December 26, 2024

Newsnap Kannada

The World at your finger tips!

police 1

ಪರೀಕ್ಷೆ ಬರೆಯಲು ಹೋದ ಅಪ್ರಾಪ್ತೆ ಪುತ್ರಿ: ತಾಯಿಯ ಕಣ್ಣೆದುರೆ ಪ್ರಿಯಕರ ಜೊತೆ ಪರಾರಿ

Spread the love

ಪಿಯುಸಿ‌ ಪರೀಕ್ಷೆ ಬರೆಯಲು ಹೋಗಿದ್ದ ಅಪ್ರಾಪ್ತೆ ವಿದ್ಯಾರ್ಥಿನಿ ಪ್ರಿಯಕರನ ಜೊತೆ ಕಾರಿನಲ್ಲಿ ಎಸ್ಕೇಪ್ ಆದ ಘಟನೆ ಚಾಮರಾಜ ನಗರದಲ್ಲಿ ನಡೆದಿದೆ.

ಪುತ್ರಿ ಪಿಯುಸಿ ಪರೀಕ್ಷೆ ಬರೆಯಲು ಹೋದಾಗ ಜೊತೆಗೆ ಸ್ವತಃ ತಾಯಿ ಕೂಡ ಹೋಗಿದ್ದರು. ತಾಯಿಯ ಕಣ್ಣೆದುರೆ ಯುವತಿ ಪ್ರಿಯಕರನ ಜೊತೆ ಕಾರಿನಲ್ಲಿ ಓಡಿ ಹೋಗಿದ್ದಾಳೆ. ತಕ್ಷಣದಲ್ಲಿ ಏನೊಂದೂ ತೋಚದ ತಾಯಿ, ಬಳಿಕ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ದಾರೆ.

ಈ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಕಾಲೇಜೊಂದರಲ್ಲಿ ಈ ಘಟನೆ ನಡೆದಿದೆ.

ಮೇ 6ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೊಳ್ಳೇಗಾಲದ  ಕಾಲೇಜೊಂದರಲ್ಲಿ ಅಪ್ರಾಪ್ತೆ, ಪಿಯುಸಿ ಪರೀಕ್ಷೆ ಬರೆಯಲು ಹೋಗಿದ್ದಳು. ಆಗ ಮಗಳಿಗಾಗಿ ತಾಯಿ, ಪರೀಕ್ಷಾ ಕೇಂದ್ರದ ಬಳಿಯೇ ಕಾದು ಕುಳಿತಿದ್ದರು. ಆದರೆ ಪರೀಕ್ಷೆ ಮುಗಿಸಿ ಬರುತ್ತಿದ್ದಂತೆ ಯುವತಿ ತಾಯಿಯ ಕಣ್ತಪ್ಪಿಸಿ, ಪ್ರಿಯಕರನ ಜೊತೆ ಎಸ್ಕೇಪ್ ಆಗಿದ್ದಾಳೆ.

Copyright © All rights reserved Newsnap | Newsever by AF themes.
error: Content is protected !!