February 21, 2026

Newsnap Kannada

The World at your finger tips!

crime,murder,women

ಕಣ್ಣಾ ಮುಚ್ಚಾಲೆ ಆಟ ಆಡುವಾಗ ದುರಂತ: ಐಸ್​ಕ್ರೀಂ ಬಾಕ್ಸ್​ ಒಳಗೆ ಲಾಕ್​ ಆಗಿ ಇಬ್ಬರು ಮಕ್ಕಳು ಸಾವು

Spread the love

ಕಣ್ಣಾ ಮುಚ್ಚಾಲೆ ಆಡುತ್ತಿದ್ದ ವೇಳೆ ಬಾಲಕಿಯರಿಬ್ಬರು ಸಾವನ್ನಪ್ಪಿದ ದಾರುಣ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಮಸಗೆ ಗ್ರಾಮದಲ್ಲಿ ಜರುಗಿದೆ.

ಮಸಗೆ ಗ್ರಾಮದ ನಾಗರಾಜು ಮತ್ತು ಚಿಕ್ಕದೇವಮ್ಮ ಎಂಬುವವರ ಪುತ್ರಿ ಭಾಗ್ಯ (12) ಹಾಗೂ ರಾಜನಾಯಕ ಮತ್ತು ಗೌರಮ್ಮ ಎಂಬುವವರ ಕಾವ್ಯಾ (7) ಮೃತ ದುರ್ದೈವಿಗಳು.

ಕಣ್ಣಾ ಮುಚ್ಚಾಲೆ ಆಟ ಆಡುವಾಗ ಐಸ್ ಕ್ರೀಮ್ ಬಾಕ್ಸ್​ನಲ್ಲಿ ಬಾಲಕಿಯರು ಅವಿತು ಕುಳಿತಿದ್ದು, ಬಾಕ್ಸ್​ ಲಾಕ್​ ಆದ ಬೆನ್ನಲೇ ಒಳಗೆ ಸಿಲುಕಿಕೊಂಡಿದ್ದಾರೆ.

ಕೊನೆಗೆ ಐಸ್​ ಕ್ರೀಮ್​ ಬಾಕ್ಸ್ ಬಾಗಿಲು ತೆರೆಯಲಾಗದೆ ಅಲ್ಲಿಯೇ ಉಸಿರು ಗಟ್ಟಿ ಬಾಲಕಿಯರು ಸಾವನ್ನಪ್ಪಿದ್ದಾರೆ.

ಈ ಪ್ರಕರಣದಲ್ಲಿಯಾವುದೇ ದೂರು ದಾಖಲಿಸದೇ ಮೃತ ಬಾಲಕಿಯರಿಬ್ಬರ ಶವ ಸಂಸ್ಕಾರ ನಡೆಸಲಾಗಿದೆ.

error: Content is protected !!