ಜನಪ್ರಿಯ ಪಂಜಾಬಿ ಗಾಯಕ ಮತ್ತು ರಾಪರ್ ಸಿಧು ಮೂಸ್ ವಾಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮೂಸ್ ವಾಲಾ ಅವರು ಮಾನ್ಸಾದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ಸಿಧು ಮೂಸೆವಾಲ ಜೂನ್ 17, 1993ರಲ್ಲಿ ಮಾನ್ಸಾ ಜಿಲ್ಲೆಯ ಮೂಸೆವಾಲ ಗ್ರಾಮದಲ್ಲಿ ಹುಟ್ಟಿದರು. ಸಿಧು ಅಪಾರ ಬೆಂಬಲಿಗರು, ಫ್ಯಾನ್ ಫಾಲೋವಿಂಗ್ ಹೊಂದಿದ್ದಾರೆ. ಇವರ ಎಲ್ಲಾ ಹಾಡುಗಳು ಅತ್ಯಂತ ಜನಪ್ರಿಯವಾಗಿದೆ. ಎಲೆಕ್ಟ್ರಿಕ್ ಎಂಜಿನಿಯರಿಂಗ್ ಪದವಿ ಪಡೆದಿದ್ದರು.
ಸಿಧು ಅತ್ಯಂತ ವಿವಾದಾತ್ಮ ಸಿಂಗರ್ ಆಗಿ ಗುರುತಿಸಿಕೊಂಡಿದ್ದರು.ತಮ್ಮ ಹಾಡುಗಳಲ್ಲಿ ಗನ್, ಹೊಡೆದಾಟ, ಬಡಿದಾಟ, ಕೊಲೆ, ದರೋಡೆಕೋರರ ವೈಭವೀಕರಿಸುತ್ತಿದ್ದರು. ಇದು ಹಲವು ವಿವಾದಕ್ಕೆ ಕಾರಣವಾಗಿದೆ. 2019ರ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾದ ಜಟ್ಟಿ ಜೆನಾಯ್ ಮೊರ್ಹ್ ದಿ ಬಂದೂಕ್ ವಾರ್ಗಿ ಹಾಡು ಭಾರಿ ವಿವಾದಕ್ಕೆ ಕಾರಣವಾಗಿತ್ತು.ಬಳಿಕ ಸಿಧು ಮೂಸೆ ವಾಲ ಕ್ಷಮೆಯಾಚಿಸಿದ್ದರು.
ಮಾನ್ಸಾ ಜಿಲ್ಲೆಯ ಮೂಸಾ ಎಂಬ ಹಳ್ಳಿಯಿಂದ ಬಂದ ಮೂಸ್ ವಾಲಾ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಹೆಚ್ಚಿನ ಅಭಿಮಾನಿಗಳ ನಡುವೆ ಕಾಂಗ್ರೆಸ್‌ಗೆ ಸೇರಿದ್ದರು.ಅವರು ಎಎಪಿಯ ಡಾ ವಿಜಯ್ ಸಿಂಗ್ಲಾ ವಿರುದ್ಧ 63,323 ಮತಗಳ ಅಂತರದಿಂದ ಪರಾಭವಗೊಂಡರು. ಮಾನಸಾ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡಿತ್ತು.
ಪಂಜಾಬ್ ಸಿಎಂ ಭಗವಂತ್ ಮಾನ್ ನೇತೃತ್ವದ ಆಮ್ ಆದ್ಮಿ ಸರ್ಕಾರ ಹಲವರ ಭದ್ರತೆ ವಾಪಸ್ ಪಡೆದಿದೆ. ನಿನ್ನೆಯಷ್ಟೇ ಖ್ಯಾತ ಸಿಂಗರ್, ಕಾಂಗ್ರೆಸ್ ನಾಯಕ ಸಿಧು ಮೂಸ್ ವಾಲಾ ಭದ್ರತೆಯನ್ನು ಸರ್ಕಾರ ವಾಪಸ್ ಪಡೆದಿತ್ತು. ಭದ್ರತೆ ವಾಪಸ್ ಪಡೆದ ಒಂದೇ ದಿನದಲ್ಲಿ ಇದೀಗ ಸಿಧು ಮೂಸೆ ವಾಲಾ ಹತ್ಯೆಯಾಗಿದ್ದಾರೆ. ಇದು ಆಪ್ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಮಾನಸ ಹಾಲಿ ಶಾಸಕ ನಜರ್ ಸಿಂಗ್ ಮನ್ಶಾಹಿಯಾ ಅವರು ವಿವಾದಾತ್ಮಕ ಗಾಯಕನ ಉಮೇದುವಾರಿಕೆಯನ್ನು ವಿರೋಧಿಸುವುದಾಗಿ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದರು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ