December 22, 2024

Newsnap Kannada

The World at your finger tips!

car fire

ರಾಘವೇಂದ್ರ ಸ್ವಾಮಿ ದರ್ಶನಕ್ಕೆ ಬಂದಿದ್ದವರ ಕಾರಿಗೆ ಬೆಂಕಿ : ಸುಟ್ಟು ಹೋದ ಕಾರು

Spread the love

ಮಂತ್ರಾಲಯ ರಾಘವೇಂದ್ರ ಸ್ವಾಮಿ ದರ್ಶನಕ್ಕೆ ಬಂದಿದ್ದ ಭಕ್ತರ ಕಾರಿಗೆ ಬೆಂಕಿ ಹೊತ್ತಿಕೊಂಡು ಧಗ ಧಗ ಉರಿದು ಸುಟ್ಟು ಹೋದ ಘಟನೆ ರಾಯಚೂರಿನ ಮಡ್ಡಿಪೇಟೆಯಲ್ಲಿ ತಿಪ್ಪೆಯ ಬಳಿ ನಿಲ್ಲಿಸಿದ್ದಾಗ ನಡೆದಿದೆ.

ರೈತ ಮುಖಂಡ ಡಾ. ವಿಜಯಾನಂದ ಸ್ವಾಮಿ ಅವರಿಗೆ ಸೇರಿದ ಕಾರು ಬೆಳಗಿನ ಜಾವ ಬೆಂಕಿಗಾಹುತಿಯಾಗಿದೆ. ಇದನ್ನು ಓದಿ – ಬೀದರ್-ಬೆಂಗಳೂರು ಮಧ್ಯೆ ಸಂಚರಿಸಲಿದೆ ಏರ್ ವಿಮಾನ

ಶ್ರೀ ರಾಘವೇಂದ್ರ ಸ್ವಾಮಿ ದರ್ಶನಕ್ಕಾಗಿ ಮಂತ್ರಾಲಯಕ್ಕೆ ಹೋಗಲು ಬೆಂಗಳೂರಿನಿಂದ ರಾಯಚೂರಿನ ಮಡ್ಡಿಪೇಟೆಯಲ್ಲಿರುವ ಸಹೋದರನ ಮನೆಗೆ ಬಂದಿದ್ದರು.

ಮನೆ ಹೊರಗೆ ಪಾರ್ಕ್ ಮಾಡಿದ್ದ ಕಾರು ಬೆಳಗಾಗುವಷ್ಟರಲ್ಲಿ ಸುಟ್ಟು ಕರಕಲಾಗಿದೆ. ತಿಪ್ಪೆಗೆ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ ಕಾರಿಗೆ ತಗುಲಿರಬಹುದು ಅಂತ ಶಂಕಿಸಲಾಗಿದೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಸತತ ಅರ್ಧ ಗಂಟೆಕಾಲ ಬೆಂಕಿ ನಂದಿಸಿದೆ.

ನೇತಾಜಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Copyright © All rights reserved Newsnap | Newsever by AF themes.
error: Content is protected !!