ನಾಯಿ ಮತ್ತು ಮನುಷ್ಯನ ನಡುವಿನ ಅವಿನಾಭಾವ ಸಂಬಂಧ ಕುರಿತ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಚಿತ್ರ ಬಾಕ್ಸಾಫೀಸ್‍ನಲ್ಲಿ ಧೂಳೆಬ್ಬೆಸುತ್ತಿದ್ದಂತೆ ಜನರಲ್ಲಿ ಸಾಕುನಾಯಿಗಳ ಮೇಲಿನ ಕ್ರೇಜ್ ಹೆಚ್ಚಾಗಿರುವುದರಿಂದ ಉತ್ತಮ ತಳಿಯ ನಾಯಿಗಳಿಗೂ ಬೆಲೆ ಹಾಗೂ ಬೇಡಿಕೆ ದುಪ್ಪಟ್ಟಾಗಿದೆ.
ಲ್ಯಾಬ್ರಡರ್ ಸೇರಿದಂತೆ ಉತ್ತಮ ತಳಿಯ ಶ್ವಾನಗಳು 20 ಸಾವಿರದಿಂದ ಮೂರು ಲಕ್ಷ ರೂ.ಗಳ ಬೆಲೆಗೆ ಮಾರಾಟವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ ಡಾಗ್ ಮಾರಾಟಗಾರರು. ಇದನ್ನು ಓದಿ – ರಾಷ್ಟ್ರಪತಿ ಚುನಾವಣೆ – 11 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಚಾರ್ಲಿ777 ಸಿನಿಮಾದಲ್ಲಿ ಪ್ರತಿಯೊಬ್ಬ ಪ್ರೇಕ್ಷಕನ ಕಣ್ಣಲ್ಲಿ ಕಂಬನಿ ಸುರಿಸುವಂತೆ ಅಮೋಘವಾಗಿ ನಟಿಸಿ ಸೈ ಎನಿಸಿಕೊಂಡಿರುವ ಲ್ಯಾಬ್ರಡರ್ ತಳಿಯ ನಾಯಿಗೆ ಫೀದಾ ಆಗಿರುವ ಶ್ವಾನಪ್ರಿಯರು ಅದೇ ತಳಿಯ ನಾಯಿಗಳಿಗೆ ಕೇಳಿದಷ್ಟು ಹಣ ಕೊಟ್ಟು ಖರೀದಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದಾಗಿ ಪೆಟ್ ಮಾರಾಟ ಪಾತಾಳಕ್ಕೆ ಕುಸಿದುಬಿದ್ದಿತ್ತು. ಯಾರು ಶ್ವಾನ ಖರೀದಿಗೆ ಮುಂದೆ ಬರುತ್ತಿರಲಿಲ್ಲ.
ಚಾರ್ಲಿ ಸಿನಿಮಾದ ನಂತರ ಶ್ವಾನ ಪ್ರಿಯರ ಸಂಖ್ಯೆ ದ್ವಿಗುಣಗೊಂಡಿದೆ. ಶ್ವಾನಗಳ ಖರೀದಿಸುವ ಎನ್‍ಕ್ವೈರಿ ಕಾಲ್‍ಗಳನ್ನು ಅಟೆಂಡ್ ಮಾಡುವುದೇ ಸಾಕು ಸಾಕಾಗಿ ಹೋಗಿದೆಯಂತೆ. ಅದರಲ್ಲೂ ಲ್ಯಾಬ್ರಡರ್ ತಳಿಯ ನಾಯಿಗಳಿಗೆ ಹೆಚ್ಚು ಬೇಡಿಕೆ ಬರುತ್ತಿದೆ. ಉಳಿದಂತೆ ವಿದೇಶಗಳಲ್ಲಿರುವ ಹೈಬ್ರೀಡ್ ತಳಿಯ ನಾಯಿಗಳನ್ನು ತರಿಸಿಕೊಡಿ ನೀವು ಕೇಳಿದಷ್ಟು ಹಣ ನೀಡುತ್ತೇವೆ ಎಂದು ಕೆಲವರು ದುಂಬಾಲು ಬಿದ್ದಿದ್ದಾರಂತೆ. ಇದನ್ನು ಓದಿ – ಮಧು ಜಿ ಮಾದೇಗೌಡರಿಗೆ ಜಯ:ಮೈಸೂರು ವಿಭಾಗದಲ್ಲೇ ಕಾಂಗ್ರೆಸ್ ನಲ್ಲಿ ಹೊಸ ಹುರುಪು- ಹೊಸ ಭರವಸೆ
ಇದುವರೆಗೂ ಶ್ವಾನಗಳೆಂದರೆ ಮೂಗು ಮೂರಿಯುತ್ತಿದ್ದವರು ಚಾರ್ಲಿ ಸಿನಿಮಾ ನಂತರ ಪ್ರಾಣಿಪ್ರಿಯರಾಗಿ ಬದಲಾಗಿರುವುದು ಮಾತ್ರವಲ್ಲ ಶ್ವಾನಗಳನ್ನು ದತ್ತು ಪಡೆಯಲು ಮುಂದಾಗಿದ್ದಾರೆ.
ಹೈಬ್ರೀಡ್ ಶ್ವಾನಗಳ ಜೊತೆಗೆ ದೇಶಿ ತಳಿಯ ನಾಯಿಗಳ ಬೆಲೆಯೂ ಗಗನಕ್ಕೇರಿದೆ. ಶ್ವಾನಪ್ರಿಯರು ದುಪ್ಪಟ್ಟು ಹಣತೆತ್ತು ಹೈಬ್ರೀಡ್ ತಳಿಯ ನಾಯಿಗಳನ್ನು ಖರೀದಿಸುವ ಬದಲು ಬೀದಿಯಲ್ಲಿ ತಿನ್ನಲು ಅನ್ನವಿಲ್ಲದೆ ಪರದಾಡುವ ಬೀದಿ ನಾಯಿಗಳಿಗೆ ಒಂದು ತುತ್ತು ಅನ್ನ ಹಾಕಿ ಸಲುಹಲು ಮನಸು ಮಾಡಿದರೆ ಬೀದಿನಾಯಿಗಳ ಸಮಸ್ಯೆಗೂ ಪರಿಹಾರ ದೊರಕಿಸಿಕೊಡಬಹುದು , ಒಟ್ಟಾರೆ ಚಾರ್ಲಿ ಸಿನಿಮಾದಿಂದಾಗಿ ನಗರದಲ್ಲಿ ಶ್ವಾನಪ್ರಿಯರ ಸಂಖ್ಯೆ ಹೆಚ್ಚಾಗಿರುವುದು ಮಾತ್ರ ಸ್ವಾಗತಾರ್ಹ.ಇದನ್ನು ಓದಿ – ಚಿನ್ನದ ಸರ ನೀಡಲಿಲ್ಲ ಎಂದು ಮಹಿಳೆಯನ್ನೇ ಕೆರೆಗೆ ತಳ್ಳಿ ಕೊಂದ ಖದೀಮರು !
- 4 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ – ಬಂಧನ
- ಸಮ್ಮೇಳನಾಧ್ಯಕ್ಷ ನಾಡೋಜ ಗೊ.ರು.ಚನ್ನಬಸಪ್ಪರವರಿಗೆ ಅದ್ಧೂರಿ ಸ್ವಾಗತ
- ವಕ್ಫ್ ಆಸ್ತಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ
- ರಾಜ್ಯಾದ್ಯಂತ ಡಿ. 31 ರಿಂದ ಸಾರಿಗೆ ನೌಕರರ ಮುಷ್ಕರ
- ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬೆಂ-ಮೈ ಎಕ್ಸ್ಪ್ರೆಸ್ವೇ ಸಂಚಾರ ಮಾರ್ಗದಲ್ಲಿ ಬದಲಾವಣೆ
More Stories
4 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ – ಬಂಧನ
ಸಮ್ಮೇಳನಾಧ್ಯಕ್ಷ ನಾಡೋಜ ಗೊ.ರು.ಚನ್ನಬಸಪ್ಪರವರಿಗೆ ಅದ್ಧೂರಿ ಸ್ವಾಗತ
ವಕ್ಫ್ ಆಸ್ತಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ