ಕೊರೋನಾ, ಜಲಪ್ರಳಯ, ಸಾವು-ನೋವು ವಿಪರೀತ ಹಾಗೂ ಮತೀಯ ಗಲಭೆಗಳೂ ಕೂಡ ಹೆಚ್ಚಾಗಲಿವೆ ಎಂದು ಕೋಡಿಮಠ ಶ್ರೀ ಗಳು ಭವಿಷ್ಯ ನುಡಿದ್ದಾರೆ.
ಕೋವಿಡ್ ಇನ್ನೂ ಒಂದೂವರೆ ವರ್ಷದ ನಂತರ ಕಡಿಮೆ ಆಗಲಿದೆ. ಕೊರೋನಾ ಹೋಗುವ ಸಂದರ್ಭದಲ್ಲಿ ವಿಪರೀತ ಕಷ್ಟ ಕೊಟ್ಟು ಹೋಗಲಿದೆ. ಈಗಿನಿಂದಲೇ ಎಚ್ಚರಿಕೆ ವಹಿಸಬೇಕು ಎಂಬುದಾಗಿ ಭವಿಷ್ಯ ನುಡಿದರು.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು, ರಾಜ್ಯದಲ್ಲಿ ಮಳೆ-ಬೆಳೆ ಕಂಡಮಂಡಲವಾಗಲಿದೆ. ಗುಡುಗು, ಸಿಡಿಲು, ಮಿಂಚು ಹೆಚ್ಚಾಗಲಿದೆ. ಪ್ರಕೃತಿ ಮೇಲೆ ಹಾವಳಿ ಮಾಡುತ್ತೆ. ಮಲೆನಾಡು, ಬಯಲಾಗಲಿದೆ. ಬಯಲು ಮಲೆನಾಡು ಆಗಲಿದೆ ಎಂದಿದ್ದಾರೆ.
ಇದನ್ನು ಓದಿ – ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ – ಸುಳಿವು ನೀಡಿದ ಸಚಿವ ಅಶ್ವಥ್ ನಾರಾಯಣ್
ದೊಡ್ಡ ದೊಡ್ಡ ನಗರಕ್ಕೆ ಮಳೆಯಿಂದ ಹಾನಿ ಉಂಟಾಗಲಿದೆ. ಮುಂಗಾರು ಮಳೆ ಇನ್ನೂ ಹೆಚ್ಚಾಗಲಿದೆ. ಹಿಂಗಾರಿನಲ್ಲಿ ಅಕಾಲಿಕ ಮಳೆ ಆಗುವ ಲಕ್ಷಣಗಳಿವೆ. ಮತೀಯ ಗಲಭೆ ಹೆಚ್ಚಾಗಲಿದೆ. ಸಾವು-ನೋವುಗಳು ಉಂಟಾಗಲಿವೆ ಎಂಬುದಾಗಿ ತಿಳಿಸಿದರು.
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )