ಮಂಡ್ಯದಲ್ಲಿ ಹಿಜಾಬ್ ವಿವಾದದ ಸಂದರ್ಭದಲ್ಲಿ ಮುಖ್ಯ ವೇದಿಕೆಯಲ್ಲಿ ಕಾಣಿಸಿಕೊಂಡ ವಿದ್ಯಾರ್ಥಿ ಮುಸ್ಕಾನ್ ವಿರುದ್ಧ ಬಲಪಂಥೀಯ ಗುಂಪುಗಳು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಿವೆ.
ಸೌದಿ ಅರೇಬಿಯಾಗೆ ಭೇಟಿ ನೀಡಿರುವ ಮುಸ್ಕಾನ್ ಕುಟುಂಬ ಸದಸ್ಯರು ಅಲ್ಲಿ ಯಾವುದೋ ನಿಷೇಧಿಕ ಗುಂಪುಗಳನ್ನು ಭೇಟಿ ಮಾಡಿದ್ದಾರೆ. ಈ ಹಿನ್ನೆಲೆ ಅವರ ವಿದೇಶ ಪ್ರವಾಸದ ಕುರಿತು ವಿಚಾರಣೆ ನಡೆಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಮೆಕ್ಕಾ ಪ್ರವಾಸಕ್ಕೆ ತೆರಳಿದ ಮಂಡ್ಯದ ಮುಸ್ಕಾನ್ ಕುಟುಂಬ, ಮುಸ್ಕನ್ ಸೌದಿ ಅರೇಬಿಯಾ ಪ್ರವಾಸದ ಕುರಿತು ಕುಟುಂಬ ಸದಸ್ಯರು ಬೇರೆಯದ್ದೇ ಮಾತುಗಳನ್ನು ಹೇಳುತ್ತಿದ್ದಾರೆ. ಧಾರ್ಮಿಕ ಯಾತ್ರೆಗಾಗಿ ಸೌದಿ ಅರೇಬಿಯಾಕ್ಕೆ ತೆರಳಿರುವುದಾಗಿ ಆಕೆಯ ಕುಟುಂಬ ಹೇಳಿಕೊಂಡಿದೆ.
ಇದನ್ನು ಓದಿ :ಅಶಿಸ್ತು, ಉದ್ಧಟತನ ತೋರಿದ ರಮ್ಮಾ -ಆರ್.ಧ್ರುವನಾರಾಯಣ್
ಮದೀನಾದಿಂದ ಮುಸ್ಕಾನ್ ತಂದೆ ಹುಸೇನ್ ಸೆಲ್ಫಿ
ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಮತ್ತವರ ಕುಟುಂಬ ವಿದೇಶಕ್ಕೆ ಹಾರಿತ್ತು. ಮದೀನಾದಿಂದ ಅವರ ತಂದೆ ಹುಸೇನ್ ಸೆಲ್ಫಿ ವಿಡಿಯೋ ಹಂಚಿಕೊಂಡಿದ್ದರು. ರಂಜಾನ್ ಪ್ರಯುಕ್ತ ಕುಟುಂಬ ಸಮೇತ ಮುಸ್ಕಾನ್ ಕುಟುಂಬ ವಿದೇಶಕ್ಕೆ ತೆರಳಿದ್ದು, ಪೊಲೀಸರಿಗೂ ಈ ಬಗ್ಗೆ ಮಾಹಿತಿ ನೀಡದೆ ಇರುವುದು ಅನುಮಾನಗಳನ್ನು ಹುಟ್ಟು ಹಾಕಿತ್ತು.
ಪೊಲೀಸರು ಮುಸ್ಕಾನ್ ಮನೆ ಬಳಿ ತೆರಳಿ ವಿಚಾರಿಸಿದಾಗಲೇ, ಕುಟುಂಬ ಸಮೇತ ಅವರು ವಿದೇಶಕ್ಕೆ ತೆರಳಿದ ವಿಚಾರ ತಿಳಿದಿತ್ತು. ಇದರ ಮಧ್ಯೆ ಮೇ ತಿಂಗಳ ಅಂತ್ಯದಲ್ಲಿ ಮುಸ್ಕಾನ್ ಕುಟುಂಬ ವಿದೇಶದಿಂದ ವಾಪಸ್ ಆಗಲಿದ್ದು, ಬಂದ ತಕ್ಷಣವೇ ಪೋಲಿಸ್ ಠಾಣೆ ಬರಲು ಸೂಚನೆ ನೀಡಲಾಗಿದೆ ಎಂಬ ತಿಳಿದು ಬಂದಿದೆ.
- ಸಂಸತ್ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
- ಸಿದ್ದರಾಮಯ್ಯ ಹೆಸರನ್ನು ರಸ್ತೆಗೆ ಇಟ್ಟರೆ ತಪ್ಪೇನು? – ಸಿಎಂ ಪರ ನಿಂತುಕೊಂಡ ಪ್ರತಾಪ್ ಸಿಂಹ
- ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ಏರ್ಸ್ಟ್ರೈಕ್: 15 ಮಂದಿ ಮೃತ್ಯು
- ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ !
- ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆ
More Stories
ಸಿದ್ದರಾಮಯ್ಯ ಹೆಸರನ್ನು ರಸ್ತೆಗೆ ಇಟ್ಟರೆ ತಪ್ಪೇನು? – ಸಿಎಂ ಪರ ನಿಂತುಕೊಂಡ ಪ್ರತಾಪ್ ಸಿಂಹ
ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ !
ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು