December 19, 2024

Newsnap Kannada

The World at your finger tips!

UDAYA ACTOR

‘ಆರಂಭ’ ಚಿತ್ರದ ಹೀರೋ ಉದಯ್ ಹುತ್ತಿನಗದ್ದೆ ಇನ್ನಿಲ್ಲ

Spread the love

ಆರಂಭ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸ್ಯಾಂಡಲ್ ವುಡ್ ನ ಹಿರಿಯ ನಟ ಉದಯ್ ಹುತ್ತಿನಗದ್ದೆ (62) ಉಸಿರಾಟದ ಸಮಸ್ಯೆಯಿಂದ ನಿಧನರಾದರು.

1987 ರಲ್ಲಿ ಬಿಡುಗಡೆಯಾದ ಆರಂಭ ಸಿನಿಮಾದ ಮೂಲಕ ನಾಯಕನಾಗಿ ಕನ್ನಡ ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟ ಉದಯ್ ಶಿವಯೋಗಿ ಅಕ್ಕಮಹಾದೇವಿ,ಅಮೃತ ಬಿಂದು, ಉದ್ಭವ, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಉಂಡು ಹೋದ ಕೊಂಡೂ ಹೋದ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.

ಇದನ್ನು ಓದಿ –ಸಚಿವ ಬಿ.ಸಿ ನಾಗೇಶ್ ಮನೆಗೆ ನುಗ್ಗಿ ದಾಂಧಲೆ, ಹಲವರ ಬಂಧನ

ನಂತರದ ದಿನಗಳಲ್ಲಿ ನಟನೆಯಿಂದ ದೂರ ಉಳಿದ ಅವರು, ಆನಂದರಾವ್ ವೃತ್ತದ ಬಳಿಕ ಕಲರ್ ಲ್ಯಾಬ್ ನಡೆಸುತ್ತಿದ್ದರು.ಗುರುವಾರ ಸಂಜೆ ಉಸಿರಾಟದ ಸಮಸ್ಯೆಯಿಂದಾಗಿ ತಮ್ಮ ಮನೆಯಲ್ಲೇ ಮೃತಪಟ್ಟಿದ್ದಾರೆ.

ಉದಯ್ ಹುತ್ತಿನಗತ್ತೆ ಅವರ ಅಂತಿಮ ಸಂಸ್ಕಾರ ಇಂದು ಮಧ್ಯಾಹ್ನ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ನಡೆಯಲಿದೆ.

Copyright © All rights reserved Newsnap | Newsever by AF themes.
error: Content is protected !!