February 20, 2026

Newsnap Kannada

The World at your finger tips!

police 1

ಮಂಗಳೂರಿನಲ್ಲಿ ಮೂರು ಮಕ್ಕಳನ್ನು ಕೊಂದ ಪಾಪಿ ಅಪ್ಪ : ಪತ್ನಿ ಜೊತೆ ತಾನೂ ಆತ್ಮಹತ್ಯೆಗೆ ಯತ್ನ

Spread the love

ಮೂರು ಮಕ್ಕಳನ್ನು ಕೊಂದು ಪತ್ನಿ ಜೊತೆ ಪತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಗಳೂರು ತಾಲೂಕಿನ ಪದ್ಮ ನೂರು ಗ್ರಾಮದಲ್ಲಿ ಜರುಗಿದೆ

ವಿಜೇತ್ ಶೆಟ್ಟಿಗಾರ್ ಎಂಬ ತಂದೆ ತನ್ನ ಮೂವರು ಮಕ್ಕಳಾದ ರಶ್ಮಿತಾ (14), ಉದಯ್ (11) ಮತ್ತು ದಕ್ಷಿತ್ (4) ಎಂಬುವರನ್ನು ಬಾವಿಗೆ ತಳ್ಳಿ ಕೊಂದು ಹಾಕಿದ್ದಾನೆ

ಇದನ್ನು ಓದಿ H D ಕೋಟೆ BEO ಹಾಗೂ ಕಚೇರಿಯ ಅಧೀಕ್ಷಕ ಸೇರಿ 7 ಸಾವಿರ ರು ಲಂಚ ಸ್ವೀಕಾರ : ACB ಟ್ರ್ಯಾಪ್

ಈ ಬಳಿಕ ಪತ್ನಿಯನ್ನು ಕರೆದುಕೊಂಡು, ಬಾವಿಗೆ ತಳ್ಳಿ ಆತ್ಮಹತ್ಯೆಗೆ ಯತ್ನಿಸಿದ ವೇಳೆಯಲ್ಲಿ ಗ್ರಾಮಸ್ಥರು ಕಂಡು ಗಂಡ-ಹೆಂಡತಿಯನ್ನು ರಕ್ಷಿಸಿದ್ದಾರೆ.

ಈ ಮೊದಲೇ ಬಾವಿಗೆ ತಂದೆ ವಿಜೇತ್ ಶೆಟ್ಟಿಗಾರ್ ತಳ್ಳಿದ್ದರಿಂದ ಮೂವರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಮಂಗಳೂರು ಉತ್ತರ ಎಸಿಪಿ ಮಹೇಶ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು. ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!