December 25, 2024

Newsnap Kannada

The World at your finger tips!

PSI BROTHER

PSI ನೇಮಕಾತಿ ಅಕ್ರಮ: ತಮ್ಮನ ಬಂಧನ – ನೊಂದ ಅಣ್ಣ ಆತ್ಮಹತ್ಯೆಗೆ ಶರಣು

Spread the love

PSI ನೇಮಕಾತಿ ಹಗರಣದಲ್ಲಿ ತಮ್ಮನ ಬಂಧನವಾದ ನಂತರ ನೊಂದುಕೊಂಡ ಅಣ್ಣ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದಲ್ಲಿ ಜರುಗಿದೆ. ಹಾಸನದ ಗುಂಜೇವು ಗ್ರಾಮದ ಮನುಕುಮಾರ್ ಎಂಬಾತ ಪಿಎಸ್​ಐ ಪರೀಕ್ಷೆ ಬರೆದು ಆಯ್ಕೆಯಾಗಿದ್ದ.

ನೇಮಕಾತಿ ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಪಿಎಸ್​ಐ ಅಭ್ಯರ್ಥಿಗಳನ್ನು ವಿಚಾರಣೆ ನಡೆಸಿದ್ದ ಸಿಐಡಿ ಪೊಲೀಸರು ಕೆಲವರನ್ನು ಬಂಧನ ಮಾಡಿದ್ದರು.ಈ ಹಂತದಲ್ಲಿ ಸಿಐಡಿ ಅಧಿಕಾರಿಗಳು ಅಭ್ಯರ್ಥಿ ಮನುಕುಮಾರ್​ನನ್ನೂ ಬಂಧಿಸಿದ್ದರು. ಪ್ರಕರಣದಲ್ಲಿ ತಮ್ಮನ ಬಂಧನವಾಗುತ್ತಿದ್ದಂತೆ ಅಣ್ಣ ವಾಸು ತುಂಬಾ ನೊಂದುಕೊಂಡಿದ್ದ ಎನ್ನಲಾಗಿದೆ.

ಇದನ್ನು ಓದಿ :PSI ನೇಮಕಾತಿ ಅಕ್ರಮ: ನಾಗಮಂಗಲ ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶರತ್ ಬಂಧನ

ತಮ್ಮನನ್ನು ಪಿಎಸ್​ಐ ಮಾಡಲು ವಾಸು ಸಾಲ ಮಾಡಿ ಹಣ ಕೊಟ್ಟಿರುವ ಶಂಕೆಯೂ ಇದೆ, ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ. ಮತ್ತೊಂದು ಕಡೆ ವಾಸುನ ಅಂತಿಮ‌ ದರ್ಶನಕ್ಕೆ ಮನುಕುಮಾರ್​ನನ್ನು ಕರೆದೊಯ್ಯಲು ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ. ಸದ್ಯ ಮನುಕುಮಾರ್ ಸಿಐಡಿ ಕಸ್ಟಡಿಯಲ್ಲಿದ್ದಾನೆ.

Copyright © All rights reserved Newsnap | Newsever by AF themes.
error: Content is protected !!