November 16, 2024

Newsnap Kannada

The World at your finger tips!

God , sriram , ramanavami

ಆದರ್ಶ ಪುರುಷ , ಮರ್ಯಾದಾ ಪುರುಷೋತ್ತಮ ಶ್ರೀರಾಮ maryada puruṣhottama srirama

ರಾಜ್ಯದಲ್ಲಿ ಧರ್ಮಯುದ್ಧ ಆರಂಭ: ಆಜಾನ್‌ ವಿರುದ್ಧವಾಗಿ ಸುಪ್ರಭಾತ, ಓಂಕಾರ, ಹನುಮಾನ ಚಾಲೀಸಾ

Spread the love

ರಾಜ್ಯದಲ್ಲಿ ಆಜಾನ್ ವರ್ಸಸ್ ಸುಪ್ರಭಾತ ಧರ್ಮಯುದ್ಧ ಆರಂಭವಾಗಿದೆ. ಸರ್ಕಾರಕ್ಕೆ ನೀಡಿದ್ದ ಗಡುವು ಮುಕ್ತಾಯವಾದ ಹಿನ್ನೆಲೆಯಲ್ಲಿಮೇ9 ರಿಂದ ಹಿಂದೂ ದೇವಾಲಯಗಳಲ್ಲಿ ಹನುಮಾನ್ ಚಾಲೀಸಾ, ಸುಪ್ರಭಾತ, ಓಂಕಾರ ಸದ್ದು ಮೊಳಗಳಿವೆ.

ಹಲವು ಜಿಲ್ಲೆಗಳಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಹನುಮಾನ್ ಚಾಲೀಸಾ ಪಠಣ ಮಾಡಿದ್ದಾರೆ.

ಮಸೀದಿ ಮೇಲಿನ ಮೈಕ್ ತೆರವಿಗೆ ಆಗ್ರಹಿಸಿ ಶ್ರೀರಾಮ ಸೇನೆ ಸಂಘಟನೆಯ ಪ್ರಮೋದ್ ಮುತಾಲಿಕ್ ಕರೆಕೊಟ್ಟಿದ್ದರು.

ಇದನ್ನು ಓದಿ : `ಛೋಟಾ ಪಾಕಿಸ್ತಾನ್’ ಘೋಷಣೆ ಕೂಗಿದರೆ ಎನ್ ಕೌಂಟರ್ ಮಾಡಿ : ಪ್ರಮೋದ್ ಮುತಾಲಿಕ್

ಅಜಾನ್ ಧ್ವನಿ ವರ್ಧಕ ತೆಗೆಯದಿದ್ದರೇ ನಾವು ಸುಪ್ರಭಾತ ಹಾಗೂ ಭಜನಾ ಅಭಿಯಾನ ಶುರು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.

ಇದರಂತೆ ಇಂದು ಬೆಳಗ್ಗೆ ವಿಜಯಪುರದ ಜಮಖಂಡಿ ರಸ್ತೆಯಲ್ಲಿರೋ ಮರಡಿ ಬಸವೇಶ್ವರ ‌ದೇವಸ್ಥಾನ, ಮೈಸೂರಿನ ಶಿವರಾಂಪೇಟೆಯಲ್ಲಿರುವ ಆಂಜನೇಯ ದೇಗುಲ, ಗದಗನಲ್ಲಿ ಸುಮಾರು 16 ದೇವಸ್ಥಾನ, ಯಾದಗಿರಿ ನಗರದ ಬಸವೇಶ್ವರ ಮಂದಿರ, ಚಿಕ್ಕಮಗಳೂರು ನಗರದ ಕೊಂಗನಾಟಮ್ಮ ದೇವಸ್ಥಾನ, ಧಾರವಾಡದ ಧಾರವಾಡದ ಕಾಕರ ಮಸೀದಿ ಬಳಿಯ ರಾಮ ಮಂದಿರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ದೇವಸ್ಥಾನಗಳಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಸುಪ್ರಭಾತ, ಭಕ್ತಿ ಗೀತೆ ಹಾಗೂ ವಿದ್ಯುತ್ ಚಾಲಿತ ವಾದ್ಯ ಮೊಳಗಿಸಿ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯ ಪ್ರಸಿದ್ಧ ಸಿದ್ಧಾರೂಢ ಮಠದಲ್ಲಿ ಬೆಳಗಿನ ಜಾವ ಸೋಮವಾರದ ವಿಶೇಷ ಪೂಜೆಯ ಜೊತೆಗೆ ಓಂ ನಮಃ ಶಿವಾಯ ಮಂತ್ರಘೋಷ, ಭಜನೆ, ಘಂಟಾ ವಾದ್ಯ ಮೊಳಗಿದೆ.

ಇದನ್ನು ಓದಿ : ಮಸೀದಿಗಳ ಮೈಕ್ ತೆರವು ಆಂದೋಲನ: ನಾಳೆಯಿಂದ ದೇಗುಲಗಳಲ್ಲಿ ಹನುಮಾನ್ ಚಾಲೀಸ್ ಪಠಣ

ಸೋಮವಾರ ಬ್ರಾಹ್ಮೀ ಮುಹೂರ್ತದಲ್ಲಿ ಸಿದ್ಧಾರೂಢರಿಗೆ ವಿಶೇಷ ಪೂಜೆ ನಡೆಯುವುದು ವಾಡಿಕೆ. ಇದರ ಜೊತೆಗೆ ಶ್ರೀರಾಮಸೇನೆ ಕರೆಕೊಟ್ಟಿರುವ ಸುಪ್ರಭಾತ ಅಭಿಯಾನಕ್ಕೆ ಸಿದ್ಧಾರೂಢ ಮಠದ ಆಡಳಿತ ಮಂಡಳಿ ಬೆಂಬಲ ನೀಡಿತ್ತು. ಹೀಗಾಗಿ ನೂರಾರು ಭಕ್ತರಿಂದ ವಿಶೇಷ ಪೂಜೆ ಜೊತೆಗೆ ಭಜನೆ ನಡೆಯಿತು.

ಮೈಸೂರಿನಲ್ಲಿ ಸುಪ್ರಭಾತ ಪಠಣ ಮಾಡಿದ ಬಳಿಕ ಮಾತನಾಡಿದ ಮುತಾಲಿಕ್, ಸುಪ್ರಭಾತ ಪಠಣದಿಂದ ಜನಸಾಮಾನ್ಯರಿಗೆ ಕಿರಿಕಿರಿಯಾಗಲ್ಲ. ಕಿರಿಕಿರಿ ಆಗುತ್ತಿರುವುದು ಮಸೀದಿಯ ಧ್ವನಿ ವರ್ಧಕದ ಮೂಲಕ. ಹೀಗಾಗಿಯೇ ಅವರಿಗೆ ಧ್ವನಿವರ್ಧಕದ ಮೂಲಕವೇ‌ ಉತ್ತರ ಕೊಡುತ್ತೇವೆ ಎಂದು ತಿಳಿಸಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಅಲ್ಲದೇ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮಾದರಿಯಲ್ಲಿ ಮೈಕ್ ನಿಷೇಧಿಸಬೇಕು. ಸುಪ್ರಿಂಕೋರ್ಟ್ ಆದೇಶವನ್ನು ರಾಜ್ಯ ಸರ್ಕಾರವೂ ಪಾಲಿಸಬೇಕು. ಸರ್ಕಾರ ದೇವಾಲಯಗಳಿಗೆ ನೋಟೀಸ್ ಕೊಟ್ಟರೆ ನಾವು ಎಲ್ಲಾ ಜಿಲ್ಲಾಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೇ ಕೇಸ್ ಹಾಕ್ತೀವಿ ಎಂದರು.

Copyright © All rights reserved Newsnap | Newsever by AF themes.
error: Content is protected !!