ನವೆಂಬರ್‌ನಲ್ಲಿ ರಫೇಲ್ ಯುದ್ಧ ವಿಮಾನಗಳ ಮತ್ತೊಂದು ಬ್ಯಾಚ್ ಬರಲಿದೆ. ರಫೇಲ್ ವಿಮಾನಗಳನ್ನು ಭಾರತಕ್ಕೆ ಹಸ್ತಾಂತರಿಸಲು ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ಸಂಸ್ಥೆ ಎಲ್ಲ ತಯಾರಿಯನ್ನೂ ಮಾಡಿಕೊಂಡಿದೆ.
ಎರಡನೇ ಬ್ಯಾಚ್ ವಿಮಾನಗಳ ಸ್ವೀಕಾರ ಸಿದ್ಧತೆಗೆ ಪ್ರಾಜೆಕ್ಟ್ನ ಅಸಿಸ್ಟೆಂಟ್ ಚೀಫ್ ಆಫ್ ಏರ್ ಸ್ಟಾಫ್ ನೇತೃತ್ವದ ಪರಿಣತರ ತಂಡ ಫ್ರಾನ್ಸ್ಗೆ ತೆರಳಿದೆ ಎಂದು ಮೂಲಗಳು ಹೇಳಿವೆ.
ಭಾರತಕ್ಕೆ ಡಸಾಲ್ಟ್ ಏವಿಯೇಷನ್ ರಫೇಲ್ ವಿಮಾನಗಳ ಮೊದಲ ಬ್ಯಾಚನ್ನು ಜುಲೈ 29 ರಂದು ಕಳುಹಿಸಿ ಕೊಟ್ಟಿತ್ತು. ಆ ವಿಮಾನಗಳನ್ನು ಅಂಬಾಲ ವಾಯುನೆಲೆಗೆ ಸೆಪ್ಟೆಂಬರ್ 10ರಂದು ಸೇರ್ಪಡೆ ಮಾಡಲಾಗಿತ್ತು.
ಈಗಾಗಲೇ ವಾಯುಪಡೆಯ ಪೈಲಟ್‌ಗಳಿಗೆ ರಫೇಲ್ ವಿಮಾನಗಳ ಕುರಿತು ಫ್ರಾನ್ಸ್‌ನ ಸೇಂಟ್ ಡಿಝಿಯೆರ್ ವಾಯುನೆಲೆಯಲ್ಲಿ ತರಬೇತಿ ಒದಗಿಸಲಾಗುತ್ತಿದೆ. ಒಟ್ಟು 36 ರಫೇಲ್ ಯುದ್ಧ ವಿಮಾನಗಳನ್ನು ಭಾರತವು ಆಮದು ಮಾಡಿಕೊಳ್ಳುತ್ತಿದೆ. ಇದಕ್ಕೆ 59,000 ಕೋಟಿ ವೆಚ್ಛವಾಗಿದೆ. ಮೊದಲ ಬ್ಯಾಚ್‌ನಲ್ಲಿ ಡಸಾಲ್ಟ್ ಏವಿಯೇಷನ್ ಸಂಸ್ಥೆ 5 ವಿಮಾನಗಳನ್ನು ಕಳುಹಿಸಿಕೊಟ್ಟಿತ್ತು.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ