December 19, 2024

Newsnap Kannada

The World at your finger tips!

drugs,bollywood,khan's

Drug case: Lack of evidence, Shah Rukh's son Aryan gets clean chit

ಡ್ರಗ್ಸ್​​ ಕೇಸ್​ ಪ್ರಕರಣ – ಸಾಕ್ಷ್ಯಾಧಾರ ಕೊರತೆ : ಶಾರೂಖ್ ಪುತ್ರ ಆರ್ಯನ್ ಸೇರಿ 6 ಮಂದಿಗೆ ಕ್ಲೀನ್ ಚಿಟ್

Spread the love

ಸಾಕ್ಷ್ಯಾಧಾರ ಕೊರತೆ ಹಿನ್ನಲೆಯಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿದ್ದ ಶಾರೂಖ್ ಪುತ್ರ ಆರ್ಯನ್ ಸೇರಿ 6 ಮಂದಿಗೆ ಎನ್​ಸಿಬಿ ಕ್ಲೀನ್ ಚಿಟ್ ನೀಡಿದೆ.

ಇದನ್ನು ಓದಿ –ಕೊಡಗು ಜಿಲ್ಲಾಧಿಕಾರಿ ಜಲಾಶಯಕ್ಕೆ ಧುಮುಕಿದ್ದೇಕೆ? ಪ್ರವಾಹದ ವೇಳೆ ರಕ್ಷಣೆ ಕ್ರಮಗಳ ಬಗ್ಗೆ ಪ್ರಾತ್ಯಕ್ಷತೆ

ನಾರ್ಕೊಟಿಕ್ ಕಂಟ್ರೋಲ್ ಬ್ಯೂರೋ ಸಲ್ಲಿಸಿರುವ ಚಾರ್ಜ್​ಶೀಟ್​ನಲ್ಲಿಯೂ ಆರ್ಯನ್ ಖಾನ್ ಹೆಸರು ಕೈ ಬಿಡಲಾಗಿದೆ

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅ. 3,2021 ರಂದು ಆರ್ಯನ್ ನನ್ನು ಬಂಧಿಸಿದ್ದರು. ನಂತರ ಬಾಂಬೆ ಹೈಕೋರ್ಟ್​ ಜಾಮೀನು ನೀಡಿದ ಬಳಿಕ ಅ. 30 ರಂದು ಅವರು ಹೊರ ಬಂದಿದ್ದರು.

ಪ್ರಕರಣದ ಹಿನ್ನೆಲೆ

ಕಳೆದ ವರ್ಷ 2021ರ ಅ . 2ರಂದು ಮುಂಬೈನ ಕ್ರೂಸ್​​ ಹಡಗಿನಲ್ಲಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಶಾರೂಖ್​ ಖಾನ್ ಪುತ್ರ ಮತ್ತು ಆತನ ಸ್ನೇಹಿತರನ್ನು ಎನ್​ಸಿಬಿ ಅಧಿಕಾರಿಗಳು ಬಂಧಿಸಿದ್ದರು

ಖಡಕ್ ಅಧಿಕಾರಿ ಸಮೀರ್ ವಾಂಖೆಡೆ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಒಟ್ಟು 19 ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಚಾರ್ಜ್​ಶೀಟ್ ಫೈಲ್ ಮಾಡಿರೋ ಎನ್​ಸಿಬಿ, ಆರ್ಯನ್ ಖಾನ್ ಸೇರಿ ಒಟ್ಟು 6 ಜನರ ಹೆಸರನ್ನು ಕೈ ಬಿಟ್ಟಿದೆ.

Copyright © All rights reserved Newsnap | Newsever by AF themes.
error: Content is protected !!