ಮಂಡ್ಯದ ಬೋವಿ ಕಾಲೋನಿಯಲ್ಲಿನ ಕಿರಣ್ ಕುಮಾರ್ ಎಂಬುವವರಿಗೆ ವಂಚಕರ ತಂಡವೊಂದು ಕೆಲಸ ಕೊಡಿಸುವುದಾಗಿ ಆಮಿಷ ತೋರಿಸಿ 4 ಲಕ್ಷ ರು.ದೋಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಳ್ಳಲು ಪೋಲಿಸರಿಗೆ ಸೂಚಿಸಿದೆ.
ಕಿರಣ್ ಅವರ ಸ್ನೇಹಿತನ ಮಗ ಕುಮಾರ್ ಹಾಗು ಆತನ ಸಹೋದರಿ ಶಾಂತಲಾಗೆ ಸರ್ಕಾರಿ ಕೆಲಸದ ಆಮಿಷ ತೋರಿಸಿ ಒಡಂಬಡಿಕೆ ಪತ್ರ ಮಾಡಿಸಿರುವ ವಂಚಕರು ಕಿರಣ್ ಕುಮಾರ್ ನಿಂದ 4 ಲಕ್ಷ ಪಡೆದಿದ್ದಾರೆ.
ದಿನಗಳು ಉರುಳಿದರೂ ಕೆಲಸ ಕೊಡಿಸುವ ಬಗ್ಗೆ ಯಾವುದೇ ಸುಳಿವು ದೊರೆಯದೇ ಇದ್ದಾಗ ಕಿರಣ್ ಅವರಿಗೆ ತಾವು ಮೋಸ ಹೋಗಿರುವುದು ಅರಿವಾಗಿದೆ.
ಆ ನಂತರ ಕಿರಣ್ ಅವರಿಗೆ ವಂಚನೆ ಮಾಡಿದ ತಂಡ ಬೆಂಗಳೂರಿನಲ್ಲೂ ಸಹ ಇದೇ ರೀತಿಯ ವಂಚನೆಗಳನ್ನು ಮಾಡಿರುವುದು ತಿಳಿದಿದೆ.
ತಾವು ಮೋಸ ಹೋಗಿರುವ ಕುರಿತು ಮಂಡ್ಯದ ಪೂರ್ವ ಪೋಲೀಸ್ ಠಾಣೆಯಲ್ಲಿ ದೂರು ನೀಡಲು ಹೋದಾಗ ಪೋಲೀಸರು ದೂರನ್ನು ಉಪೇಕ್ಷೆ ಮಾಡಿದ್ದಾರೆ. ಇದರಿಂದ ನೊಂದ ಕಿರಣ್ ಮಂಡ್ಯದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಇಂದು ಕಿರಣ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿಯನ್ನು ಪುರಸ್ಕರಿಸಿದೆ. ಕೂಡಲೇ ಪ್ರಕರಣ ದಾಖಲಿಸಿಕೊಳ್ಳುವಂತೆ ಮಂಡ್ಯದ ಪೂರ್ವ ಪೋಲೀಸ್ ಠಾಣೆಗೆ ಆದೇಶವನ್ನೂ ನೀಡಿದೆ. ಈಗ ಪ್ರಕರಣ ದಾಖಲು ಮಾಡಿಕೊಂಡಿರುವ ಪೋಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.
More Stories
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
ಸಚಿವ ಸ್ಥಾನ ನನ್ನ ಹಕ್ಕು, ಬೇಡಿಕೆಯಲ್ಲ: ನಿಖರ ಹೇಳಿಕೆ ನೀಡಿದ ‘ಕೈ’ ಶಾಸಕ ನರೇಂದ್ರ ಸ್ವಾಮಿ
ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ