ಇರಾನ್ ಮೇಲೆ ಶಸ್ತ್ರಾಸ್ತ್ರ ಖರೀದಿಗೆ ವಿಶ್ವಸಂಸ್ಥೆ ಹೇರಿದ್ದ 10 ವರ್ಷ ಕಾಲದ ನಿರ್ಬಂಧ ಇಂದಿಗೆ ಅಂತ್ಯವಾಗಿದೆ. ಇನ್ನು ಮುಂದೆ ಇರಾನ್ ಯುದ್ಧ ವಿಮಾನಗಳು, ಟ್ಯಾಂಕರ್‌ಗಳನ್ನು ಇತರೆ ದೇಶಗಳಿಂದ ಖರೀದಿಸಬಹುದಾಗಿದೆ.
ಇರಾನ್ ಪ್ರಪಂಚದ ಇತರೆ ದೇಶಗಳ ವಿರೋಧದ ನಡುವೆಯೂ ಅಣ್ವಸ್ತ್ರ ಪ್ರಯೋಗಗಳಿಗೆ ಮುಂದಾದ್ದರಿಂದ ವಿಶ್ವಸಂಸ್ಥೆಯು ಇರಾನ್ ಮೇಲೆ ಶಸ್ತ್ರಾಸ್ತ್ರ ಖರೀದಿಸದಂತೆ 10 ವರ್ಷಗಳ ಕಾಲ ನಿರ್ಬಂಧ ಹೇರಿತ್ತು. ಅಲ್ಲದೇ ಅಮೇರಿಕಾ ಇರಾನ್ ಮೇಲೆ ಆರ್ಥಿಕ ದಿಗ್ಬಂಧನವನ್ನೂ ಹೇರಿತ್ತು.
ನಿರ್ಬಂಧ ತೆರವಾದ ಬಳಿಕ ಇರಾನ್‌ನ ವಿದೇಶಾಂಗ ಸಚಿವ ಮೊಹಮ್ಮದ್ ಜಾವದ್ ಜರೀಫ್ ‘ಇರಾನ್‌ನ ರಕ್ಷಣಾ ವ್ಯವಹಾರಗಳು ಈಗ ಮತ್ತೆ ಸಾಮಾನ್ಯ ಸ್ಥಿತಿಗೆ ಬಂದಂತಾಗಿದೆ. ಇದು ಈ ಭಾಗದ ಭದ್ರತೆ, ಶಾಂತಿ ಕಾಪಾಡುವ ನಿಟ್ಟಿನಲ್ಲಿ ಬಹುಪಕ್ಷೀಯ ಪ್ರಯತ್ನಕ್ಕೆ ಸಂದ ಜಯ’ ಎಂದು ಟ್ವೀಟ್ ಮಾಡಿದ್ದಾರೆ.
ನಿರ್ಬಂಧ ಕೊನೆಗೊಂಡ ನಂತರ, ಅಮೇರಿಕಾದ ರಕ್ಷಣಾ ಗುಪ್ತಚರ ಸಂಸ್ಥೆ, ಇರಾನ್ ಯುದ್ಧವಿಮಾನ ಪ್ರತಿರೋಧಿಸುವ ಕ್ಷಿಪಣಿ ವ್ಯವಸ್ಥೆ ಎಸ್–400, ರಷ್ಯಾದಿಂದ ಎಸ್‌ಯು–30 ಯುದ್ಧವಿಮಾನಗಳು, ಯಾಕ್–130 ತರಬೇತಿ ಯುದ್ಧವಿಮಾನಗಳು ಹಾಗೂ ಟಿ–90 ಟ್ಯಾಂಕ್‌ಗಳನ್ನು ಇರಾನ್ ಖರೀದಿಸುವ ಸಾಧ್ಯತೆ ಇದೆ ಹಾಗೂ ಚೀನಾದಿಂದಲೂ ಕೆಲವು ಶಸ್ತ್ರಾಸ್ತ್ರಗಳನ್ನು ಖರೀದಿಸಬಹುದು ಎಂದು ಅಂದಾಜು ಮಾಡಿದೆ.
ಆದರೆ ಅಮೇರಿಕ ಹೇರಿದ್ದ ದಿಗ್ಬಂಧನದಿಂದ ಇರಾನ್ ಸಾಕಷ್ಟು ಕಷ್ಟ ಅನುಭವಿಸಿತ್ತು. ಈಗ ಇರಾನ್‌ಗೆ ಶಸ್ತ್ರಾಸ್ತ್ರ ಪೂರೈಸಿದರೆ ಎಲ್ಲಿ ಅಮೇರಿಕಾ ತನಗೂ ಆರ್ಥಿಕ ದಿಗ್ಬಂಧನ ಹೇರುವುದೋ ಎಂದು ಅನೇಕ ದೇಶಗಳು ಇರಾನ್‌ಗೆ ಶಸ್ತ್ರಾಸ್ತ್ರ ಪೂರೈಸಲು ಹಿಂದೆ ಮುಂದೆ ನೋಡುತ್ತಿವೆ ಎನ್ನಲಾಗುತ್ತಿದೆ.
More Stories
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ