December 23, 2024

Newsnap Kannada

The World at your finger tips!

marraige, child marriage, bengaluru

ಮದುವೆ ಮಂಟಪದಲ್ಲಿ ಮೂರ್ಛೆ ಹೋದ ವರ : ತಲೆಯಿಂದ ಜಾರಿದ ವಿಗ್ – ಮದುವೆಗೆ ನಿರಾಕರಿಸಿದ ವಧು

Spread the love

ಮದುವೆ ಮಂಟಪದಲ್ಲಿ ಮೂರ್ಛೆ ಹೋದ ವರನ ತಲೆಯಿಂದ ಜಾರಿದ ವಿಗ್ ನಿಂದಾಗಿ ಬೋಳು ತಲೆ ನೋಡಿದ ವಧು ಮದುವೆಯನ್ನೇ ರದ್ದು ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ಜರುಗಿದೆ. ಹಸೆಮಣೆಯಲ್ಲಿ ಕುಳಿತಿದ್ದ ವಧು ವಿವಾಹದ ಸಂಪ್ರದಾಯಗಳನ್ನು ನಡೆಸುತ್ತಿರುವಂತೆಯೇ ಬೋಳು ವರನನ್ನು ಮದುವೆಯಾಗಲು ವಧು ನಿರಾಕರಿಸಿದಳು.

ಇದನ್ನು ಓದಿ -ವೀರೇಂದ್ರ ಹೆಗ್ಗಡೆ ಪತ್ನಿ ಹೇಮಾವತಿ ಸಹೋದರ ಡಾ.ಬಿ.ಯಶೋವರ್ಮ ನಿಧನ

ಮದುವೆಯ ಅರ್ಧದಷ್ಟು ಸಂಪ್ರದಾಯಗಳು ಮುಗಿದಿದ್ದವು. ಇನ್ನೇನು ಮಾಂಗಲ್ಯಧಾರಣೆ ಮಾಡಬೇಕು ಅನ್ನುವ ವೇಳೆ ಇಡೀ ಸನ್ನಿವೇಶವು ಬದಲಾಗಿದೆ. ವರ, ಮಂಟಪಕ್ಕೆ ಕಾಲಿಡುವ ಮೊದಲು, ಮೂರ್ಛೆ ತಪ್ಪಿದ್ದಾನೆ. ಆತ ತಲೆಸುತ್ತಿ ಕೆಳಕ್ಕೆ ಬಿದ್ದಾಗ, ವರನ ಅಸಲಿಯತ್ತು ಬಯಲಾಗಿದೆ. ಆತ ಧರಿಸಿದ್ದ ವಿಗ್ ಹೊರಬಂದಿದೆ. ಈ ವೇಳೆ ವಧುವಿನ ಕುಟುಂಬದಿಂದ ಮರೆಮಾಡಲ್ಪಟ್ಟ ಸತ್ಯವನ್ನು ಎಲ್ಲರೂ ನೋಡಿದ್ದಾರೆ.

ವರನ ಬೋಳು ತಲೆ ಕಂಡು ವಧು ಮದುವೆಗೆ ಸುತರಾಂ ಒಲ್ಲೆ ಎಂದಿದ್ದಾಳೆ. ಅನೇಕರು ಆಕೆಯನ್ನು ಮನವೊಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪೊಲೀಸರು ಮಧ್ಯ ಪ್ರವೇಶಿಸಿದರೂ ಸಹ ವಧು ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.

Copyright © All rights reserved Newsnap | Newsever by AF themes.
error: Content is protected !!