January 29, 2026

Newsnap Kannada

The World at your finger tips!

kumarswamy

ಎವ್ರಿ ಡೇ ಈಸ್‌ ನಾಟ್‌ ಸಂಡೇ: ಶಿರಾದಲ್ಲಿ ಕಮಲ ಅರಳಲ್ಲ – ಎಚ್‌ಡಿಕೆ

Spread the love

‘ಎವ್ರಿ ಡೇ ಈಸ್‌ ನಾಟ್‌ ಸಂಡೇ’ ಹೀಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದು ಬಿಜೆಪಿಗೆ.

ಆರ್.ಆರ್ ನಗರ ಮತ್ತು  ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಹಣಬಲದ ಮೂಲಕ ಗೆಲುವು ಸಾಧಿಸಲು ಬಿಜೆಪಿ ಹೊರಟಿದ್ದಾರೆ. ಆದರೆ ಶಿರಾದಲ್ಲಿ ಹಣಬಲದಿಂದ ಗೆಲ್ಲಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ, ಹಣಬಲದಿಂದ ಶಿರಾದಲ್ಲಿ ಗೆಲ್ಲಲು ಆಗಲ್ಲ. ಹಣಬಲದಿಂದ ಗೆಲ್ಲುತ್ತೇವೆ ಅನ್ನೋದು ಕೇವಲ ಭ್ರಮೆ. ಕೆ.ಆರ್ ಪೇಟೆಯಲ್ಲಿ ಕಮಲ ಅರಳಿಸಿದಂತೆ ಶಿರಾದಲ್ಲಿ ಕಮಲ ಅರಳಿಸಲು ಆಗಲ್ಲ. ಅಂದಿನ ಚುನಾವಣೆಗೂ ಇಂದಿನ ಚುನಾವಣೆಗೂ ವ್ಯತ್ಯಾಸವಿದೆ. ‘ಎವೆರಿ ಡೇಸ್ ಇಸ್ ನಾಟ್ ಸಂಡೆ’ ಎಂದು ಹೇಳಿದರು. 

ಕಟೀಲ್ ಗೆ ಘನತೆ ಇಲ್ಲ

ನಳೀನ್ ಕುಮಾರ್ ಕಟೀಲ್ ಗೆ ಘನತೆಯೇ ಇಲ್ಲ. ಸಿ ಎಂ ಆಗಿದ್ದಾಗ ಹೇಗಿದ್ದೆ ಎಂದು ಜನತೆಗೆ ಗೊತ್ತು. ನನ್ನಷ್ಟು ಜನಸಾಮಾನ್ಯರಿಗೆ ಸಿಗುವವವರು ಯಾರು ಇಲ್ಲ. ಅಧಿಕಾರ ಇಲ್ಲದಿದ್ದರೂ ಜನ ನಮ್ಮ ಮನೆಗೆ ಬರುತ್ತಾರೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಎಷ್ಟು ಬಡವರಿಗೆ ಸಹಾಯ ಮಾಡಿದ್ದಾರೆ ಎಂದು ನಳೀನ್ ಕುಮಾರ್ ಕಟೀಲ್ ವಿರುದ್ಧ ಕಿಡಿಕಾರಿದರು.

ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನವೆಂಬರ್ 3 ರಂದು ನಡೆಯಲಿದೆ. ನವೆಂಬರ್‌ 10 ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

error: Content is protected !!