December 22, 2024

Newsnap Kannada

The World at your finger tips!

mandya,politics,BJP

BJP candidate Ravishankar to win by a narrow margin this time

ಬಿಜೆಪಿ ಅಭ್ಯರ್ಥಿ ರವಿಶಂಕರ್ ಗೆ ಈ ಬಾರಿ ಬಾರೀ ಅಂತರದ ಗೆಲುವು ನಿಶ್ಚಿತ -ಸದಾನಂದ ಗೌಡ ವಿಶ್ವಾಸ

Spread the love

ಪದವೀಧರ ಕ್ಷೇತ್ರದಿಂದ ಮೇಲ್ಮನೆಗೆ ನಡೆಯುವ ಚುನಾವಣೆ ಯಲ್ಲಿ ಬಿಜೆಪಿ ಅಭ್ಯರ್ಥಿ ರವಿಶಂಕರ್ ಅವರು ಭಾರೀ ಅಂತರದ ಮತಗಳಿಂದ ಗೆಲುವು ಸಾಧಿಸುವರು ಎಂದು ಮಾಜಿ ಮುಖ್ಯಮಂತ್ರಿ. ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರು ಮಂಗಳವಾರ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನು ಓದಿ –ಗುಜರಾತ್ ನಲ್ಲಿ ಕಾಂಗ್ರೆಸ್ ಗೆ ಹಾರ್ದಿಕ್ ಪಟೇಲ್ ಗುಡ್ ಬೈ :ಜೂನ್ 2 ರಂದು BJP ಗೆ

ಮಂಡ್ಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸದಾನಂದಗೌಡ, ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಗೆಲುವಿಗೆ ಸಹಕಾರಿಯಾಗಲಿದೆ. ಅಭ್ಯರ್ಥಿ ರವಿಶಂಕರ್ ಹಿರಿಯರು, ಅನುಭವಿಗಳು. ಶಿಕ್ಷಣ ಕ್ಷೇತ್ರದ ಸಮಸ್ಯೆ ಗಳ ಬಗ್ಗೆ ಆಳವಾದ ಅರಿವು ಸ್ಪಷ್ಟತೆಯಿರುವವರು ಎಂದರು.

ತಾವು ಮದ್ದೂರು ಸೇರಿದಂತೆ ಹಲವಾರು ಕ್ಷೇತ್ರ ಗಳಲ್ಲಿ ವ್ಯಾಪಕ ಪ್ರಚಾರದ ಸಭೆ ನಡೆಸಿದ್ದೇವೆ
ಎಲ್ಲಾ ಕಡೆ ಸಕಾರಾತ್ಮಕ ಬೆಂಬಲ ವ್ಯಕ್ತವಾಗಿದೆ. ವಿಧಾನ ಪರಿಷತ್ ಚಿಂತಕರ. ಬುದ್ದಿಜೀವಿಗಳ ಚಾವಡಿಯೆಂದೇ ಪ್ರಸಿದ್ದವಾಗಿದೆ ವಿಷಯಾಧಾರಿತ ಚರ್ಚೆ ನಡೆಸಲು ಅನುವಾಗಬೇಕೆಂದೇ ಬಿಜೆಪಿ ಈ ವಿಷಯದಲ್ಲಿ ಅನುಭವಿ ಕಾಳಜಿಯುಳ್ಳವರನ್ನು ಅಭ್ಯರ್ಥಿ ಯಾಗಿ ಕಣಕ್ಕಿಳಿಸಿದೆ ಬಿಜೆಪಿಗೆ ಪ್ರಭಲ ಪ್ರತಿಸ್ಪರ್ಧಿ ಯಾರೂ ಇಲ್ಲ ಇಡೀ ಯುವ ಜನಾಂಗ ಪ್ರಬುದ್ದ ಪದವೀಧರ ಮತದಾರ ಅಖಂಡ ಬೆಂಬಲವಿದೆ.ಸ್ಥಳೀಯ ನಾಯಕರ ಸಂಪೂರ್ಣ ಬೆಂಬಲ ಸಹಕಾರದಿಂದ ರವಿಶಂಕರ್ ಆಯ್ಕೆ ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಶೆ..೬೦ ರಷ್ಟು ಮತ ಪಡೆದು ಅಭ್ಯರ್ಥಿ ಗೆಲ್ಲುವರು ಎಂದ ಸದಾನಂದ ಗೌಡ ಪಠ್ಯ ಪುಸ್ತಕ ಪರಿಷ್ಕರಣ ಸಂಬಂಧ ವಿವಾದಕ್ಕೆ ಪ್ರತಿಕ್ರಿಯಿಸಿ ಸಮಿತಿಯ ಅಧ್ಯಕ್ಷ ರದ್ದು ತಪ್ಪಿದ್ದರೆ ಖಂಡಿತವಾಗಿ ಸೂಕ್ತ ಕ್ರಮ ಸರ್ಕಾರ ತೆಗೆದುಕೊಳ್ಳುವುದು. ರಾಷ್ಟ್ರ ಕವಿ ಕುವೆಂಪು ಅವರ ನಾಡಗೀತೆ ಬಗ್ಗೆಯ ವಿವಾದಕ್ಕೂ ಆದಿ ಚುಂಚನಗಿರಿ ಶ್ರೀ ಗಳ ಜೊತೆ ಶಿಕ್ಷಣ ಸಚಿವರು ಚರ್ಚಿಸಿದ್ದಾರೆ. ಮುಖ್ಯಮಂತ್ರಿ ಗಳು ಈ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳಲಿದ್ದಾರೆ ತಪ್ಪತ್ತಸ್ಥ ಯಾರನ್ನೂ ರಕ್ಷಿಸುವ ಪ್ರಶ್ನೆ ಯೇ ಇಲ್ಲ ಎಂದರು.

ರಾಜ್ಯಕ್ಕೆ ಜಿಎಸ್ಟಿ ಪಾಲು ೫ ಸಾವಿರ ಕೋಟಿ ರೂ ಬರಬೇಕಿದ್ದು ಅದರಲ್ಲಿ ೨ ಸಾವಿರ ಕೋಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ಬಾಕಿಯನ್ನು ಶೀಘ್ರವಾಗಿ ನೀಡಲಿದ್ದು ಕರೋನಾ ದಿಂದ ಈ ವಿಳಂವಾಗಿದೆಎಂದರು.ಬಿಜೆಪಿಯು ೧೨ ಕೋಟಿ ಸದಸ್ಯರನ್ನು ಹೋಂದಿರುವ ಸುಮಾರು ೬೦ ಕೋಟೊ ಜನರ ಅಭಿಮಾನವನ್ನು ಹೋಂದಿರುವ ಬೃಹತ್ ರಾಷ್ಟ್ರೀಯ ಪಕ್ಷವಾಗಿದೆ ಎಂದು ಅಭಿಮಾನದಿಂದ ಹೇಳಿದರು

ಪಕ್ಷದಲ್ಲಿ ಶಾಸಕನಾಗಿ ,ಸಂಸದನಾಗಿ. ಕೇಂದ್ರ ಸಚಿವರಾಗಿ. ಮುಖ್ಯಮಂತ್ರಿ ಯಾಗಿ ಎಲ್ಲಾ ಉನ್ನತ ಸ್ಥಾನಗಳನ್ನು ಅನುಭವಿಸಿದ್ದೇನೆ ಎಂಬ ಆತ್ಮ ತೃಪ್ತಿ. ಸಂತೋಷ ನನಗಿದೆ ಎಂದ ಸದಾನಂದ ಗೌಡ ನಿಷ್ಠೆಯುಳ್ಳ ಶ್ರಮಿಕ. ಕಾರ್ಯಕರ್ತರಿಗೆ ಪಕ್ಷವೂ ಎಂದೂ ಗೌರವ. ಸ್ಥಾನ ಮಾನ ನೀಡುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.ದೇಶದ ಆರ್ಥಿತೆ ಸ್ಥಿರತೆಯತ್ತ ಸಾಗಿದೆ ಎಂದ ಅವರು ಆತ್ಮ ನಿರ್ಭರ ಯೋಜನೆಯಡಿಯೇ ೩ ಲಕ್ಷ ಕೋಟಿ ರೂಪಾಯಿಗಳನ್ನು ಮೋದಿ ಸರ್ಕಾರ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಸಚಿವ ನಾರಾಯಣ ಗೌಡ. ಕೆ.ವಿಜಯಕುಮಾರ್, ನಾಯಕಿ ಅಶ್ವಿನಿ ಗೌಡ ವಕೀಲ ವಿಶಾಲ್ ರಘು.ಮಾಜಿ ಜಿಲ್ಲಾಧ್ಯಕ್ಷ ನಾಗಣ್ಣಗೌಡ ,ಮಹಂತಪ್ಪ ಸಿದ್ರಾಮೇಗೌಡ.ಇ.ಸಿ.ನಿಂಗೇಗೌಡ, ಮುಂತಾದ ಬಿಜೆಪಿ ನಾಯಕರು ಭಾಗವಹಿಸಿದ್ದರು.

Copyright © All rights reserved Newsnap | Newsever by AF themes.
error: Content is protected !!