February 20, 2026

Newsnap Kannada

The World at your finger tips!

WhatsApp Image 2022 05 28 at 7.31.54 AM

‘ರಕ್ಕಮ್ಮ’ಗಾಗಿ ರೀಲ್ಸ್ ಮಾಡಿದ ಕಿಚ್ಚ ಸುದೀಪ್ : ಕನ್ನಡದಲ್ಲೇ ಮಾತನಾಡಿದ ಜಾಕ್ವೆಲಿನ್ ವಿಡಿಯೋ

Spread the love

ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್​ ರೋಣ ಸಿನಿಮಾ ಈಗಾಗಲೇ ತೀವ್ರ ನಿರೀಕ್ಷೆ ಇದೆ ಇತ್ತೀಚೆಗೆ ತೆರೆ ಕಂಡಿದ್ದ ‘ರಾ ರಾ ರಕ್ಕಮ್ಮ’ ಹಾಡು ಹಿಟ್ ಆಗಿದೆ. ‘ಕಡಂಗ ರಕ್ಕಮ್ಮ’ ಪಾತ್ರದಲ್ಲಿ ಜಾಕ್ವೆಲಿನ್ ಕಾಣಿಸಿಕೊಳ್ಳುತ್ತಿದ್ದು, ಹಾಡಿನೊಂದಿಗೆ ಪ್ರಮುಖ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನು ಓದಿ –ರಾಜ್ಯದ ಮೂವರಿಗೆ ಐಎಎಸ್ ಹುದ್ದೆಗೆ ಸುಪ್ರೀಂ ಅಸ್ತು

ಇದೀಗ ಕಿಚ್ಚ ಸುದೀಪ್ ಹಾಗೂ ಜಾಕ್ವೆಲಿನ್ ಅವರಿಗೆ ಕರೆ ಮಾಡಿ ಮಾತನಾಡಿ, ಅದರಲ್ಲಿ ನಟಿಗೆ ಕನ್ನಡದಲ್ಲಿ ಮಾತನಾಡುವ ಚಾಲೆಂಜ್ ಮಾಡಿದ್ದರು. ಅದರಲ್ಲಿ ಯಶಸ್ವಿಯಾದರೆ ಜಾಕ್ವೆಲಿನ್ ಪ್ರತಿ ಸವಾಲಿನಂತೆ ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್​ ಮಾಡುವುದಾಗಿ ಕಿಚ್ಚಾ ಸುದೀಪ್​ ಹೇಳಿದ್ದರು.

ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ಕಿಚ್ಚ ಸುದೀಪ್, ಜಾಕ್ವೆಲಿನ್​ಗೆ ವಿಡಿಯೋ ಕರೆ ಮಾಡಿದ್ದಾರೆ. ಜಾಕ್ವೆಲಿನ್​ ಸುದೀಪ್​ಗೆ ಹಾಡಿನ ರೀಲ್ಸ್ ಮಾಡುವಂತೆ ಕೋರಿಕೊಂಡಿದ್ದಾರೆ. ಆಗ ಸುದೀಪ್ ಒಂದು ಷರತ್ತಿನ ಮೇಲೆ ವಿಡಿಯೋ ಮಾಡುವುದಾಗಿ ತಿಳಿಸಿ, ನಟಿಗೆ ಕನ್ನಡದ ಸಾಲನ್ನು ಪುನರ್​ ಉಚ್ಚಾರ ಮಾಡುವಂತೆ ಹೇಳಿದ್ದಾರೆ. ಕಿಚ್ಚಾ ಸುದೀಪ್​ ಹೇಳಿದಂತೆ ಜಾಕ್ವೆಲಿನ್ ಫರ್ನಾಂಡಿಸ್ ಹೇಳಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ, ಕೇಳಿ:

jacqueline speaks in kannada

error: Content is protected !!