February 21, 2026

Newsnap Kannada

The World at your finger tips!

lipstick

100 ರು ಲಿಪ್‍ಸ್ಟಿಕ್‍ಗೆ ಆಸೆಗೆ 3 ಲಕ್ಷ ರು ಪಂಗನಾಮ – ಆನ್ ಲೈನ್ ವ್ಯವಹಾರದಲ್ಲಿ ನಡೆದ ಮೋಸ

Spread the love

ನೂರು ರೂಪಾಯಿ ಲಿಪ್‍ಸ್ಟಿಕ್ ಆಸೆಗೆ ಬಿದ್ದ ಬೆಂಗಳೂರಿನ ಯುವತಿಯೊಬ್ಬಳು ಮೂರೂವರೆ ಲಕ್ಷ ಪಂಗನಾಮ ಹಾಕಿಸಿಕೊಂಡಿದ್ದಾರೆ. ಬೆಂಗಳೂರಿನ ಹೆಬ್ಬಾಳ ಬಳಿಯ ನಾಗೇನಹಳ್ಳಿ ನಿವಾಸಿ ಯುವತಿಗೆ ಆನ್‍ಲೈನ್ ಡೆಲಿವರಿ ಕಂಪನಿಯಿಂದ ಕಾಲ್ ಮಾಡ್ತಿದ್ದೀವಿ ಮೇಡಂ ಅಂತಾ ಅಪರಿಚಿತ ವ್ಯಕ್ತಿಯೊಬ್ಬ ಕಾಲ್ ಮಾಡಿದ್ದ.

ನಮ್ಮಲ್ಲಿ ನೂರು ರೂಪಾಯಿ ಲಿಪ್‍ಸ್ಟಿಕ್ ಬುಕ್ ಮಾಡಿದರೆ, ಲಕ್ಷಾಂತರ ರೂಪಾಯಿ ಬಹುಮಾನ ಗೆಲ್ಲಬಹುದು ಅಂತಾ ಯುವತಿಗೆ ತಲೆ ಮೇಲೆ ಐಸ್ ಇಟ್ಟ.ಆತನ ಮಾತನ್ನು ನಂಬಿದ ಯುವತಿ ನೂರು ರೂಪಾಯಿ ತಾನೇ ಓಕೆ ಅಂತಾ ಹೇಳಿದಳು.

100 ರು ಬೆಲೆಯ ಲಿಪ್‍ಸ್ಟಿಕ್ ಬುಕ್ ಮಾಡಿದ ಯುವತಿಗೆ ಕೆಲ ನಿಮಿಷದಲ್ಲೇ ಆ ಕಡೆಯಿಂದ ಅಪರಿಚಿತ ಕಾಲ್ ಮಾಡಿ, ಮೇಡಂ ನಿಮಗೆ ಒಂದು ಲ್ಯಾಪ್ ಟಾಪ್ ಮತ್ತು ಐಫೋನ್ ಬಂಪರ್ ಬಹುಮಾನ ಬಂದಿದೆ ಎಂದು ಪುಂಗಿ ಊದಿದ. ಈ ಮಾತು ಕೇಳಿದ ಯುವತಿ ಫುಲ್ ಖುಷಿ ಆಗಿ ಥ್ಯಾಂಕ್ ಯೂ ಸರ್ ಅಂದ್ಲು. ಆಗ ಆ ಅಪರಿಚಿತ ವ್ಯಕ್ತಿ ನೀವೇ ಅಂತಾ ಕನ್ಫರ್ಮ್ ಮಾಡೋಕೆ ನಿಮಗೆ ಒಂದು ಲಿಂಕ್ ಕಳಿಸಿದ್ದೀನಿ ಅದನ್ನು ಓಕೆ ಮಾಡಿ ಅಂದಿದ್ದ.

ಇದನ್ನು ಓದಿ :ಮೇ 19ಕ್ಕೆ SSLC ಫಲಿತಾಂಶ ಪ್ರಕಟ

ಅಷ್ಟೇ ತಾನೇ ಅಂತಾ ಯುವತಿ ಆ ಲಿಂಕ್ ಓಕೆ ಮಾಡಿದ್ಲು. ಅಷ್ಟೇ ಕ್ಷಣಮಾತ್ರದಲ್ಲೇ ಆ ಯುವತಿ ಅಕೌಂಟ್ ನಲ್ಲಿದ್ದ 3,38000 ರು ಡೆಬಿಟ್ ಆಗಿದೆ ಅಂತಾ ಬ್ಯಾಂಕ್ ಕಡೆಯಿಂದ ಮಸೇಜ್ ಬಂದಿತ್ತು. ಯುವತಿ ಆ ಮಸೇಜ್ ನೋಡಿ ದಂಗಾಗಿ ಹೋಗಿ ಸುಧಾರಿಸಿಕೊಂಡ ನಂತರ ಬೆಂಗಳೂರು ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

error: Content is protected !!