December 25, 2024

Newsnap Kannada

The World at your finger tips!

hike,electric,bill

SC/ST ಕುಟುಂಬಗಳಿಗೆ 75 ಯೂನಿಟ್‌ ಉಚಿತ ವಿದ್ಯುತ್:ಮೇ ನಲ್ಲೇ ಜಾರಿ -979 ಕೋಟಿ ರು ಹೊರೆ

Spread the love

ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವವರ (BPL)ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಕುಟುಂಬಗಳಿಗೆ ಪೂರೈಸುತ್ತಿರುವ ಉಚಿತ ವಿದ್ಯುತ್ ಪ್ರಮಾಣವನ್ನು ಹೆಚ್ಚಿಸಲು ಬಿಜೆಪಿ ಸರ್ಕಾರ ನಿರ್ಧರಿಸಲಾಗಿದೆ

(BPL) ಕಾರ್ಡು ಹೊಂದಿರುವವರಿಗೆ 40 ಯೂನಿಟ್ ಬದಲಿಗೆ ತಿಂಗಳಿಗೆ 75 ಯೂನಿಟ್‌ಗಳಿಗೆ ಉಚಿತ ನೀಡಲು ನಿರ್ಧರಿಸಲಾಗಿದೆ. ಸರ್ಕಾರದ ಈ ನಿರ್ಧಾರ ದಿಂದ ರಾಜ್ಯದ ಬೊಕ್ಕಸಕ್ಕೆ ವರ್ಷಕ್ಕೆ 979 ಕೋಟಿ ರೂ. ಹೊರೆ ಬೀಳಲಿದೆ.

ಏ. 5 ರಂದು ಬಾಬು ಜಗಜೀವನ್ ರಾಮ್ ಅವರ 115 ಜನ್ಮದಿನಾಚರಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಂಗಳಿಗೆ 40 ಯೂನಿಟ್ ಉಚಿತ ವಿದ್ಯುತ್ ಸೌಲಭ್ಯವನ್ನು ತಿಂಗಳಿಗೆ 75 ಯೂನಿಟ್‌ಗಳಿಗೆ ಹೆಚ್ಚಿಸುವುದಾಗಿ ಘೋಷಿಸಿದರು.

ಇದನ್ನು ಓದಿ :ದೆಹಲಿ ಅಗ್ನಿ ದುರಂತ :ಸಜೀವ ದಹನದ ಸಂಖ್ಯೆ 27 ಕ್ಕೆ ಏರಿಕೆ – 2 ಲಕ್ಷರು ಪರಿಹಾರ : ರಾಷ್ಟ್ರಪತಿ, ಪ್ರಧಾನಿಗಳಿಂದ ಸಂತಾಪ

ಸಿಎಂ ಘೋಷಣೆ ಮಾಡಿದ ಒಂದು ತಿಂಗಳೊಳಗೆ ಇಂಧನ ಇಲಾಖೆ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದೆ . ಅಂತಿಮ ಅನುಮೋದನೆಗಾಗಿ ಸಿಎಂ ನೇತೃತ್ವದ ಹಣಕಾಸು ಇಲಾಖೆಗೆ ಸಲ್ಲಿಸಿದೆ. ಈ ನಿರ್ಧಾರವು ಮೇ 2022 ರಿಂದಲೇ ಜಾರಿಗೆ ಬರಲಿದೆ ಎಂದು ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

1.46 ಕೋಟಿ ಗೃಹಬಳಕೆದಾರರು

ಇಂಧನ ಸಚಿವ ವಿ ಸುನೀಲ್ ಕುಮಾರ್ ಮಾಹಿತಿಯಂತೆ ಕರ್ನಾಟಕದಲ್ಲಿ ತಿಂಗಳಿಗೆ 75 ಯೂನಿಟ್‌ಗಿಂತ ಕಡಿಮೆ ಬಳಕೆ ಮಾಡುವ 1.46 ಕೋಟಿ ಗೃಹಬಳಕೆದಾರರಿದ್ದಾರೆ.

ಇದರಲ್ಲಿ, ಸುಮಾರು 39.26 ಲಕ್ಷ ಗ್ರಾಹಕರು ಕುಟೀರ ಜ್ಯೋತಿ ಮತ್ತು ಭಾಗ್ಯ ಜ್ಯೋತಿ ಕಾರ್ಯಕ್ರಮಗಳ ಅಡಿಯಲ್ಲಿ ವಾರ್ಷಿಕವಾಗಿ ಸುಮಾರು 1,35,692 ಮಿಲಿಯನ್ ಯುನಿಟ್ ಗಳನ್ನು ಬಳಸುತ್ತಾರೆ.
ಇಂಧನ ಇಲಾಖೆಯು ಎಸ್‌ಸಿ ಸಮುದಾಯಗಳಿಗೆ ಸೇರಿದ ಗ್ರಾಹಕರಿಗೆ 694.15 ಕೋಟಿ ರು ಮತ್ತು ಎಸ್‌ಟಿ ಗ್ರಾಹಕರಿಗೆ ಇನ್ನೂ 285.42 ಕೋಟಿ ರು ಸಬ್ಸಿಡಿಯನ್ನು ಬಿಡುಗಡೆ ಮಾಡುತ್ತದೆ ಎಂದರು

.ರಾಜ್ಯ ಸರ್ಕಾರ ಮೇ 1 ರಿಂದ ಪೂರ್ವಾನ್ವಯವಾಗಿ ಯೋಜನೆಯನ್ನು ಜಾರಿಗೆ ತರಲು ಬಯಸಿದೆ ಹೀಗಾಗಿ ಇಂಧನ ಇಲಾಖೆಯು ಈ ಸಮುದಾಯಗಳ ಕುಟುಂಬಗಳಿಗೆ ಯೋಜನೆಯ ಲಾಭ ಪಡೆಯಲು ಹೊಸ ನಿಯಮಗಳನ್ನು ರೂಪಿಸಿದೆ.ಈ ಗ್ರಾಹಕರಿಗೆ ಮಾಪನ ಮಾಡುವುದು ಕಡ್ಡಾಯವಾಗಿರುತ್ತದೆ ಮತ್ತು ಫಲಾನುಭವಿಗಳು ತಮ್ಮ ವಿದ್ಯುತ್ ಬಿಲ್ ಬಾಕಿಯನ್ನು ಏಪ್ರಿಲ್ 2022 ರವರೆಗೆ ಪಾವತಿ ಮಾಡಿರಬೇಕು ಫಲಾನುಭವಿಗಳು ತಮ್ಮ ಬ್ಯಾಂಕ್ ಪಾಸ್‌ಬುಕ್‌ನ ನಕಲನ್ನು ದಾಖಲೆಗಳೊಂದಿಗೆ ಸಲ್ಲಿಸಬೇಕು ಏಕೆಂದರೆ ಸಬ್ಸಿಡಿಯನ್ನು ಫಲಾನುಭವಿಯ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ ಎಂದು ಇಲಾಖೆ ಹೇಳಿದೆ.

Copyright © All rights reserved Newsnap | Newsever by AF themes.
error: Content is protected !!