December 25, 2024

Newsnap Kannada

The World at your finger tips!

me too

ಮೀಟೂ ಖ್ಯಾತಿಯ ನಟಿ ತನುಶ್ರೀ ಕಾರು ಅಪಘಾತ – ನಟಿ ಕಾಲಿಗೆ ಗಾಯ : ಪ್ರಾಣಾಪಾಯದಿಂದ ಪಾರು

Spread the love

ಮೀಟೂ ಪ್ರಕರಣದ ನಂತರ ದೇಶದಾದ್ಯಂತ ಸುದ್ದಿಯಲ್ಲಿದ್ದ ಬಾಲಿವುಡ್ ತಾರೆ ತನುಶ್ರೀ ದತ್ತಾ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ. ಅವರ ಕಾಲಿಗೆ ಗಾಯಗಳಾಗಿವೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

https://www.instagram.com/p/CdEFjH1jGW5/?igshid=YmMyMTA2M2Y=

ನಟಿ ತನುಶ್ರೀ ಉಜ್ಜಯಿನಿಯ ಮಹಾಕಾಲ್ ದೇವಸ್ಥಾನಕ್ಕೆ ಹೊರಟಿದ್ದರು. ಮಾರ್ಗ ಮಧ್ಯೆ ಕಾರಿನ ಬ್ರೇಕ್ ಫೇಲ್ ಆಗಿದೆ. ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಕಾರು ಅಪಘಾತಕ್ಕೀಡಾಗಿದೆ.

me too1

ಅವರ ಕಾಲಿಗೆ ಅನೇಕ ಗಾಯಗಳು ಆಗಿವೆ. ಆದರೂ, ದತ್ತಾ ದೇವರ ದರ್ಶನವನ್ನು ತಪ್ಪಿಸಿಲ್ಲ. ಆ ನೋವಿನಲ್ಲೇ ದೇವರ ದರ್ಶನ ಪಡೆದಿದ್ದಾರಂತೆ.

ಮಹಾಕಲ್ ದೇವಸ್ಥಾನಕ್ಕೆ ಹೋಗುವುದು ನನ್ನ ಸಂಕಲ್ಪವಾಗಿತ್ತು. ಹೀಗಾಗಿ ಕಾರು ಅಪಘಾತವಾದರೂ, ನಾನು ದೇವರ ದರ್ಶನವನ್ನು ತಪ್ಪಿಸಲಿಲ್ಲ. ನೋವಿನಿಂದ ಕೂಡಿದ ಕಾಲುಗಳಿಂದಲೇ ದೇವಸ್ಥಾನಕ್ಕೆ ಹೋದೆ. ದೇವರ ದರ್ಶನ ಮಾಡಿದೆ ಎಂದಿದ್ದಾರೆ.

ಆ ದೇವರ ಅನುಗ್ರಹದಿಂದಾಗಿ ನನಗೆ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅವರು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!