ನಟ ಕೃಷ್ಣಮೂರ್ತಿ ನಾಡಿಗ್ ವಿಧಿವಶ

Team Newsnap
1 Min Read
Image source : google / Picture credits : kannada.news18.com

ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ನಟ ಕೃಷ್ಣಮೂರ್ತಿ ನಾಡಿಗ್ ಶಬಿವಾರ ರಾತ್ರಿ‌ ವಿಧಿವಶರಾಗಿದ್ದಾರೆ.

ಶನಿವಾರ ಚಿತ್ರೀಕರಣದ ವೇಳೆ ಕೃಷ್ಣಮೂರ್ತಿ ಅವರಿಗೆ ವಿಪರೀತ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಚಿಕಿತ್ಸೆ ಫಲಿಸದೇ ಅವರು ವಿಧಿವಶರಾದರು.

ಕೃಷ್ಣಮೂರ್ತಿಯವರು ಮೂರು ದಿನಗಳಿಂದ ಎದೆ ನೋವಿನಿಂದ ಬಳಲುತ್ತಿದ್ದರು. ಆದರೆ ಕೃಷ್ಣಮೂರ್ತಿ ಗ್ಯಾಸ್ಟ್ರಿಕ್ ಇರಬಹುದು ಎಂದು ಉಪೇಕ್ಷೆ ಮಾಡಿದುದೇ ಅವರ ಜೀವಕ್ಕೆ ಮುಳುವಾಯಿತು.

ಕೃಷ್ಣಮೂರ್ತಿ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಲೇಖಕರಾಗಿ, ವ್ಯವಸ್ಥಪಕರಾಗಿ ನಟರಾಗಿ ಹೆಸರು ಮಾಡಿದ್ದರು. ತಮ್ಮ 50 ವರ್ಷಗಳ ಹಿರಿತೆರೆ ಹಾಗೂ ಕಿರುತೆರೆ ನಂಟಿನಲ್ಲಿ 60 ಕ್ಕೂ ಹೆಚ್ಚು ಚಿತ್ರಗಳಿಗೆ ಸಂಭಾಷಣೆ, ಚಿತ್ರಕತೆ ಬರೆದು ನಿರ್ಮಾಣ ನಿರ್ವಹಿಸಿ ಖಾಸಗಿ ಸುದ್ದಿ ವಾಹಿನಿಯಲ್ಲಿ ಕರ್ನಾಟಕದ ಸಾಂಸ್ಕೃತಿಕ ಜಗತ್ತನ್ನು ಪರಿಚಯಿಸುತ್ತಿದ್ದರು. ಜೊತಗೆ ಕನ್ನಡದ ಹಲವು ಧಾರವಾಹಿಗಳಲ್ಲಿ ಕೃಷ್ಣಮೂರ್ತಿ ನಾಡಿಗ ಅವರು ನಟನೆ ಮಾಡಿದ್ದರು.

ಇಂದು ಚಾಮರಾಜಪೇಟೆಯ ಚಿತಾಗಾರದಲ್ಲಿ‌ ಅವರ ಅಂತ್ಯಕ್ರಿಯೆ ನಡೆಯಲಿದೆ. ಕೃಷ್ಣಮೂರ್ತಿ ಅವರು ತಮ್ಮ ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

Share This Article
Leave a comment