January 30, 2026

Newsnap Kannada

The World at your finger tips!

sidda

Pic Credits : deccanherald.com

ನಾವು ಬಿಜೆಪಿ ಸರ್ಕಾರ ಬೀಳಿಸಲ್ಲ, ಬಿಜೆಪಿಯವರೇ ಬೀಳಿಸುತ್ತಾರೆ- ಸಿದ್ದರಾಮಯ್ಯ

Spread the love

ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಸ್ವತಃ ಬಿಜೆಪಿ ಪಕ್ಷದವರೇ ಕೆಳಗಿಳಿಸಲಿದ್ದಾರೆ. ಹಾಗಾಗಿ‌ ನಾವು ಸರ್ಕಾರ ಬೀಳಿಸಲು ಹೋಗಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಬದಾಮಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ‘ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಪ್ರಯತ್ನವಂತೂ ನಡೆಯುತ್ತಿದೆ. ಆದರೆ ಸಿಎಂ ಯಾರಾಗಲಿದ್ದಾರೆ ಎಂದು ತಿಳಿದಿಲ್ಲ‌. ಬಿಜೆಪಿಯಲ್ಲಿನ ಒಳ ಬಿಕ್ಕಟ್ಟುಗಳಿಂದ ಸರ್ಕಾರ ಬಿದ್ದರೆ ಚುಣಾವಣೆ ಎದುರಿಸಲು ಕಾಂಗ್ರೆಸ್ ಸಿದ್ದ’ ಎಂದರು.

‘ಶಿರಾ, ಆರ್‌ಆರ್ ನಗರದ ಉಪ ಚುಣಾವಣೆಯಲ್ಲಿ ಬಿಜೆಪಿ‌ ಆಗಲೇ ಗೆದ್ದಿದೆ. ಕೇವಲ ಫಲಿತಾಂಶ ಬರಬೇಕಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಆರ್‌ಆರ್ ನಗರ, ಶಿರಾ ಅವರ ಜೇಬಿನಲ್ಲಿದೆಯೇ?’ ಎಂದು ವ್ಯಂಗ್ಯವಾಡಿದರು.

ಬಸನಗೌಡ ಯತ್ನಾಳ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ‘ಪಾಪ ಅವರಿಗೂ ಬಿಸಿ ಮುಟ್ಟಿರುವದರಿಂದ ಸತ್ಯ ಹೊರಹಾಕುತ್ತಿದ್ದಾರೆ’ ಎಂದರು.

ನಿನ್ನೆ ಕುಮಾರಸ್ವಾಮಿ ಅವರ ಟೀಕೆಗೆ ಸಿದ್ದರಾಮಯ್ಯ ಅವರು ‘ಹೆಚ್‌ಡಿಕೆ ಮುಖ್ಯಮಂತ್ರಿ ಆಗಿದ್ದಾಗ ಕೆಲಸ ಮಾಡಲಿಲ್ಲ. ಈಗ ನಾನೇ ಸಮಿಶ್ರ ಸರ್ಕಾರ ಕೆಡವಿದೆ ಎಂದು ಹೇಳುತ್ತಿದ್ದಾರೆ. ಕುಣಿಯಲಾರದವರು‌ ನೆಲ ಡೊಂಕು ಅಂತ ಹೇಳಿದ ಹಾಗೆ. ಆ ವಿಚಾರದ ಬಗ್ಗೆ ಹೆಚ್ಚು ಮಾತನಾಡುವದಿಲ್ಲ’ ಎಂದು ಹೇಳಿದರು.

error: Content is protected !!