SSLC ನಂತರ ವಿದ್ಯೆ, ಉದ್ಯೋಗದ ಬೆಳಕು!

Team Newsnap
3 Min Read

ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದೇ ವಿದ್ಯಾರ್ಥಿ SSLC ನಂತರ ಮುಂದೇನು ಎಂಬುದನ್ನು ಅತ್ಯಂತ ಗಂಭೀರವಾಗಿ ಆಲೋಚಿಸುತ್ತಾನೆ. ಬಹುಶಃ ವಿದ್ಯಾರ್ಥಿಗಿಂತ ಪಾಲಕರಿಗೆ ತಮ್ಮ ಮಕ್ಕಳನ್ನು ಎಂತಹ ಕೋರ್ಸ್ ಗಳಿಗೆ ದಾಖಲಾತಿ ಮಾಡಿಸಬೇಕು ಹಾಗೂ ವೃತ್ತಿ ಆಯ್ಕೆ ಹೇಗೆ ಮಾಡಬೇಕು ಎಂಬ ದ್ವಂದ್ವ ಸಾಮಾನ್ಯವಾಗಿ ಕಾಡುತ್ತದೆ. ಪಾಲಕರಾದವರಿಗೆ ತಮ್ಮ ಮಕ್ಕಳು ಉತ್ತಮ ಕೋರ್ಸ್ ಆಯ್ಕೆಮಾಡಿಕೊಂಡು ಸಫಲತೆ ಪಡೆಯಲಿ ಎಂಬ ಕನಸು ಸಹಜವಾದದ್ದೆ.

ಇದನ್ನು ಓದಿ :ಇಂದು SSLC ಪರೀಕ್ಷಾ ಫಲಿತಾಂಶ

Contents
ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದೇ ವಿದ್ಯಾರ್ಥಿ SSLC ನಂತರ ಮುಂದೇನು ಎಂಬುದನ್ನು ಅತ್ಯಂತ ಗಂಭೀರವಾಗಿ ಆಲೋಚಿಸುತ್ತಾನೆ. ಬಹುಶಃ ವಿದ್ಯಾರ್ಥಿಗಿಂತ ಪಾಲಕರಿಗೆ ತಮ್ಮ ಮಕ್ಕಳನ್ನು ಎಂತಹ ಕೋರ್ಸ್ ಗಳಿಗೆ ದಾಖಲಾತಿ ಮಾಡಿಸಬೇಕು ಹಾಗೂ ವೃತ್ತಿ ಆಯ್ಕೆ ಹೇಗೆ ಮಾಡಬೇಕು ಎಂಬ ದ್ವಂದ್ವ ಸಾಮಾನ್ಯವಾಗಿ ಕಾಡುತ್ತದೆ. ಪಾಲಕರಾದವರಿಗೆ ತಮ್ಮ ಮಕ್ಕಳು ಉತ್ತಮ ಕೋರ್ಸ್ ಆಯ್ಕೆಮಾಡಿಕೊಂಡು ಸಫಲತೆ ಪಡೆಯಲಿ ಎಂಬ ಕನಸು ಸಹಜವಾದದ್ದೆ.ಯಾವುದೇ ಕೋರ್ಸ್/ ವೃತ್ತಿ ಆಯ್ಕೆ ಮಾಡುವಾಗ ಗಮನಿಸಬೇಕಾದ ಅಂಶಗಳು:SSLC ನಂತರ ಇರುವ ಆಯ್ಕೆಗಳು :ಪಿಯುಸಿ (PUC) : ವಿಜ್ಞಾನ – ವಾಣಿಜ್ಯ – ಕಲಾ (Science – Commerce – Arts)ಡಿಪ್ಲೋಮಾ : (Diploma)ಐಟಿಐ (ITI)ಪ್ಯಾರಾಮೆಡಿಕಲ್ (Para Medical)ಪಾಲಿಟೆಕ್ನಿಕ್ (Polytechnic)SSLC ನಂತರ ಆಯ್ಕೆ ಮಾಡುಬಹುದಾದ ಮೂರು ವರ್ಷಗಳ ಡಿಪ್ಲೋಮ ವಿಷಯಗಳುಪೋಷಕರಿಗೆ ಕಿವಿ ಮಾತು

ಬದಲಾವಣೆ ಜಗದ ನಿಯಮ, ಪ್ರತಿಹಂತದಲ್ಲೂ ಬದಲಾವಣೆ ಎಂಬುದು ಸಹಜವಾಗಿಯೇ ನಡೆಯುತ್ತದೆ,ಇಲ್ಲದಿದ್ದರೆ ಬೆಳವಣಿಗೆ ಎಂಬುದು ನಿಂತ ನೀರಾಗುವ ಸಾಧ್ಯತೆ ಇದೆ, ಜೀವನದಲ್ಲಿ ಬದಲಾವಣೆಯ ಗಾಳಿ ಪ್ರತಿ ಹಂತಗಳಲ್ಲೂ ಬೀಸುತ್ತದೆ,ಮುಖ್ಯವಾಗಿ ವಿದ್ಯಾರ್ಥಿ ಜೀವನದ ಹಂತದಲ್ಲಿ ಬೆಳವಣಿಗೆಯ ಮಹತ್ವ ಬಹಳ ಪ್ರಮುಖ ಪಾತ್ರವಹಿಸುತ್ತದೆ.

ಸುಶಿಕ್ಷಿತನಾದವನು ಸುಸಂಸ್ಕೃತನಾಗಬಲ್ಲ, ಸುಸಂಸ್ಕೃತನಾದವನು ಸುಸ್ಥಿರ ಸಮಾಜ ಕಟ್ಟಬಲ್ಲ,ಈ ಮಾತು ಪ್ರಸ್ತುತ ವಿದ್ಯಮಾನದಲ್ಲಿ ಮತ್ತಷ್ಟು
ಮುಂದುವರಿದು ಸುಶಿಕ್ಷಿತನು ಉದ್ಯೋಗಸ್ಥನಾಗಬಲ್ಲ. ಎಂಬಷ್ಟರ ಮಟ್ಟಿಗೆ ಬೆಳೆದು ಬಂದಿದೆ. ವೃತ್ತಿ, ಉದ್ಯೋಗ ನೀಡುವ ಶಿಕ್ಷಣವನ್ನು ಅರಸಿ ಸೂಕ್ತವಾದುದನ್ನು ಆಯ್ಕೆ ಮಾಡುವ ಪರ್ವಕಾಲವಿದು.

ಯಾವುದೇ ಕೋರ್ಸ್/ ವೃತ್ತಿ ಆಯ್ಕೆ ಮಾಡುವಾಗ ಗಮನಿಸಬೇಕಾದ ಅಂಶಗಳು:

  • ನಿಮ್ಮ ಭವಿಷ್ಯದ ಆಯ್ಕೆ ನಿಮ್ಮದೆ ಆಗಿದೆ.
  • ನಿಮ್ಮನ್ನು ನೀವು ವಿಶ್ಲೇಷಿಸಿಕೊಳ್ಳಿ.
  • ನಿಮ್ಮ ಆಯ್ಕೆಗಳನ್ನು ಮಿತಿಗೊಳಿಸಬೇಡಿ.
  • ಇತರರಿಂದ ಅರಿವನ್ನು ಹೊಂದಿ ಆದರೆ ನಿಮ್ಮ ಮೇಲೆ ವಿಶ್ವಾಸವಿಡಿ.
  • ನಿಮ್ಮ ಆದ್ಯತೆಗಳನ್ನು ಗಮನದಲ್ಲಿಟ್ಟಿಕೊಳ್ಳಿ.
  • ಕೋರ್ಸ್/ ವೃತ್ತಿ ಆಯ್ಕೆಗಳಿಗೆ ಮುಕ್ತ ಮನಸ್ಸಿನಿಂದ ಪರ್ಯಾಯಗಳನ್ನು ಚಿಂತಿಸಿ
  • ನಿಮ್ಮ ಶಕ್ತಿ, ದೌರ್ಬಲ್ಯ, ಅವಕಾಶಗಳನ್ನು ವಿಶ್ಲೇಷಿಸಿ
  • ನಿಮ್ಮ ಸಾಮರ್ಥ್ಯ ಮತ್ತು ಬುದ್ಧಿಶಕ್ತಿಯನ್ನು ಅನುಮಾನಿಸಬೇಡಿ
  • ನಿಮ್ಮ ಆಸಕ್ತಿಯಂತೆ ವೃತ್ತಿ ಆಯ್ಕೆ/ಕೋರ್ಸ್ ಗಳನ್ನು ಆರಿಸಿಕೊಳ್ಳಿ

SSLC ನಂತರ ಇರುವ ಆಯ್ಕೆಗಳು :

LIFE AFTER 10TH

ಪಿಯುಸಿ (PUC) : ವಿಜ್ಞಾನ – ವಾಣಿಜ್ಯ – ಕಲಾ (Science – Commerce – Arts)

ಡಿಪ್ಲೋಮಾ : (Diploma)

  • ವೆಬ್ ಇಂಜಿನಿಯರಿಂಗ್ (Web Engineering)
  • ವೆಬ್ ಡಿಸೈನಿಂಗ್ (Web Designing)
  • ಹೋಟೆಲ್ ಮ್ಯಾನೇಜ್ಮೆಂಟ್ (Hotel Management)
  • ಗೇಮ್ ಡಿಸೈನಿಂಗ್ (Game Designing)
  • ಪತ್ರಿಕೋಧ್ಯಮ (Journalism)
  • ಬೇಕರಿ (Baking)
  • ಛಾಯಗ್ರಹಣ (Cinematography)
  • ಆಹಾರ ತಂತ್ರಜ್ಞಾನ (Food Technology)
  • ಡಿಜಿಟಲ್ ಮಾರುಕಟ್ಟೆ (Digital Marketing)
  • ಮಾಹಿತಿ ತಂತ್ರಜ್ಞಾನ (Information Technology)
  • ಲಲಿತಕಲೆ (Art)
  • ಮೇಕಪ್ & ಸೌಂದರ್ಯ (Makeup)
  • ಆಂಗ್ಲಭಾಷಾ ಸಂಭಾಷಣೆ (English)
  • ಕಾರ್ಯಕ್ರಮ ನಿರ್ವಹಣೆ (Event Management)
  • ವಸ್ತ್ರ ವಿನ್ಯಾಸ (Fashion Designing)
  • ಅನಿಮೇಷನ್ ಗ್ರಾಫಿಕ್ ವಿನ್ಯಾಸ (Animation and Graphic Designing)
  • ಟೆಕ್ಸ್ಟೈಲ್ಸ್ ವಿನ್ಯಾಸ (Textiles Design)
  • ಲೆದರ್ ಇಂಜಿನಿಯರಿಂಗ್ (Leather Engineering)

ಐಟಿಐ (ITI)

  • ಇಲೆಕ್ಟ್ರಾನಿಕ್ (Electronics)
  • ವಿಕಿರಣ ತಂತ್ರಜ್ಞಾನಗಳು
  • ವಿಮಾ ಏಜೆಂಟ್ (Insurance Agent)
  • ಡಿಜಿಟಲ್ ಛಾಯಾಗ್ರಹಣ (Digital Cinematography)
  • ಪ್ಯಾಷನ್ ಡಿಸೈನಿಂಗ್ & ಟೆಕ್ನಾಲಜಿ (Fashion Designing & Technology)
  • ಹೊಲಿಗೆ ತಂತ್ರಜ್ಞಾನ (Stitching Technology)
  • ಟೂಲ್ ಮತ್ತು ಡೈ ತಯಾರಿಕೆ
  • ಕಂಪ್ಯೂಟರ್ ಆಪರೇಟರ್
  • ಪ್ರೊಗ್ರಾಮಿಂಗ್ ಆರ್ಟಿಸ್ಟ್

ಪ್ಯಾರಾಮೆಡಿಕಲ್ (Para Medical)

  • ಆಸ್ಪತ್ರೆ ಸಹಾಯಕದಲ್ಲಿ ಡಿಪ್ಲೊಮಾ
  • ಗ್ರಾಮೀಣ ಆರೋಗ್ಯ ಕಾಳಜಿ
  • ಲ್ಯಾಬ್ ತಂತ್ರಜ್ಞ
  • ಪ್ಯಾರಮೆಡಿಕಲ್ ನರ್ಸಿಂಗ್
  • ಶುಶ್ರೂಷಾ ನೆರವು
  • ಭೌತ ಚಿಕಿತ್ಸೆ
  • ವಿಕಿರಣ ಶಾಸ್ತ್ರ
  • ದಂತ ತಂತ್ರಜ್ಞಾನಗಳು
  • ಫಾರ್ಮಸಿ

ಪಾಲಿಟೆಕ್ನಿಕ್ (Polytechnic)

  • ಕಂಪ್ಯೂಟರ್ ಪ್ರೋಗ್ರಾಮಿಂಗ್
  • ಮಾರುಕಟ್ಟೆ ನಿರ್ವಹಣೆ
  • ಪೆಟ್ರೋಲಿಯಂ ಇಂಜಿಯರಿಂಗ್
  • ವ್ಯವಹಾರ ಆಡಳಿತ
  • ಅನಿಮೇಷನ್, ಕಲೆ ಮತ್ತು ವಿನ್ಯಾಸ
  • ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್
  • ಲೆಕ್ಕಪತ್ರ
  • ಬಾಲ್ಯದ ಶಿಕ್ಷಣ ಮತ್ತು ಆರೈಕೆ

SSLC ನಂತರ ಆಯ್ಕೆ ಮಾಡುಬಹುದಾದ ಮೂರು ವರ್ಷಗಳ ಡಿಪ್ಲೋಮ ವಿಷಯಗಳು

  • ಎಲೆಕ್ಟ್ರಿಕಲ್ ಇಂಜಿನಿಯರಿಂಗ್ (Electronic Engineering)
  • ಕೆಮಿಕಲ್ ಇಂಜಿನಿಯರಿಂಗ್ (Chemical Engineering)
  • ಮೆಟಾಲರ್ಜಿಕಲ್ ಇಂಜಿನಿಯರಿಂಗ್ (Metrology Engineering)
  • ಸಿವಿಲ್ ಇಂಜಿನಿಯರಿಂಗ್ (Civil Engineering)
  • ಮಾಹಿತಿ ತಂತ್ರಜ್ಞಾನ (Information Engineering)
  • ಪ್ಯಾಬ್ರಿಕೇಷನ್ ಇಂಜಿನಿಯರಿಂಗ್ (Fabrication Engineering)
  • ಆಟೋಮೊಬೈಲ್ ಇಂಜಿನಿಯರಿಂಗ್ (Automobile Engineering)
  • ಬಯೋಮೆಡಿಕಲ್ ಇಂಜಿನಿಯರಿಂಗ್ (Biomedical Engineering)
  • ಪ್ರೊಡಕ್ಷನ್ ಇಂಜಿನಿಯರಿಂಗ್ (Production Engineering)
  • ಮೆರೈನ್ ಇಂಜಿನಿಯರಿಂಗ್ (Miran Engineering)
  • ಏರೋಸ್ಪೇಸ್ ಇಂಜಿನಿಯರಿಂಗ್ (Aerospace Engineering)
  • ಪೆಟ್ರೋಲಿಯಂ ಇಂಜಿನಿಯರಿಂಗ್ (Petroleum Engineering)
  • ಮೈನಿಂಗ್ ಇಂಜಿನಿಯರಿಂಗ್ (Mining Engineering)

ಪೋಷಕರಿಗೆ ಕಿವಿ ಮಾತು

10TH KID

ತಂದೆ-ತಾಯಿಗಳ ಆಸೆ-ಆಕಾಂಕ್ಷೆಗಳು ಮಕ್ಕಳಿಗೆ ಒತ್ತಡ ತರುವಂತಿರಬಾರದು. ಪೋಷಕರು ತಮ್ಮ ಅನಿಸಿಕೆ ಆಸೆಗಳನ್ನು ಮಕ್ಕಳ ಮೇಲೆ ಬಲವಂತವಾಗಿ ಹೇರಿದರೆ ಮಕ್ಕಳು ತಮ್ಮ ಸಹಜ ಸಾಮರ್ಥ್ಯ ಮತ್ತು ಆಸಕ್ತಿಗಳನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿಯನ್ನು ಒದಗಿಸಬಾರದು. ಭವಿಷ್ಯದಲ್ಲಿ ಕೇವಲ ಹಣವನ್ನು ಸಂಪಾದಿಸುವ ಯಂತ್ರಗಳಂತೆ ನಮ್ಮ ಮಕ್ಕಳಾಗಬಾರದು. ಬದಲಿಗೆ ಮೌಲ್ಯ, ಸಂಸ್ಕೃತಿ, ರಾಷ್ಟ್ರೀಯತೆ, ದೇಶಪ್ರೇಮದಂತಹ ಉದಾತ್ತ ವಿಚಾರಗಳ ಗಣಿಯಂತೆ ಸಂಪನ್ನವಾದ ಬದುಕನ್ನು ಕಟ್ಟಿಕೊಂಡು ರಾಷ್ಟ್ರಕ್ಕಾಗಿ ಬದುಕುವ ಮನಸ್ಥಿತಿಯನ್ನು ಸದೃಢವಾಗಿಸಿ ತಾವು ಬದುಕಿ, ಸಮಾಜದ ಇತರರಿಗೂ ಆದರ್ಶವಾಗಬೇಕು.

Share This Article
Leave a comment