January 5, 2025

Newsnap Kannada

The World at your finger tips!

PDO KANKPURA

ಇ-ಖಾತೆಯಲ್ಲಿ ಅಕ್ರಮ: ಕನಕಪುರ ಪಿಡಿಒ ರವಿ ಆತ್ಮಹತ್ಯೆ

Spread the love

ಇ ಖಾತೆಯಲ್ಲಿ ಅಕ್ರಮ ಮಾಡಿದ ಆರೋಪದ ಮೇಲೆ ಕೆಲಸದಿಂದ ಅಮಾನತುಗೊಂಡ ಕನಕಪುರ ತಾಲೂಕು ಬೈರಮಂಗಲ ಗ್ರಾಮ ಪಂಚಾಯಿತಿ ಪಿಡಿಒ ರವಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಅಕ್ರಮವಾಗಿ ಇ-ಖಾತೆ ಮಾಡಿದ ಆರೋಪ ಪಿಡಿಒ ರವಿ ವಿರುದ್ಧ ಕೇಳಿಬಂದಿತ್ತು.

ಯಲಹಂಕ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಹಿನ್ನೆಲೆ ರವಿ ಅವರನ್ನು ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ ಅವರು ಕೆಲಸದಿಂದ ಅಮಾನತು ಮಾಡಿದ್ದರು.

ಹೀಗಾಗಿ ಮನನೊಂದ ರವಿ ಹಾರೋಹಳ್ಳಿಯ ಕೊಳ್ಳಗಂಡನಹಳ್ಳಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Copyright © All rights reserved Newsnap | Newsever by AF themes.
error: Content is protected !!