November 23, 2024

Newsnap Kannada

The World at your finger tips!

hanuman temeple

ಮಸೀದಿಗಳ ಮೈಕ್ ತೆರವು ಆಂದೋಲನ: ನಾಳೆಯಿಂದ ದೇಗುಲಗಳಲ್ಲಿ ಹನುಮಾನ್ ಚಾಲೀಸ್ ಪಠಣ

Spread the love

ನಾಳೆಯಿಂದ ಮೈಕ್ ವರ್ಸಸ್ ಹನುಮಾನ್ ಚಾಲೀಸಾ ದಂಗಲ್ ಜೋರಾಗಲಿದ್ದು, ಮತ್ತೊಂದು ಆಯಾಮದಲ್ಲಿ ಧರ್ಮ ಸಂಘರ್ಷ ಆರಂಭವಾಗಲಿದೆ .

ಇದನ್ನು ಓದಿ : ಸಂದೇಶ್ ನಾಗರಾಜ್, ವರ್ತೂರು, ಮಧ್ವರಾಜ್ ಸೇರಿ ಒಟ್ಟು 7 ನಾಯಕರು ಬಿಜೆಪಿಗೆ ಸೇರ್ಪಡೆ

ಈ ಮೂಲಕ ರಾಜ್ಯದಲ್ಲಿ ಆಜಾನ್ ಗಲಾಟೆ ತಾರಕಕ್ಕೇರಿದೆ. ಆಜಾನ್ ಕೂಗಿಗೆ ಟಾಂಗ್ ನೀಡುವ ನಿಟ್ಟಿನಲ್ಲಿ ಮೇ 9 (ನಾಳೆಯಿಂದ) ಬೆಳಗ್ಗೆ 5 ಹಿಂದೂ ದೇವಾಲಯಗಳಲ್ಲಿ, ಮಠಗಳಲ್ಲಿ ಹನುಮಾನ್ ಚಾಲೀಸಾ, ಭಜನೆ ಹಾಗೂ ಸುಪ್ರಭಾತವನ್ನು, ಮೈಕ್ ಮೂಲಕ ಪಠಿಸುವ ಆಂದೋಲನಕ್ಕೆ ಶ್ರೀರಾಮ ಸೇನೆ ಸಿದ್ದತೆ ಮಾಡಿಕೊಂಡಿದೆ

ಆಜಾನ್ ವಿರುದ್ಧ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸಾ ಹಾಗೂ ಭಕ್ತಿಗೀತೆ ಮೊಳಗಿಸುವ ಅಭಿಯಾನಕ್ಕೆ ಧಾರವಾಡದಲ್ಲಿ ಬೆಂಬಲ ವ್ಯಕ್ತವಾಗಿದೆ.

ಧಾರವಾಡ ನಗರದ ಲೈನ್ ಬಜಾರ್ ಹನುಮಾನ್ ದೇವಸ್ಥಾನ, ನಗರದ ತುಳಜಾ ಭವಾನಿ ದೇವಸ್ಥಾನ, ಶಿವಾಲಯ, ದತ್ತಾತ್ರೇಯ ದೇವಸ್ಥಾನ ಸೇರಿ ಹಲವು ದೇವಸ್ಥಾನ ಕಮಿಟಿಯವರು ನಿರ್ಧರಿಸಿದ್ದಾರೆ.

ಇದನ್ನು ಓದಿ : ಶೀಘ್ರವೇ ಕರ್ನಾಟಕದಿಂದ ವಾರಾಣಸಿಗೆ ವಿಶೇಷ ರೈಲು : ಸಚಿವೆ ಶಶಿಕಲಾ ಜೊಲ್ಲೆ

ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯ ಪ್ರಮುಖ ದೇವಸ್ಥಾನ ಮತ್ತು ಮಠಗಳಿಗೆ ಭೇಟಿ ನೀಡಿದ ಶ್ರೀರಾಮಸೇನೆ ಸದಸ್ಯರು ಬೆಳಗ್ಗಿನ ಜಾವ ದೇವಸ್ಥಾನ ಮತ್ತು ಮಠದ ಮೈಕ್‍ನಲ್ಲಿ ಸುಪ್ರಭಾತ, ಹನುಮಾನ್ ಚಾಲೀಸಾ, ಭಕ್ತಿಗೀತೆಗಳನ್ನು ಹಾಕುವಂತೆ ಮನವಿ ಪತ್ರ ನೀಡುತ್ತಿದ್ದಾರೆ.

ಹಾಸನದಲ್ಲೂ ಅಭಿಯಾನಕ್ಕೆ ಕೈ ಜೋಡಿಸಲಿದ್ದು, ಪ್ರತಿನಿತ್ಯ ಮೈಕ್ ಮೂಲಕ ಭಜನೆ ಮಾಡುವುದಾಗಿ ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಜಾನೆಕೆರೆ ಹೇಮಂತ್ ತಿಳಿಸಿದರು.

ಉಡುಪಿಯಲ್ಲೂ ಆಜಾನ್ ವರ್ಸಸ್ ಹನುಮಾನ್ ಚಾಲೀಸಾಗೆ ಬೆಂಬಲ ಸೂಚಿಸಲಾಗಿದೆ.

ಇದನ್ನು ಓದಿ : ಸೆಲ್ಫಿ ತೆಗೆದುಕೊಳ್ಳುವ ವೇಳೆ ಗಂಡನ ಎದುರೇ ಕಪಿಲಾ ನದಿ ನೀರು ಪಾಲಾದ ಪತ್ನಿ ಕವಿತಾ

ನಾಳೆಯಿಂದ ಮೈಕ್ ವರ್ಸಸ್ ಹನುಮಾನ್ ಚಾಲೀಸಾ ದಂಗಲ್ ಜೋರಾಗಲಿದ್ದು, ಮತ್ತೊಂದು ಆಯಾಮದಲ್ಲಿ ಧರ್ಮ ಸಂಘರ್ಷಕ್ಕೆ ನಾಂದಿ ಹಾಡಲಿದೆ.

ಮಸೀದಿ ಮಸೀದಿ

Copyright © All rights reserved Newsnap | Newsever by AF themes.
error: Content is protected !!