March 11, 2025

Newsnap Kannada

The World at your finger tips!

marrige,fight,belgaum

MES goons in Belgaum

ಬೆಳಗಾವಿಯಲ್ಲಿ MES ಗೂಂಡಾಗಳ ಪುಂಡಾಟಿಕೆ-

Spread the love

ಬೆಳಗಾವಿ : ಕನ್ನಡ ಹಾಡು ಹಾಕಿದ್ದಕ್ಕೆ ಮದುವೆ ಮನೆಗೆ ನುಗ್ಗಿ ಹಲ್ಲೆ ಮಾಡಿ ಪುಂಡಾಟಿಕೆ ಮೆರದ MES ಗುಂಡಾಗಳು

ಬೆಳಗಾವಿ ಜಿಲ್ಲೆಯಲ್ಲಿ ಕಳೆದ ರಾತ್ರಿ ಮದುವೆ ಮನೆಯಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ಎಂಇಎಸ್ ಗೂಂಡಾಗಳು ಹಲ್ಲೆ ಮಾಡಿ ಮತ್ತೆ ಪುಂಡಾಟಿಕೆ ಮೆರೆದಿದ್ದಾರೆ

ಇದನ್ನು ಓದಿ –ಡ್ರಗ್ಸ್​​ ಕೇಸ್​ ಪ್ರಕರಣ – ಸಾಕ್ಷ್ಯಾಧಾರ ಕೊರತೆ : ಶಾರೂಖ್ ಪುತ್ರ ಆರ್ಯನ್ ಸೇರಿ 6 ಮಂದಿಗೆ ಕ್ಲೀನ್ ಚಿಟ್

ಮದುವೆ ಸಮಾರಂಭದಲ್ಲಿ ಕನ್ನಡ ಹಾಡು ಹಾಕಿದಕ್ಕೆ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿ ಗೂಂಡಾಗಿರಿ ಪರಾರಿಯಾದ ಘಟನೆ ಬೆಳಗಾವಿ ತಾಲೂಕಿನ ಧಾಮನೆ ಗ್ರಾಮದಲ್ಲಿ ತಡರಾತ್ರಿ ಘಟನೆ ನಡೆದಿದೆ

ಮದುವೆ ಮನೆಯಲ್ಲಿ ವಧು-ವರ ಸೇರಿ ಕನ್ನಡಿಗ ಯುವಕರ ಮೇಲೆ ಎಂಇಎಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ವರ ಸಿದ್ದು ಸೈಬಣ್ಣವರ್, ವಧು ರೇಷ್ಮಾ, ವರ ಸಿದ್ದು ತಮ್ಮ ಭರಮಾ ಸೇರಿ ಐವರ ಮೇಲೆ ಹಲ್ಲೆ ಮಾಡಲಾಗಿದೆ. ಘಟನೆಯಲ್ಲಿ ಐವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ.

ನಿನ್ನೆ ಧಾಮನೆ ಗ್ರಾಮದಲ್ಲಿ ಸೈಬಣ್ಣವರ್ ಕುಟುಂಬದ ಮದುವೆ ಸಮಾರಂಭವಿತ್ತು. ಕುಟುಂಬಸ್ಥರು ರಾತ್ರಿ ಬ್ಯಾಂಡ್ ಹಚ್ಚಿ ಮೆರವಣಿಗೆ ಮೂಲಕ ವಧು-ವರನನ್ನು ಮನೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಕನ್ನಡ ಧ್ವಜ ಹಿಡಿದು ಕರುನಾಡೇ ಹಾಡಿಗೆ ಯುವಕರು ಡ್ಯಾನ್ಸ್ ಮಾಡುತ್ತಿದ್ದರು. ಇದಕ್ಕೆ ಕಿರಿಕ್ ತೆಗೆದ ಎಂಇಎಸ್ ಗೂಂಡಾಗಳಾದ ಅಜಯ್ ಯಳ್ಳೂರಕರ್, ಆಕಾಶ್ ಸೇರಿ ಹತ್ತು ಮಂದಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪವನ್ನು ಗ್ರಾಮಸ್ಥರು ಮಾಡಿದ್ದಾರೆ.

ಪ್ರಕರಣದ ಸಂಬಂಧ ಬೆಳಗಾವಿ ಗ್ರಾಮೀಣ ಠಾಣೆಗೆ ಕುಟುಂಬಸ್ಥರ ದೂರು ನೀಡಿದ್ದಾರೆ. ಆದರೆ ಪೋಲಿಸರು ಮಾತ್ರ ಯಾವುದೇ ಕ್ರಮ ಜರುಗಿಸಿಲ್ಲ

Copyright © All rights reserved Newsnap | Newsever by AF themes.
error: Content is protected !!