಹರಡಲಿದೆ. ಜನರು ಎಚ್ಚರಿಕೆಯಿಂದ ಇರಬೇಕು, ಸರ್ಕಾರದ ಮಾರ್ಗಸೂಚಿ ಪಾಲಿಸುವುದನ್ನು ಜನರು ಮರೆಯಬಾರದು”ಎಂದು ಭವಿಷ್ಯ ನುಡಿದಿದ್ದರು.
ಶ್ರೀಗಳು ನುಡಿದಿರುವ ಆಶ್ವೀಜ, ಕಾರ್ತಿಕ ಮಾಸಗಳಲ್ಲಿ ನಾವಿದ್ದೇವೆ. ಜನರು ದಸರಾ ಸಂಭ್ರಮದಲ್ಲಿದ್ದಾರೆ. ಕಾರ್ತಿಕ ಮಾಸದಲ್ಲಿ ಬರುವ ದೀಪಾವಳಿ ಹಬ್ಬ, ಹತ್ತು ಹಲವು ಜಾತ್ರೆಗಳು ಇನ್ನಷ್ಟೇ ಬರಬೇಕಿದೆ. ಈ ವೇಳೆ ಜನರು ಮೈಮೆರೆಯಬಾರದು ಎನ್ನುವ ಮಾತನ್ನೇ ಶ್ರೀಗಳು ತಿಂಗಳ ಹಿಂದೆ ನುಡಿದಿದ್ದಾರೆ. ಇನ್ನು, ಕೊರೊನಾ ವಿಚಾರದಲ್ಲಿ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸುವುದು ಸಾರ್ವಜನಿಕರಿಗೆ ಅತಿಮುಖ್ಯ.
More Stories
ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )