ಇಂದು ಮಧ್ಯಾಹ್ನ 12:56ಕ್ಕೆ ವೃಷಭ ರಾಶಿಯಲ್ಲಿಯೇ ಅಸ್ತಮಿಸಲಿರುವ ಬುಧ ಮತ್ತೆ ಮೇ 30ಕ್ಕೆ ಸಹಜ ಸ್ಥಿತಿಗೆ ಮರಳಲಿದೆ. ಯಾವುದೇ ಗ್ರಹವು ಸೂರ್ಯನಿಗೆ ಸಮೀಪವಾದಾಗ ಆ ಗ್ರಹ ಅಸ್ತಮಿಸಿದೆ ಎಂದು ಹೇಳಲಾಗುವುದು. ಗ್ರಹವು ಅಸ್ತಮಿಸಿದಾಗ ಅದರ ಪ್ರಭಾವ 12 ರಾಶಿಗಳ ಮೇಲೂ ಇರುತ್ತದೆ.
ಜ್ಯೋತಿಷ್ಯದಲ್ಲಿ ಬುಧವನ್ನು ಬುದ್ಧಿವಂತಿಕೆ, ಜ್ಞಾನ ಮತ್ತು ಮಾಹಿತಿಯ ಗ್ರಹವೆಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಬಲವಾದ ಬುಧವು ತೀಕ್ಷ್ಣವಾದ ಬುದ್ಧಿವಂತಿಕೆ, ವಿಶ್ಲೇಷಣಾತ್ಮಕ ಸಾಮರ್ಥ್ಯ, ಮಾತುಗಾರಿಕೆ, ಕೌಶಲ್ಯ ಮತ್ತು ಉತ್ತಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.
ಇದನ್ನು ಓದಿ : ಮೇ 16 ರಂದು ವೃಶ್ಚಿಕ ರಾಶಿಯಲ್ಲಿ ಚಂದ್ರಗ್ರಹಣ – 3 ರಾಶಿಗಳಿಗೆ ಶುಭ
ಜಾತಕದಲ್ಲಿ ಬುಧದ ಸ್ಥಾನ ದುರ್ಬಲವಾಗಿದ್ದರೆ ಅದು ಶಿಕ್ಷಣದ ಕೊರತೆ, ಸಾಮರ್ಥ್ಯದ ಕೊರತೆ ಇತ್ಯಾದಿಗಳಿಗೆ ಕಾರಣವಾಗುತ್ತದೆ. ಬುಧದ ಧನಾತ್ಮಕ ಮತ್ತು ಋಣಾತ್ಮಕ ಫಲಿತಾಂಶಗಳು ಗೋಚರಿಸುತ್ತವೆ.
ಮೇಷ ರಾಶಿ
ಮೇಷ ರಾಶಿಯವರಿಗೆ, ಬುಧ ಮೂರನೇ ಮತ್ತು ಆರನೇ ಮನೆಯ ಅಧಿಪತಿಯಾಗಿದ್ದು ಅದು ಅವರ ಎರಡನೇ ಮನೆಯಲ್ಲಿ ಅಸ್ತಮಿಸಲಿದೆ. ವೃತ್ತಿಜೀವನದ ವಿಷಯದಲ್ಲಿ, ಈ ಸಮಯದಲ್ಲಿ ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವಲ್ಲಿ ಯಶಸ್ವಿಯಾಗಿ ,ಹೆಸರು ಮತ್ತು ಖ್ಯಾತಿಯನ್ನು ಸಹ ಪಡೆಯುತ್ತೀರಿ. ಹೊಸ ಯೋಜನೆಗಳಲ್ಲಿ ಕೆಲಸವನ್ನು ಪ್ರಾರಂಭಿಸಲು ಅನುಕೂಲಕರವಾಗಿದೆ.
ಪರಿಹಾರ: ಪ್ರತಿದಿನ ಬೆಳಗ್ಗೆ ಸೂರ್ಯ ದೇವರಿಗೆ ನಮಸ್ಕರಿಸುವುದು.
ವೃಷಭ ರಾಶಿ
ವೃಷಭ ರಾಶಿಯವರಿಗೆ ಬುಧವು ಎರಡನೇ ಮತ್ತು ಐದನೇ ಮನೆಯ ಅಧಿಪತಿಯಾಗಿದ್ದು ಅದು ಅವರ ಮೊದಲ ಮನೆಯಲ್ಲಿ ಅಸ್ತಮಿಸಲಿದೆ. ನಿಮ್ಮ ಲಗ್ನದಲ್ಲಿ ಬುಧದ ಸ್ಥಾನವು ನಿಮ್ಮ ವೃತ್ತಿಜೀವನದ ದೃಷ್ಟಿಯಿಂದ ಅನುಕೂಲಕರವಾಗಿದೆ. ನೀವು ಯಾವುದೇ ವ್ಯವಹಾರ ಮಾಡುತ್ತಿದ್ದರೆ ಉತ್ತಮ ಧನಾತ್ಮಕ ಫಲಿತಾಂಶಗಳನ್ನು ಕಾಣುತ್ತೀರಿ. ಆರ್ಥಿಕವಾಗಿ ನೀವು ಆದಾಯ ಮತ್ತು ಖರ್ಚು ಎರಡನ್ನೂ ಸಮದೂಗಿಸಬೇಕಾಗುವುದು.
ಪರಿಹಾರ: ಪ್ರತಿದಿನ 14 ಬಾರಿ “ಓಂ ಬುಧಾಯ ನಮಃ” ಜಪಿಸಿ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ಅವಧಿ ಅನುಕೂಲಕರವಲ್ಲ, ಮಿಥುನ ರಾಶಿಯವರಿಗೆ ಬುಧನು ಮೊದಲ/ಲಗ್ನ ಮತ್ತು ನಾಲ್ಕನೇ ಮನೆಯ ಅಧಿಪತಿಯಾಗಿದ್ದು ಈ ಅವಧಿಯಲ್ಲಿ ನಿಮ್ಮ ಹನ್ನೆರಡನೇ ಮನೆಯಲ್ಲಿ ಅಸ್ತಮಿಸುತ್ತದೆ. ವೃತ್ತಿಪರವಾಗಿ ಈ ಅವಧಿಯು ಕೆಲವು ತೊಂದರೆಗಳಿಂದ ಕೂಡಿದೆ, ಕೆಲಸದ ಒತ್ತಡ, ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡದಿರಿ.
ಪರಿಹಾರ: ಬುಧವಾರದಂದು ಬಡ ಮಕ್ಕಳಿಗೆ ಆಹಾರ ನೀಡುವುದು.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಬುಧ ಮೂರನೇ ಮತ್ತು ಹನ್ನೆರಡನೇ ಮನೆಯ ಅಧಿಪತಿಯಾಗಿದ್ದು ಅದು ಈ ಅಧಿಯಲ್ಲಿ ಹನ್ನೊಂದನೇ ಮನೆಯಲ್ಲಿ ಅಸ್ತಮಿಸುತ್ತದೆ. ವೃತ್ತಿಪರವಾಗಿ ನೋಡಿದರೆ, ಹೆಚ್ಚಿನ ಮಟ್ಟಿಗೆ ನೀವು ಧನಾತ್ಮಕ ಫಲಿತಾಂಶಗಳನ್ನು ನೋಡುತ್ತೀರಿ ಆದರೆ ಅದೇ ಸಮಯದಲ್ಲಿ ನೀವು ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ನೀವು ನಿಮ್ಮ ಸ್ವಂತ ವ್ಯವಹಾರವನ್ನು ನಡೆಸುತ್ತಿದ್ದರೆ ಈ ಅವಧಿಯಲ್ಲಿ ಲಾಭ ಮತ್ತು ನಷ್ಟ ಎರಡೂ ಸಾಧ್ಯ. ಮತ್ತೊಂದೆಡೆ, ಈ ಅವಧಿಯಲ್ಲಿ ವಿದೇಶದಿಂದ ವ್ಯಾಪಾರ ಮಾಡಲು ಅವಕಾಶಗಳನ್ನು ಪಡೆಯುವ ಸಾಧ್ಯತೆಯಿದೆ.
ಪರಿಹಾರ: ಬುಧವಾರದಂದು ಹಸುಗಳಿಗೆ ಆಹಾರ ಕೊಡಿ
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಬುಧ ಎರಡನೇ ಮತ್ತು ಹನ್ನೊಂದನೇ ಮನೆಯ ಅಧಿಪತಿಯಾಗಿದ್ದು, ನಿಮ್ಮ ಹತ್ತನೇ ಮನೆಯಲ್ಲಿ ಅಸ್ತಮಿಸಲಿದೆ.ಉದ್ಯೋಗದಲ್ಲಿ ಬದಲಾವಣೆ ಅಥವಾ ವರ್ಗಾವಣೆಯನ್ನು ಎದುರಿಸಬೇಕಾಗಬಹುದು. ನಿಮ್ಮ ಕೋಪ ಮತ್ತು ಅಹಂ ನಿಯಂತ್ರಿಸಲು ನಿಮಗೆ ಸಲಹೆ ನೀಡಲಾಗಿದೆ, ಇಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಮತ್ತೊಂದೆಡೆ, ನೀವು ಆರೋಗ್ಯದ ವಿಷಯದಲ್ಲಿ ಸ್ವಲ್ಪ ಮಾನಸಿಕ ಒತ್ತಡವನ್ನು ಹೊಂದಿರಬಹುದು, ಆರೋಗ್ಯವು ಉತ್ತಮವಾಗಿರುತ್ತದೆ.
ಪರಿಹಾರ: ಪ್ರತಿದಿನ ಲಿಂಗಾಷ್ಟಕವನ್ನುಪಠಿಸುವುದು
ಕನ್ಯಾ ರಾಶಿ
ಕನ್ಯಾ ರಾಶಿಯರಿಗೆ ಬುಧವು ಮೊದಲ / ಲಗ್ನ ಮತ್ತು ಹತ್ತನೇ ಮನೆಯ ಅಧಿಪತಿಯಾಗಿದ್ದು ನಿಮ್ಮ ಒಂಬತ್ತನೇ ಮನೆಯಲ್ಲಿ ಅಸ್ತಮಿಸಲಿದೆ. ವೃತ್ತಿಪರವಾಗಿ ನೋಡಿದರೆ, ಈ ಸಮಯದಲ್ಲಿ ನೀವು ಹೊಸ ಉದ್ಯೋಗಾವಕಾಶಗಳನ್ನು ಪಡೆಯುತ್ತೀರಿ ಮತ್ತು ನಿಮ್ಮ ವೃತ್ತಿಪರ ಜೀವನವು ಸಕಾರಾತ್ಮಕತೆಯಿಂದ ಕೂಡಿರುತ್ತದೆ.
ಪರಿಹಾರ: ಪ್ರತಿದಿನ “ವಿಷ್ಣು ಸಹಸ್ರನಾಮ” ಪಠಣ.
ತುಲಾ ರಾಶಿ
ತುಲಾ ರಾಶಿಯವರಿಗೆ, ಬುಧ ಒಂಬತ್ತನೇ ಮತ್ತು ಹನ್ನೆರಡನೇ ಮನೆಯ ಅಧಿಪತಿಯಾಗಿದ್ದು ನಿಮ್ಮ ಎಂಟನೇ ಮನೆಯಲ್ಲಿ ಅಸ್ತಮಿಸಲಿದೆ. ವೃತ್ತಿಪರವಾಗಿ ಉದ್ಯೋಗದಲ್ಲಿರುವವರು ತಮ್ಮ ಕೆಲಸವನ್ನು ಸಮಯಕ್ಕೆ ಪೂರ್ಣಗೊಳಿಸಲು ಕೆಲವು ಅಡೆತಡೆಗಳನ್ನು ಎದುರಿಸಬಹುದು. ನೀವು ನಿಮ್ಮ ಸ್ವಂತ ವ್ಯವಹಾರವನ್ನು ನಡೆಸುತ್ತಿದ್ದರೆ ಈ ಸಮಯದಲ್ಲಿ ನಷ್ಟದ ಸಾಧ್ಯತೆಯಿದೆ ಆದ್ದರಿಂದ ಎಚ್ಚರಿಕೆಯಿಂದ ವ್ಯವಹಾರ ಮಾಡಿ, ನಿಮ್ಮ ವೈಯಕ್ತಿಕ ಜೀವನದಲ್ಲೂ ಏರಿಳಿತಗಳನ್ನು ಕಾಣಬಹುದು.
ಪರಿಹಾರ: ಶುಕ್ರವಾರದಂದು ಲಕ್ಷ್ಮಿ ದೇವಿಗೆ ತುಪ್ಪದ ದೀಪವನ್ನು ಹಚ್ಚಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಬುಧ ಎಂಟನೇ ಮತ್ತು ಹನ್ನೊಂದನೇ ಮನೆಯ ಅಧಿಪತಿಯಾಗಿದ್ದು ನಿಮ್ಮ ಏಳನೇ ಮನೆಯಲ್ಲಿ ಅಸ್ತಮಿಸಲಿದೆ. ವೃತ್ತಿಪರವಾಗಿ ನೋಡಿದರೆ, ಈ ಸಮಯದಲ್ಲಿ ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು, ಹಾಗೆಯೇ ನೀವು ಕೆಲವು ಕಷ್ಟಕರ ಸಂದರ್ಭಗಳನ್ನು ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಬಹಳ ಎಚ್ಚರಿಕೆಯಿಂದ ಕೆಲಸ ಮಾಡುವುದು ಉತ್ತಮ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಮತ್ತು ನಿಮ್ಮ ಆಹಾರದ ಬಗ್ಗೆಯೂ ಗಮನ ಕೊಡಿ.
ಪರಿಹಾರ: ಪ್ರತಿದಿನ 11 ಬಾರಿ “ಓಂ ನಮೋ ಭಗವತೇ ವಾಸುದೇವಾಯ” ಎಂದು ಜಪಿಸಿ.
ಧನು ರಾಶಿ
ಧನು ರಾಶಿಯವರಿಗೆ ಬುಧ ಗ್ರಹವು ಏಳನೇ ಮತ್ತು ಹತ್ತನೆಯ ಅಧಿಪತಿಯಾಗಿದ್ದು ಅದು ನಿಮ್ಮ ಆರನೇ ಮನೆಯಲ್ಲಿ ಅಸ್ತಮಿಸಲಿದೆ. ವೃತ್ತಿಪರವಾಗಿ, ವೃತ್ತಿಜೀವನದ ಬೆಳವಣಿಗೆಯು ಈ ಅವಧಿಯಲ್ಲಿ ಸಾಧ್ಯವಾಗುತ್ತದೆ, ಜೊತೆಗೆ ಎಲ್ಲಾ ಕೆಲಸಗಳು ಉತ್ತಮವಾಗಿ ಮತ್ತು ಸಮಯಕ್ಕೆ ಪೂರ್ಣಗೊಳ್ಳುತ್ತವೆ. ಇದರ ಪರಿಣಾಮವಾಗಿ ನಿಮಗೆ ಪ್ರಶಂಸೆ, ಪ್ರೋತ್ಸಾಹ ಎಲ್ಲಾ ಸಿಗುವುದು. ನೀವು ನಿಮ್ಮ ಸ್ವಂತ ವ್ಯವಹಾರವನ್ನು ನಡೆಸುತ್ತಿದ್ದರೆ ಈ ಸಮಯದಲ್ಲಿ ನೀವು ಬಯಸಿದ ಲಾಭವನ್ನು ಗಳಿಸುವಲ್ಲಿ ಕೆಲವು ತೊಂದರೆಗಳನ್ನು ಎದುರಿಸಬಹುದು.
ಪರಿಹಾರ: ಪ್ರತಿದಿನ 11 ಬಾರಿ “ಓಂ ಗುರುವೇ ನಮಃ” ಎಂದು ಜಪಿಸಿ.
ಮಕರ
ಮಕರ ರಾಶಿಯವರಿಗೆ ಬುಧ 6 ಮತ್ತು 9 ನೇ ಮನೆಯ ಅಧಿಪತಿಯಾಗಿದ್ದು ಮೇ 13ಕ್ಕೆ ನಿಮ್ಮ ಐದನೇ ಮನೆಯಲ್ಲಿ ಅಸ್ತಮಿಸಲಿದೆ. ವೃತ್ತಿ ಜೀವನದ ಬಗ್ಗೆ ಕೆಲವು ಸವಾಲುಗಳನ್ನು ಎದುರಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ಕೆಲಸದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಮತ್ತು ನಿಮ್ಮ ಕಾರ್ಯಗಳನ್ನು ಸಮಯಕ್ಕೆ ಪೂರ್ಣಗೊಳಿಸಲು ಸರಿಯಾಗಿ ಪ್ಲ್ಯಾನ್ ಮಾಡಬೇಕಾಗುತ್ತದೆ. ಮಾನಸಿಕ ಒತ್ತಡವು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ ಮತ್ತು ಯೋಗ, ವ್ಯಾಯಾಮ ಮತ್ತು ಧ್ಯಾನ ಇತ್ಯಾದಿಗಳನ್ನು ಮಾಡಿ.
ಪರಿಹಾರ: ಹನುಮಾನ್ ಚಾಲೀಸಾ ಪಠಿಸಿ.
ಕುಂಭ ರಾಶಿ: ಕುಂಭ ರಾಶಿಯವರಿಗೆ ಬುಧವು ಐದನೇ ಮತ್ತು ಎಂಟನೇ ಮನೆಯ ಅಧಿಪತಿಯಾಗಿದ್ದು ಈ ಅವಧಿಯಲ್ಲಿ ನಿಮ್ಮ ನಾಲ್ಕನೇ ಮನೆಯಲ್ಲಿ ಅಸ್ತಮಿಸುತ್ತದೆ. ವೃತ್ತಿಜೀವನದ ವಿಷಯದಲ್ಲಿ ನೀವು ಸರಾಸರಿ ಫಲಪ್ರದ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ಈ ಸಮಯದಲ್ಲಿ ನೀವು ನಿಮ್ಮ ವೃತ್ತಿಜೀವನದಲ್ಲಿ ಹೊಸ ಪ್ರಯೋಜನಗಳನ್ನು ಪಡೆಯುತ್ತೀರಿ ಆದರೆ ಅವು ನಿಮಗೆ ಸೂಕ್ತವಲ್ಲದಿರಬಹುದು ಮತ್ತು ನೀವು ಅತೃಪ್ತರಾಗಬಹುದು.ಆರೋಗ್ಯದ ಬಗ್ಗೆ ನೋಡುವುದಾದರೆ ಕಾಲುಗಳಲ್ಲಿ ನೋವು ಕಾಣಿಸಬಹುದು. ಆದ್ದರಿಂದ ಯೋಗ, ವ್ಯಾಯಾಮ ಇತ್ಯಾದಿಗಳನ್ನು ಮಾಡುವುದು ಉತ್ತಮ.
ಪರಿಹಾರ: ಶನಿವಾರದಂದು ಬಡ ರೋಗಿಗಳಿಗೆ ಆಹಾರ, ಔಷಧ ನೀಡಿ.
ಮೀನ ರಾಶಿ
ಮೀನ ರಾಶಿಯವರಿಗೆ ಬುಧವು ನಾಲ್ಕನೇ ಮತ್ತು ಏಳನೇ ಮನೆಯ ಅಧಿಪತಿಯಾಗಿದ್ದು ನಿಮ್ಮ ಮೂರನೇ ಮನೆಯಲ್ಲಿ ಅಸ್ತಮಿಸುತ್ತದೆ. ನಿಮ್ಮ ಕೆಲಸದಲ್ಲಿ ಬದಲಾವಣೆಯನ್ನು ಕಾಣಬಹುದು. ಅಲ್ಲದೆ, ನೀವು ವಿದೇಶ ಪ್ರವಾಸ ಮಾಡಬೇಕಾಗಬಹುದು ಮತ್ತು ಅಂತಹ ಸಂದರ್ಭಗಳು ನಿಮಗೆ ಸ್ವಲ್ಪ ಸವಾಲಾಗಿರಬಹುದು. ನೀವು ನಿಮ್ಮ ಸ್ವಂತ ವ್ಯವಹಾರವನ್ನು ನಡೆಸುತ್ತಿದ್ದರೆ ಈ ಸಮಯದಲ್ಲಿ ನೀವು ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಲಾಭವನ್ನು ಪಡೆಯಬಹುದು. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಆಹಾರಕ್ರಮದ ಕಡೆಗೂ ವಿಶೇಷ ಗಮನ ಹರಿಸಿ.
ಪರಿಹಾರ: ಪ್ರಮುಖ ಕೆಲಸಕ್ಕೆ ಹಿರಿಯರ ಆಶೀರ್ವಾದ ಪಡೆಯಿರಿ.
- KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
- Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
- ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ
More Stories
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!